AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ಬಾರಿ ವೃದ್ಧಿಮಾನ್ ಸಹಾ ಕೊರೊನಾ ವರದಿ ಪಾಸಿಟಿವ್; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ಗೆ ಅಲಭ್ಯ?

ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರ ಎರಡನೇ ಕೋವಿಡ್ ಫಲಿತಾಂಶವೂ ಪಾಸಿಟಿವ್ ಆಗಿದೆ.

ಎರಡನೇ ಬಾರಿ ವೃದ್ಧಿಮಾನ್ ಸಹಾ ಕೊರೊನಾ ವರದಿ ಪಾಸಿಟಿವ್; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ಗೆ ಅಲಭ್ಯ?
ವೃದ್ಧಿಮಾನ್ ಸಹಾ
ಪೃಥ್ವಿಶಂಕರ
|

Updated on: May 14, 2021 | 5:51 PM

Share

ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರ ಎರಡನೇ ಕೋವಿಡ್ ಫಲಿತಾಂಶವೂ ಪಾಸಿಟಿವ್ ಆಗಿದೆ. ಐಪಿಎಲ್ ಸಮಯದಲ್ಲಿ ಭಾರತೀಯ ಟೆಸ್ಟ್ ಬ್ಯಾಟ್ಸ್‌ಮನ್‌ಗೆ ಕೊರೊನಾ ಸೋಂಕು ತಗುಲಿತು, ನಂತರ ಅವರು ಕ್ವಾರಂಟೈನ್​ಲ್ಲಿದ್ದರು. ಕೊರೊನಾ ಪ್ರಕರಣಗಳು ಬೆಳಕಿಗೆ ಬಂದ ನಂತರ ಮೇ 4 ರಂದು ಐಪಿಎಲ್ ಮುಂದೂಡಲು ನಿರ್ಧರಿಸಲಾಗಿದೆ. ಆ ಸಮಯದಲ್ಲಿ ಸೋಂಕಿಗೆ ಒಳಗಾದ ಆಟಗಾರರಲ್ಲಿ ಸಹಾ ಕೂಡ ಇದ್ದರು.

ಐಪಿಎಲ್ 2021 ರ ಸಮಯದಲ್ಲಿ ಕೋವಿಡ್ -19 ತುತ್ತಾದ ಸಹಾ, ಆರಂಭಿಕ ದಿನಗಳಲ್ಲಿ ತನಗೆ ತುಂಬಾ ಭಯವಾಯಿತು ಎಂದು ಹೇಳಿದರು. ಅವರ ಕುಟುಂಬವೂ ಆತಂಕಕ್ಕೊಳಗಾಯಿತು, ಆದರೆ ಸಹಾ ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಿದ್ದರೂ ಸಹ ಕೊರೊನಾದಿಂದ ಮುಕ್ತರಾಗಲು ಸಹಾಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಟೀಮ್ ಇಂಡಿಯಾದ ತೊಂದರೆಗಳೂ ಸಹ ಹೆಚ್ಚುತ್ತಿವೆ.

ಸಹಾಗೆ ಯಾವುದೇ ದೈಹಿಕ ಸಮಸ್ಯೆಗಳಿಲ್ಲ ಆದರೆ, ಒಳ್ಳೆಯ ವಿಷಯವೆನೆಂದರೆ, ಸಹಾ ಅವರ ಸ್ಥಿತಿ ಗಂಭೀರವಾಗಿಲ್ಲ. ಸಹಾ ಅವರ ದೇಹದಲ್ಲಿ ಈಗ ಕೋವಿಡ್ -19 ಸೋಂಕು ಇಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ಅನುಭವಿಸಿದ ನೋವು, ಜ್ವರ ಮತ್ತು ಕೆಮ್ಮಿನಿಂದ ಅವರು ಚೇತರಿಸಿಕೊಂಡಿದ್ದಾರೆ. ಮೇ ಮೊದಲ ದಿನದ ಅಭ್ಯಾಸದ ನಂತರ ನಾನು ದಣಿದಿದ್ದೇನೆ ಎಂದು ಸಹಾ ಹೇಳಿದರು. ಅವರಿಗೆ ಶೀತ ಮತ್ತು ಕೆಮ್ಮು ಕೂಡ ಇತ್ತು.

ಅದೇ ದಿನ ಅವರು ತಂಡದ ವೈದ್ಯರಿಗೆ ಮಾಹಿತಿ ನೀಡಿದರು ಮತ್ತು ನಂತರ ಅವರನ್ನು ಯಾವುದೇ ವಿಳಂಬವಿಲ್ಲದೆ ಪ್ರತ್ಯೇಕವಾಗಿರಲು ವ್ಯವಸ್ಥೆ ಮಾಡಲಾಯಿತು. ಅವರ ಕೊರೊನಾ ಪರೀಕ್ಷೆಯನ್ನು ಅದೇ ದಿನ ನಡೆಸಲಾಗಿತ್ತು. ಅಂದು ಅವರ ಕೊರೊನಾ ವರದಿ ಪಾಸಿಟಿವ್ ಎಂದು ಕಂಡುಬಂದಿತ್ತು. ಪ್ರತ್ಯೇಕತೆಯಿಂದ ಹೊರಬರಲು ಅವರಿಗೆ ಅವಕಾಶವಿಲ್ಲದಿದ್ದರೂ ಮರುದಿನ ನಡೆಸಿದ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಆಗಿತ್ತು. ಆದರೆ ಇದರ ನಂತರ, ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಮೂರು ದಿನಗಳ ನಂತರ, ಅವರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫಲಿತಾಂಶವು ಪಾಸಿಟಿವ್ ಆದ ಕಾರಣ, ಸಹಾ ದೆಹಲಿಯಲ್ಲಿ ಕ್ವಾರಂಟೈನ್​ ಅನ್ನು ಮುಂದುವರಿಸಬೇಕಾಗುತ್ತದೆ ಮತ್ತು ಅವರ ಪರೀಕ್ಷೆಯ ಫಲಿತಾಂಶವು ನೆಗೆಟಿವ್ ಆದಾಗ ಮಾತ್ರ ವೈದ್ಯರು ಅವರನ್ನು ಕ್ವಾರಂಟೈನ್​ನಿಂದ ಬಿಡುಗಡೆ ಮಾಡುತ್ತಾರೆ. ಸಹಾ ಇತ್ತೀಚೆಗೆ ಬಿಸಿಸಿಐ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದ ತಂಡದ ಒಂದು ಭಾಗವಾಗಿದ್ದಾರೆ. ಆದಾಗ್ಯೂ, ಕರೊನಾ ಪಾಸಿಟಿವ್ ಆಗಿರುವುದು ಈಗ ಅವರ ಫಿಟ್‌ನೆಸ್‌ನ ಆಧಾರದ ಮೇಲೆ ತಂಡದಲ್ಲಿ ಅವರ ಸ್ಥಾನವನ್ನು ಖಚಿತಪಡಿಸುತ್ತದೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ