Innovation : ಕಾಡುಪ್ರಾಣಿಗಳ ದಾಳಿಗೆ ಅಂಕುಶ ‘ಕಟಿಧಾನ್’ ಆವಿಷ್ಕಾರ

Solar : ಇದೊಂದು ಸೌರಶಕ್ತಿ ಆಧಾರಿತ ಉತ್ಪನ್ನವಾಗಿದ್ದು ಸಣ್ಣ ಮತ್ತು ಮಧ್ಯಮ ರೈತರು ಉಪಯೋಗ ಮಾಡುವ ರೀತಿಯಲ್ಲಿ ರಚಿಸಲಾಗಿದೆ. ಇದರಲ್ಲಿ ಎಲ್‍ಇಡಿ ಲೈಟ್​ಗಳೂ ಇರುತ್ತವೆ.  ರಾತ್ರಿ ಪೂರ್ತಿ ಇದು ಫ್ಲಾಶ್ ಆಗುತ್ತಿರುತ್ತದೆ. ಪ್ರಾಣಿಗಳ ಕಣ್ಣುಗಳಂತೆ ಭಾಸವಾಗುವುದರಿಂದ ಹಂದಿಗಳು, ಆನೆಗಳು, ಹುಲಿ, ಚಿರತೆ ಮುಂತಾದ ಪ್ರಾಣಿಗಳು ತಮ್ಮಂತೆಯೇ ಇನ್ನೊಂದು ಪ್ರಾಣಿ ಅಲ್ಲಿದೆ ಎಂದು ಭಾವಿಸಿ ಅಲ್ಲಿಂದ ಹಿಂದೆ ಸರಿಯುತ್ತವೆ.

Innovation : ಕಾಡುಪ್ರಾಣಿಗಳ ದಾಳಿಗೆ ಅಂಕುಶ ‘ಕಟಿಧಾನ್’ ಆವಿಷ್ಕಾರ
ಕಾಡುಪ್ರಾಣಿಗಳನ್ನು ಓಡಿಸಲು ಅಳವಡಿಸಿರುವ ಸೌರಚಾಲಿಯ ಯಂತ್ರಗಳು
Follow us
ಶ್ರೀದೇವಿ ಕಳಸದ
|

Updated on:May 30, 2021 | 1:07 PM

ಈಗಾಗಲೇ ಓಡಿಶಾ, ಅಸ್ಸಾಂ, ಕರ್ನಾಟಕ, ಆಂಧ್ರಪ್ರದೇಶ, ಮಣಿಪುರ, ಮೇಘಾಲಯ, ಮಹಾರಾಷ್ಟ್ರ ಸೇರಿದಂತೆ ದೇಶದ 10ಕ್ಕೂ ಅಧಿಕ ರಾಜ್ಯಗಳ ಹೊಲಗದ್ದೆಗಳಲ್ಲಿ ಕಾಡುಪ್ರಾಣಿಗಳ ದಾಳಿಯನ್ನು ತಪ್ಪಿಸಲು ‘ಕಟಿಧಾನ್’ ಸೌರಚಾಲಿತ ಸಾಧನಗಳನ್ನು ಸ್ಥಾಪಿಸಲಾಗಿದ್ದು ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಬೆಳೆಯಲ್ಲಿ ಶೇ.40ರಷ್ಟು ಲಾಭ ಸಿಗಲು ಸಹಾಯವಾಗುತ್ತಿದ್ದೆ. ದೇಶಾದ್ಯಂತ 500ಕ್ಕೂ ಹೆಚ್ಚು ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ಈಗ ನಾವು ಮಹಾರಾಷ್ಟ್ರ ಮತ್ತು ಲಡಾಖ್ ರಾಜ್ಯಗಳ ಅರಣ್ಯ ಇಲಾಖೆಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಒಪ್ಪಂದಮಾಡಿಕೊಂಡು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ’  -ರಾಕೇಶ್ ಪವಾರ್, ‘ಕಟಿಧಾನ್’ ಮುಖ್ಯಸ್ಥರು

ಗ್ರಾಮೀಣ ಪ್ರದೇಶದ ರೈತ ಸದಾ ಒಂದಿಲ್ಲೊಂದು ಸಮಸ್ಯೆಯಲ್ಲಿ ಬಳಲುತ್ತಲೇ ಇರುತ್ತಾನೆ. ಮಳೆಯ ಅನಿಶ್ಚಿತತೆ ಒಂದಾದರೆ ಕಾಡುಪ್ರಾಣಿಗಳ ಹಾವಳಿ ಮತ್ತೊಂದೆಡೆ. ಹಂದಿ, ಆನೆ, ಕರಡಿಗಳಿಂದಾಗಿ ಬೆಳೆದ ಬೆಳೆಯೆಲ್ಲ ನಾಶವಾಗುತ್ತದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಪ್ರಾಣಿಗಳ ಬಾಯಿಗೆ ತುತ್ತಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಸಾಕಷ್ಟು ತಂತ್ರಜ್ಞಾನ ಬಂದಿದೆ. ಪ್ರಾಣಿಗಳನ್ನು ಓಡಿಸುವ, ಹಿಮ್ಮೆಟ್ಟಿಸುವ ತಂತ್ರಜ್ಞಾನಗಳು ನಮ್ಮಲ್ಲಿ ಸಾಕಷ್ಟು ಬಳಕೆಯಾಗಿವೆ. ಆದರೆ ಅವೆಲ್ಲ ತಾತ್ಕಾಲಿಕ ಪ್ರಯತ್ನವಾಗಿ ಅವುಗಳಿಗೆ ಪ್ರಾಣಿಗಳು ಹೇಗೋ ಒಗ್ಗಿಕೊಂಡು ಮತ್ತೆ ಎಂದಿನಂತೆ ತಮ್ಮ ದಾಳಿಗಳನ್ನು ಮುಂದುವರಿಸಿಕೊಂಡೇ ಬರುತ್ತಿವೆ.

ಈಗ ಇಂಥದ್ದೇ ಒಂದು ಪರಿಕಲ್ಪನೆಯನ್ನಿಟ್ಟುಕೊಂಡು ಬೆಂಗಳೂರಿನ ಯುವ ಇಂಜನಿಯರ್ ತಂಡವೊಂದು ಭಾರತದ ರೈತನ ಬೆಂಬಲಕ್ಕೆ ನಿಂತಿದೆ. ಕಟಿಧಾನ್ ಎಂಬ ಹೆಸರಿನ ಈ ಸ್ಟಾರ್ಟ್‍ಅಪ್ ತಂಡ ಕಾಡು ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಮತ್ತು ರೈತರಿಗೂ ಅನುಕೂಲಕರವಾಗುವ ರೀತಿಯಲ್ಲಿ ಕಾಡು ಪ್ರಾಣಿಗಳನ್ನು ದೂರವಿರಿಸಲು ನವೀನ ಸುಸ್ಥಿರ ತಾಂತ್ರಿಕ ಪರಿಹಾರಗಳನ್ನು ಆವಿಷ್ಕರಿಸಿದೆ. ಇದರಿಂದಾಗಿ ವನ್ಯಪ್ರಾಣಿಗಳ ದಾಳಿಯಿಂದ ರೈತರು ಎದುರಿಸುತ್ತಿರುವ ದೊಡ್ಡ ಪ್ರಮಾಣದ ಸಮಸ್ಯೆಗಳನ್ನೂ ಮತ್ತು ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಬೆಂಗಳೂರಿನ 5 ಇಂಜನಿಯರ್​ಗಳು ಪ್ರಾರಂಭಿಸಿದ ಈ ಕಟಿಧಾನ್ ಸಂಸ್ಥೆಯ ಆವಿಷ್ಕಾರಗಳು ಕರ್ನಾಟಕ ಸರ್ಕಾರದ ಎಲಿವೇಟ್, ಸ್ಟಾರ್ಟ್‍ಅಪ್ ಇಂಡಿಯಾದ ಎಐಸಿ, ಐಐಎಂಬಿ ಎನ್‍ಎಸ್‍ಆರ್‍ಸಿಇಎಲ್ ಮತ್ತು ಇತರ ಶುದ್ಧ ಶಕ್ತಿಯ ವೇದಿಕೆಗಳಲ್ಲಿ ಗುರುತಿಸಲ್ಪಟ್ಟಿದ್ದು, ಕಳೆದ ನಾಲ್ಕು ವರ್ಷಗಳಿಂದ ರೈತರ ಪರವಾಗಿ ತಂತ್ರಜ್ಞಾನದ ಸಂಬಂಧಿಸಿದ ಕೆಲಸ ಮಾಡುತ್ತ ಬಂದಿದೆ.

ಭಾರತದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ವಾರ್ಷಿಕ 4000 ಕೋಟಿ ಬೆಳೆ ನಷ್ಟವಾಗುತ್ತದೆಂದು ಅಂದಾಜಿಸಲಾಗಿದೆ. ಇದರಿಂದಾಗಿ ರೈತರಿಗೆ ಶೇ.40ರಷ್ಟು ಆದಾಯವನ್ನು ಕಡಿಮೆ ಮಾಡುತ್ತದೆ. ಈ ನಷ್ಟವನ್ನು ಹೋಗಲಾಡಿಸಲು ನಮ್ಮ ರೈತರು ಪ್ರತಿಯಾಗಿ ವಿದ್ಯುದೀಕರಣದ ಸಾಧನಗಳನ್ನು, ಕ್ರ್ಯಾಕರ್ ಬಾಂಬುಗಳನ್ನು, ಮತ್ತು ಪ್ರಾಣಿಗಳಿಗೆ ಹಿಂಸೆ ನೀಡುವಂತಹ ಇತರ ಹಿಂಸಾತ್ಮಕ ಸಾಧನಗಳನ್ನು ಅಳವಡಿಸಿಕೊಂಡು ಕಾಡು ಪ್ರಾಣಿಗಳ ನಾಶಕ್ಕೆ ಕಾರಣವಾಗುತ್ತಿದ್ದಾರೆ.  ಇದರಿಂದ ಸಮಸ್ಯೆಗಳು ಇನ್ನಷ್ಟು ಹೆಚ್ಚಾಯಿತೇ ಹೊರತು ಪರಿಹಾರ ಕಾಣಲಿಲ್ಲ. ರೈತರಿಗೆ ಸಮಸ್ಯೆ ತಪ್ಪಲಿಲ್ಲ.

ಇದನ್ನೆಲ್ಲ ಮನಗಂಡ ಕಟಿಧಾನ್ ಸಂಸ್ಥೆಯು, ಎನ್‍ಐಎಎಸ್, ಐಐಎಸ್ಸಿಯ ಹಲವಾರು ವಿಜ್ಞಾನಿಗಳೊಂದಿಗೆ ಚರ್ಚಿಸಿ, ಕೃಷಿಯಲ್ಲಿ ತಮ್ಮ ಆವಿಷ್ಕಾರಗಳ ಕುರಿತು ಚರ್ಚಿಸಿ, ಕೆಲವು ಪರೀಕ್ಷೆಗಳನ್ನೂ ಮಾಡಿದ ನಂತರ ಸೌರಶಕ್ತಿ ಚಾಲಿತ ಬೆಳಕು ಮತ್ತು ಜೈವಿಕ ಧ್ವನಿಗಳನ್ನು ಅಳವಡಿಸಿದ ವ್ಯವಸ್ಥೆಗಳನ್ನು ಪ್ರಾರಂಭಿಸಿತು. ಇದು ಆನೆಗಳು, ಕಾಡು ಹಂದಿ, ನೀಲಗಾಯ್, ಚಿರತೆ, ಹುಲಿ ಮುಂತಾದವುಗಳು ಕೃಷಿ ಪ್ರದೇಶಗಳಿಗೆ ಬಾರದಂತೆ ತಡೆಯವಲ್ಲಿ ಯಶಸ್ವಿಯಾಗಿವೆ. ಅದೇ ಸಮಯದಲ್ಲಿ ಇವು ಕಾಡುಪ್ರಾಣಿಗಳಿಗೂ ಯಾವುದೇ ರೀತಿಯ ಹಾನಿಯುಂಟು ಮಾಡುವುದಿಲ್ಲ.

ಈಗಾಗಲೇ ಪರಬ್ರಕ್ಷ್ ಮತ್ತು ಕಪಿಕಾಟ್ ಎಂಬ ಎರಡು ರೀತಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಪರಬ್ರಕ್ಷ್ ದೊಡ್ಡ ಕಾಡುಪ್ರಾಣಿಗಳಾದ ಹುಲಿ, ಚಿರತೆ ಆನೆ ಮುಂತಾದವುಗಳನ್ನು ಓಡಿಸುವ ಉಪಕರಣವಾಗಿದ್ದು ಇದು ಇದರಲ್ಲಿ ತಮ್ಮದೇ ರೀತಿಯ ಇನ್ನೊಂದು ಪ್ರಾಣಿ ಇದೆಯೆಂಬುದು ಅವಕ್ಕೆ ಗೋಚರವಾಗಿ ಅಲ್ಲಿಂದ ಓಡುತ್ತವೆ. ಇದೊಂದು ಸೌರಶಕ್ತಿ ಆಧಾರಿತ ಉತ್ಪನ್ನವಾಗಿದ್ದು ಸಣ್ಣ ಮತ್ತು ಮಧ್ಯಮ ರೈತರು ಉಪಯೋಗ ಮಾಡುವರೀತಿ ರಚಿಸಲಾಗಿದೆ. ಇದರಲ್ಲಿ ಎಲ್‍ಇಡಿ ಲೈಟ್​ಗಳೂ ಇರುತ್ತವೆ.  ರಾತ್ರಿ ಪೂರ್ತಿ ಇದು ಫ್ಲಾಶ್ ಆಗುತ್ತಿರುತ್ತದೆ. ಪ್ರಾಣಿಗಳ ಕಣ್ಣುಗಳಂತೆ ಭಾಸವಾಗುತ್ತದೆ. ಇದರಿಂದ ಹಂದಿಗಳು, ಆನೆಗಳು, ಹುಲಿ, ಚಿರತೆ ಮುಂತಾದ ಪ್ರಾಣಿಗಳು ತಮ್ಮಂತೆಯೇ ಇನ್ನೊಂದು ಪ್ರಾಣಿ ಅಲ್ಲಿದೆ ಎಂದು ಭಾವಿಸಿ ಅಲ್ಲಿಂದ ಹಿಂದೆ ಸರಿಯುತ್ತವೆ. ಇವು ರಾತ್ರಿ ಪೂರ್ತಿ ಇದು ಕೆಲಸ ಮಾಡಿ, ಬೆಳಗ್ಗೆ ತನ್ನಿಂದತಾನೇ ಬಂದ್ ಆಗುತ್ತದೆ. ಇದರಿಂದ ರೈತರಿಗೆ ಸಮಸ್ಯೆ ಇಲ್ಲ, ಪ್ರಾಣಿಗಳಿಗೂ ಹಾನಿಯಾಗಲ್ಲ, ಕರ್ನಾಟಕದಲ್ಲಿ ಮೈಸೂರು, ಕೊಡಗು, ಎಚ್.ಡಿ.ಕೋಟೆ, ಸರಬೂರು ಮುಂತಾದಕಡೆಗಳಲ್ಲಿ ಮಾಡಿದ್ದೇವೆ ಎಂದೂ ವಿವರಿಸುತ್ತಾರೆ ರಾಕೇಶ್.

ಕೋತಿಗಳಿಗೆ ವಿಶೇಷವಾಗಿ ಶಬ್ದ ಬರುವಂತಹ ಸೌರಚಾಲಿತ ಉಪಕರಣವನ್ನು ರಚಿಸಲಾಗಿದೆ. ಈ ಎರಡೂ ಸಾಧನಗಳನ್ನು ಯಾವುದೇ ಕೃಷಿಭೂಮಿಯಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ಅಳವಡಿಸಬಹುದಾಗಿದೆ. ಈ ಉತ್ಪನ್ನಗಳನ್ನು ದೇಶಾದ್ಯಂತ ಅಳವಡಿಸಲಾಗಿದ್ದು ವಿಶೇಷವಾಗಿ ಆನೆ, ಚಿರತೆ ಮುಂತಾದ ದೊಡ್ಡ ಪ್ರಾಣಿಗಳನ್ನು ಓಡಿಸಬಲ್ಲ ಸಾಮಥ್ರ್ಯಉಳ್ಳಂತಹ ಪರಬ್ರಕ್ಷ್ ಸಾಧನಕ್ಕೆ ವ್ಯಾಪಕವಾದ ಬೇಡಿಕೆ ಬರುತ್ತಿದೆ.

ಇದನ್ನ ಓದಿ : ಕನಕಪುರದಲ್ಲಿ ಮುಂದುವರಿದ ಕಾಡುಪ್ರಾಣಿಗಳ ಬೇಟೆ..ಪೊಲೀಸರಿಂದ ಹದ್ದಿನ ಕಣ್ಣು

Published On - 12:59 pm, Sun, 30 May 21

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ