AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2022: ಸೋತ ಬೆನ್ನಲ್ಲೇ ರೆಫರಿ ಮೇಲೆ ಹಲ್ಲೆ ಮಾಡಿದ ಕುಸ್ತಿಪಟು ಸತೇಂದರ್ ಮಲಿಕ್

Satender Malik: ಈ ಘಟನೆಯ ವೇಳೆ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷನ್ ಶರಣ್ ಸಿಂಗ್‌ ಕೂಡ ಹಾಜರಿದ್ದರು. ಹೀಗಾಗಿ ಸತೇಂದರ್‌ ಮಲಿಕ್ ಅವರ ನಡೆಯ ವಿರುದ್ದ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

CWG 2022: ಸೋತ ಬೆನ್ನಲ್ಲೇ ರೆಫರಿ ಮೇಲೆ ಹಲ್ಲೆ ಮಾಡಿದ ಕುಸ್ತಿಪಟು ಸತೇಂದರ್ ಮಲಿಕ್
Wrestler Satender Malik
TV9 Web
| Edited By: |

Updated on:Jul 21, 2022 | 5:31 PM

Share

CWG Trials: ಕಾಮನ್‌ವೆಲ್ತ್ ಟ್ರಯಲ್ಸ್‌ನಲ್ಲಿ 125 ಕೆಜಿ ವಿಭಾಗದ ಫೈನಲ್‌ನಲ್ಲಿ ಸೋತ ನಂತರ ರೆಫರಿ ಜಗ್ಬೀರ್ ಸಿಂಗ್ ಅವರ ಮೇಲೆ ಕುಸ್ತಿಪಟು ಸತೇಂದರ್ ಮಲಿಕ್ (Wrestler Satender Malik) ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸತೇಂದರ್‌ ಮಲಿಕ್ ಅವರಿಗೆ ರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಆಜೀವ ನಿಷೇಧ ಹೇರಿದೆ. ಈ ಪಂದ್ಯದಲ್ಲಿ ಏರ್‌ಫೋರ್ಸ್‌ ತಂಡದ ಸತ್ಯೆಂದರ್‌ ಮಲಿಕ್ ಹಾಗೂ ಮೋಹಿತ್ ಮುಖಾಮುಖಿಯಾಗಿದ್ದರು. ಪಂದ್ಯವು ಕೊನೆಗೊಳ್ಳಲು 18 ಸೆಕೆಂಡುಗಳಿರುವಾಗ 3-0 ಯಿಂದ ಮುನ್ನಡೆಯಲ್ಲಿದ್ದರು. ಈ ಹಂತದಲ್ಲಿ ‘ಟೇಕ್‌ಡೌನ್’ ನಡೆ ಪ್ರಯೋಗಿಸಿದ ಮೋಹಿತ್‌, ಸತೇಂದರ್​ ಅವರನ್ನು ಮ್ಯಾಟ್‌ನಿಂದ ಹೊರಕ್ಕೆ ದೂಡಿದರು. ಆದರೆ ಪಂದ್ಯದ ರೆಫರಿ ವೀರೇಂದ್ರ ಮಲಿಕ್‌ ಟೇಕ್‌ಡೌನ್‌ಗೆ ಮಾತ್ರ ಎರಡು ಪಾಯಿಂಟ್‌ ನೀಡಿದ್ದರು. ಇದಾಗ್ಯೂ ಹೊರದೂಡಿದ್ದಕ್ಕೆ ಪಾಯಿಂಟ್‌ ನೀಡಿರಲಿಲ್ಲ.

ಈ ವೇಳೆ ಮೋಹಿತ್ ಹೆಚ್ಚುವರಿ ಪಾಯಿಂಟ್‌ಗಾಗಿ ಮೇಲ್ಮನವಿ ಸಲ್ಲಿಸಿದರು. ಈ ವೇಳೆ ಸೀನಿಯರ್ ರೆಫರಿ ಆಗಿದ್ದ ಜಗ್ಬೀರ್ ಸಿಂಗ್ ಅವರು ಟಿವಿ ಮರುಪರಿಶೀಲನೆಗೆ ಸೂಚಿಸಿದರು. ಅಲ್ಲದೆ ಮರುಪರಿಶೀಲನೆ ವೇಳೆ ಹೊರದೂಡಿದಕ್ಕೆ ಹೆಚ್ಚುವರಿ ಪಾಯಿಂಟ್ಸ್ ನೀಡಬೇಕಾಗಿರುವುದು ಕಂಡು ಬಂತು. ಅದರಂತೆ ಮೋಹಿತ್‌ ಅವರಿಗೆ ಮೂರು ಪಾಯಿಂಟ್ಸ್ ನೀಡಲಾಯಿತು.

ಈ ವೇಳೆ ಬೌಟ್‌ 3-3 ರಿಂದ ಸಮಬಲವಾಯಿತು. ಅಷ್ಟೇ ಅಲ್ಲದೆ ಬೌಟ್‌ನ ಕೊನೆಯ ಪಾಯಿಂಟ್‌ ಮೋಹಿತ್ ಗಳಿಸಿದ್ದರಿಂದ ಅವರನ್ನೇ ವಿಜಯಿ ಎಂದು ಘೋಷಿಸಲಾಯಿತು. ಇದರಿಂದ ಸಂಯಮ ಕಳೆದುಕೊಂಡ ಸತೇಂದರ್ ಸೀನಿಯರ್ ರೆಫರಿ ಜಗ್ಬೀರ್ ಸಿಂಗ್ ಅವರನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಬಳಿಕ ಕಪಾಳಕ್ಕೆ ಹೊಡೆಯುವ ದೈಹಿಕ ಹಲ್ಲೆ ನಡೆಸಿದರು. ಇತ್ತ ಅನಿರೀಕ್ಷಿತ ಹಲ್ಲೆಯಿಂದಾಗಿ ರೆಫರಿ ನೆಲಕ್ಕುರುಳಿದರು. ಅಷ್ಟರಲ್ಲಾಗಲೇ ಆಯೋಜಕರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇದನ್ನೂ ಓದಿ
Image
IPL 2022: ಎಬಿಡಿ, ಕ್ರಿಸ್ ಗೇಲ್​ಗೆ RCB ಯ ಹಾಲ್ ಆಫ್ ಫೇಮ್ ಗೌರವ
Image
IPL 2022: ಇಬ್ಬರು ಯುವ ಆಟಗಾರರ ಪ್ರದರ್ಶನಕ್ಕೆ ಗಂಗೂಲಿ ಫಿದಾ..!
Image
Virat Kohli: ಕಳಪೆ ಫಾರ್ಮ್​ ನಡುವೆಯೂ 2 ದಾಖಲೆ ಬರೆದ ಕಿಂಗ್ ಕೊಹ್ಲಿ
Image
IPL 2022: RCB ತಂಡದ ಸೋಲಿಗೆ ಇವರಿಬ್ಬರೇ ಕಾರಣ..!

ಈ ಘಟನೆಯ ವೇಳೆ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷನ್ ಶರಣ್ ಸಿಂಗ್‌ ಕೂಡ ಹಾಜರಿದ್ದರು. ಹೀಗಾಗಿ ಸತೇಂದರ್‌ ಮಲಿಕ್ ಅವರ ನಡೆಯ ವಿರುದ್ದ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅದರಂತೆ ರಾಷ್ಟ್ರೀಯ ಕುಸ್ತಿ ಫೆಡರೇಷನ್‌ ಇದೀಗ ಸತೇಂದರ್ ಮಲಿಕ್ ಅವರಿಗೆ ಆಜೀವ ನಿಷೇಧ ಹೇರಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:28 pm, Tue, 17 May 22

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ