AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನ: ಬಾಕ್ಸಿಂಗ್ ಮನೆತನದಿಂದ ಬಂದ ಜಾಸ್ಮಿನ್ ಬಗ್ಗೆ ನಿಮಗೆಷ್ಟು ಗೊತ್ತು?

ವಿಶ್ವ ಬಾಕ್ಸಿಂಗ್ ರಿಂಗ್ ನಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದೆ.ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ 2025ರಲ್ಲಿ ಹರ್ಯಾಣದ ಜಾಸ್ಮಿನ್ ಲಂಬೋರಿಯಾ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್​ ನಲ್ಲಿ ಇದೇ ಮೊದಲ ಬಾರಿಗೆ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ​ಮೊದಲ ಬಾರಿಗೆ ವಿಶ್ವ ಬಾಕ್ಸಿಂಗ್ ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಗಟ್ಟಿಗಿತ್ತಿ ಜಾಸ್ಮಿನ್ ಯಾರು ಎನ್ನುವುದನ್ನು ತಿಳಿದುಕೊಳ್ಳಿ.

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನ: ಬಾಕ್ಸಿಂಗ್ ಮನೆತನದಿಂದ ಬಂದ ಜಾಸ್ಮಿನ್ ಬಗ್ಗೆ ನಿಮಗೆಷ್ಟು ಗೊತ್ತು?
Jaismine Lamboria
ರಮೇಶ್ ಬಿ. ಜವಳಗೇರಾ
|

Updated on: Sep 14, 2025 | 10:20 PM

Share

2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಲ್ಲಿ (World Boxing Championships 2025) ಬಾಕ್ಸಿಂಗ್ ಪಟು ಜಾಸ್ಮಿನ್ ಲಂಬೋರಿಯಾ (Jaismine Lamboria) ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ನ ಲಿವರ್‌ಪೂಲ್‌ನಲ್ಲಿ ನಡೆದ 2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮಹಿಳೆಯರ 57 ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್ ನ ಜೂಲಿಯಾ ಸ್ಜೆರೆಮೆಟಾ ಅವರನ್ನು 4-1 ಅಂಕಗಳಿಂದ ಸೋಲಿಸಿ ಭಾರತದ ಜಾಸ್ಮಿನ್ ಲಂಬೋರಿಯಾ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

ಸೆಮಿಫೈನಲ್ ನಲ್ಲಿ ಜಾಸ್ಮಿನ್ ಅವರು 5-0 ಅಂತರದಿಂದ ವೆನೆಜುವೆಲಾದ ಒಮೈಲಿನ್ ಅಲ್ಕಾಲಾ ಅವರನ್ನು ಮಣಿಸಿ ಫೈನಲ್​ ಸುತ್ತಿಗೆ ಪ್ರವೇಶಿಸಿದ್ದರು. ಇನ್ನು ಫೈನಲ್​ ನಲ್ಲಿ 2024ರ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪೋಲೆಂಡ್ ನ ಜೂಲಿಯಾ ಸ್ಜೆರೆಮೆಟಾ ಅವರನ್ನ 4-1 ಅಂತರಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್​ ನಲ್ಲಿ ಇದೇ ಮೊದಲ ಬಾರಿಗೆ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ​

ಯಾರು ಈ ಜಾಸ್ಮಿನ್ ಲಂಬೋರಿಯಾ?

ಬಾಕ್ಸಿಂಗ್ ಮನೆತನದಿಂದಲೇ ಬಂದ ಯುವತಿ ಜಾಸ್ಮಿನ್ ಲಂಬೂರಿಯ. ಹರ್ಯಾಣದ ಭಿವಾನಿಯಲ್ಲಿ ಜನಿಸಿದ ಅವರಿಗೆ ಬಾಕ್ಸಿಂಗ್ ರಕ್ತಗತವಾಗಿಯೇ ಒಲಿದಿದೆ ಎಂದೇ ಹೇಳಬೇಕು. ಅವರ ಕುಟುಂಬದಲ್ಲಿ ಹಲವರು ಬಾಕ್ಸರ್‌ಗಳಿದ್ದಾರೆ. ಅವರು ಚಿಕ್ಕ ವಯಸ್ಸಿನಿಂದಲೇ ಬಾಕ್ಸಿಂಗ್ ಕಲಿಯಲು ಪ್ರಾರಂಭಿಸಿದ್ದು, ನಿರಂತರ ಪರಿಶ್ರಮದಿಂದ ಇದೀಗ ಅವರು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಅವರ ಮುತ್ತಾತ ಹೆವಿವೇಯ್ಟ್ ಬಾಕ್ಸರ್ ಆಗಿದ್ದವರು. ಅವರ ತಾತ ಕ್ಯಾಪ್ಟನ್ ಚಂದರ್ ಭಾನ್ ಲಂಬೋರಿಯಾ ಕುಸ್ತಿಪಟು ಆಗಿದ್ದರು. ಇನ್ನು ಜಾಸ್ಮಿನ್ ಅವರ ಚಿಕ್ಕಪ್ಪಂದಿರಾದ ಸಂದೀಪ್ ಮತ್ತು ಪರ್ವಿಂದರ್ ಇಬ್ಬರೂ ಬಾಕ್ಸಿಂಗ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಗಳಾಗಿದ್ದರು. ಅವರಿಂದಲೇ ಜಾಸ್ಮಿನ್ ಸಹ ಬಾಕ್ಸಿಂಗ್ ರಿಂಗ್​​ ಗೆ ಇಳಿದರು.

ಜಾಸ್ಮಿನ್ ಅವರು ಈ ಹಿಂದೆ ಹಲವು ಪದಕಗಳನ್ನು ಗೆದ್ದಿದ್ದಾರೆ. 2021 ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ನಲ್ಲಿ ಮೊದಲ ಪದಕ ಗೆದ್ದು ಗಮನ ಸೆಳೆದಿದ್ದಾರೆ. ಅಲ್ಲಿ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಅದೇ ರೀತಿ 2022 ರ ಬರ್ಮಿಂಗ್ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಸಹ ಕಂಚಿನ ಪದಕ ಗೆದ್ದಿದ್ದರು. ಆದರೆ ಕಳೆದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೇಗನೇ ಸೋತು ಹೊರಬಿದ್ದಿದ್ದರು. ಆದ್ರೆ, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ 2025ರಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

Follow Us