OnePlus 10R 5G: ಭಾರತದಲ್ಲಿ ಬರೋಬ್ಬರಿ 150W ಫಾಸ್ಟ್​ ಚಾರ್ಜರ್​ನ ಒನ್‌ಪ್ಲಸ್‌ 10R ಫೋನ್ ರಿಲೀಸ್: ಬೆಲೆ ಎಷ್ಟು?

OnePlus 10R 5G: ಭಾರತದಲ್ಲಿ ಬರೋಬ್ಬರಿ 150W ಫಾಸ್ಟ್​ ಚಾರ್ಜರ್​ನ ಒನ್‌ಪ್ಲಸ್‌ 10R ಫೋನ್ ರಿಲೀಸ್: ಬೆಲೆ ಎಷ್ಟು?
OnePlus 10R 5G

150W SuperVOOC fast charging: ಒನ್‌ಪ್ಲಸ್‌ 10ಆರ್ (OnePlus 10R) ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅನಾವರಣಗೊಂಡಿದ್ದು, ಇದು ಬರೋಬ್ಬರಿ 150W SuperVOOC ವೇಗದ ಚಾರ್ಜಿಂಗ್​ನೊಂದಿಗೆ ಬಿಡುಗಡೆ ಆಗಿದೆ. ಜೊತೆಗೆ 80W SuperVOOC ಚಾರ್ಜಿಂಗ್‌ ಆವೃತ್ತಿಯಲ್ಲಿ ಪರಿಚಯಿಸಲಾಗಿದೆ.

TV9kannada Web Team

| Edited By: Vinay Bhat

Apr 29, 2022 | 1:45 PM

ಪ್ರಸಿದ್ಧ ಒನ್​ಪ್ಲಸ್ ಕಂಪನಿ ಭಾರತದಲ್ಲಿ ತಿಂಗಳಿಗೆ ಒಂದರಂತೆ ಹೊಸ ಹೊಸ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಕಳೆದ ತಿಂಗಳು ದೇಶದಲ್ಲಿ ಬಿಡುಗಡೆ ಮಾಡಿದ್ದ ಬಹುನಿರೀಕ್ಷಿತ ಒನ್​ಪ್ಲಸ್ 10 ಪ್ರೊ 5ಜಿ (OnePlus 10 Pro 5G) ಸ್ಮಾರ್ಟ್​​ಫೋನ್ ಈಗ ಖರೀದಿಗೆ ಸಿಗುತ್ತಿದ್ದು ಧೂಳೆಬ್ಬಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಿದೆ. ಅದುವೇ ಒನ್‌ಪ್ಲಸ್‌ 10ಆರ್ (OnePlus 10R). ಈ ಸ್ಮಾರ್ಟ್‌ಫೋನ್‌ ಇದೀಗ ಭಾರತದಲ್ಲಿ ಅನಾವರಣಗೊಂಡಿದ್ದು, ಇದು ಬರೋಬ್ಬರಿ 150W SuperVOOC ವೇಗದ ಚಾರ್ಜಿಂಗ್​ನೊಂದಿಗೆ ಬಿಡುಗಡೆ ಆಗಿದೆ. ಜೊತೆಗೆ 80W SuperVOOC ಚಾರ್ಜಿಂಗ್‌ ಆವೃತ್ತಿಯಲ್ಲಿ ಪರಿಚಯಿಸಲಾಗಿದೆ. ಹಾಗಾದ್ರೆ ಈ ಬೊಂಬಾಟ್ ಸ್ಮಾರ್ಟ್​​ಫೋನ್​​ನ ಬೆಲೆ ಎಷ್ಟು?, ಇದರ ಫೀಚರ್ಸ್​​ ಹೇಗಿದೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಭಾರತದಲ್ಲಿ ಒನ್‌ಪ್ಲಸ್‌ 10R 5G 80W SuperVOOC ಚಾರ್ಜಿಂಗ್‌ ಮಾದರಿಯ ಸ್ಮಾರ್ಟ್‌ಫೋನಿನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 38,999 ರೂ. ನಿಗದಿ ಮಾಡಲಾಗಿದೆ. ಹಾಗೆಯೇ 12GB RAM ಮತ್ತು 256GB ರೂಪಾಂತರದ ಬೆಲೆ 42,999 ರೂ. ಇನ್ನು ಒನ್‌ಪ್ಲಸ್‌ 10R 5G ಎಂಡ್ಯೂರೆನ್ಸ್ ಆವೃತ್ತಿಯ ಮಾದರಿ 12GB RAM + 256GB ಕಾನ್ಫಿಗರೇಶನ್‌ ಬೆಲೆ 43,999 ರೂ. ಆಗಿದೆ. ಇದರಲ್ಲಿ 80W ಚಾರ್ಜಿಂಗ್‌ ಆಯ್ಕೆಯ ಫೋನ್‌ ಫಾರೆಸ್ಟ್ ಗ್ರೀನ್ ಮತ್ತು ಸಿಯೆರಾ ಬ್ಲಾಕ್ ಬಣ್ಣಗಳಲ್ಲಿ ಬರಲಿದೆ. ಆದರೆ 150W ಚಾರ್ಜಿಂಗ್ ಹೊಂದಿರುವ ಫೋನ್‌ ಸಿಯೆರಾ ಬ್ಲ್ಯಾಕ್‌ ಬಣ್ಣದಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್​​ಫೋನ್ ಮೇ 4 ರಿಂದ ಅಮೆಜಾನ್, ಒನ್​ಪ್ಲಸ್ ಸ್ಟೋರ್, ಒನ್​ಪ್ಲಸ್ ಆ್ಯಪ್ ಮೂಲಕ ಖರೀದಿಗೆ ಸಿಗಲಿದೆ.

ಏನು ವಿಶೇಷತೆ?:

ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ 1,080×2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7-ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇದು 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 720Hz ಟಚ್ ರೆಸ್ಪಾನ್ಸ್ ರೇಟ್‌ ಅನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್‌ ನೀಡಲಾಗಿದ್ದು ಆಂಡ್ರಾಯ್ಡ್ 12 ಆಧಾರಿತ OxygenOS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಪ್ರೊಸೆಸರ್‌ 20% ಸುಧಾರಿತ GPU ಕಾರ್ಯಕ್ಷಮತೆ, 25% ಸುಧಾರಿತ ವಿದ್ಯುತ್ ದಕ್ಷತೆ ಮತ್ತು 80% ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ GC02M1 ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಇದರಲ್ಲಿ ಅತ್ಯುತ್ತಮ ಕ್ಯಾಮೆರಾ ಕ್ವಾಲಿಟಿ ನೀಡಲಾಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL S5K3P9 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

ಒನ್‌ಪ್ಲಸ್‌ 10R 5G ಸ್ಮಾರ್ಟ್‌ಫೋನ್‌ ಎಂಡ್ಯೂರೆನ್ಸ್ ಆವೃತ್ತಿಯ ಮಾದರಿ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 150W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆ ಸೇರಿಸಲಾಗಿದೆ.

OnePlus Nord CE 2 Lite 5G: ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್ ಬಿಡುಗಡೆ: ಖರೀದಿಸಲು ಕ್ಯೂ ಗ್ಯಾರಂಟಿ

Galaxy M53 5G: 108MP ಕ್ಯಾಮೆರಾದ ಗ್ಯಾಲಕ್ಸಿ M53 5G ಸ್ಮಾರ್ಟ್​​ಫೋನ್ ಖರೀದಿಸಬಹುದೇ?: ಇಲ್ಲಿದೆ ಉತ್ತರ

Follow us on

Related Stories

Most Read Stories

Click on your DTH Provider to Add TV9 Kannada