Elections
ಚುನಾವಣೆ ಎನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ. ಇದರಲ್ಲಿ, ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ, ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ. ಚುನಾವಣೆ ಅಂದರೆ ಕೇವಲ ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆ ಮಾತ್ರ ಅಲ್ಲ. ಖಾಸಗಿ ಮತ್ತು ವ್ಯಾಪಾರದ ಸಂಘಟನೆಗಳಲ್ಲಿ, ಕ್ಲಬ್‌ಗಳಿಂದ ಹಿಡಿದು ಸ್ವಯಂ ಸೇವಾ ಸಂಘಟನೆ ಮತ್ತು ಪಾಲಿಕೆಗಳಲ್ಲೂ ಸಹ ಈ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ.
ಪ್ರಾಚೀನ ರೋಮ್‌ನಲ್ಲಿ ಮತ್ತು ಮಧ್ಯಕಾಲೀನ ಯುಗದ ಪೂರ್ತಿ ಹೋಲಿ ರೋಮನ್ ಎಂಪರರ್ ಹಾಗು ದಿ ಪೋಪ್ ಅವರಂಥ ಆಳುವವರನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ಬಳಸಲಾಗುತ್ತಿತ್ತು. 17ನೇ ಶತಮಾನದ ಆರಂಭದವರೆಗೂ, ಉತ್ತರ ಅಮೇರಿಕಾದಲ್ಲಿ ಮತ್ತು ಯುರೋಪಿ ನಲ್ಲಿ ಪ್ರತಿನಿಧಿ ಸರ್ಕಾರದ ಆಲೋಚನೆ ಆಗುವವರೆಗೂ ಸರಕಾರಿ ಅಧಿಕಾರಿಗಳನ್ನೊಳಗೊಂಡ ಇಂದಿನಂತಹ ಆಧುನಿಕ ಸಾರ್ವಜನಿಕ ಚುನಾವಣೆಗಳ ಆಲೋಚನೆ ಮೂಡಿರಲಿಲ್ಲ. ಅನೇಕ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಗಳಲ್ಲಿ,ಸಾರ್ವಜನಿಕ ಆಡಳಿತದ ಹಲವು ಹಂತಗಳಿಗೆ ಅಥವಾ ಭೌಗೋಳಿಕ ವ್ಯಾಪ್ತಿಗೆ ತಾಳೆಯಾಗುವಂತೆ ವಿವಿಧ ಶೈಲಿಯ ಚುನಾವಣೆಗಳಿವೆ. ಕೆಲವು ಸಾಮಾನ್ಯ ಶೈಲಿಯ ಚುನಾವಣೆ ಎಂದರೆ ಅಧ್ಯಕ್ಷೀಯ ಚುನಾವಣೆ, ಸಾರ್ವತ್ರಿಕ ಚುನಾವಣೆ, ಪ್ರಾಥಮಿಕ ಚುನಾವಣೆ, ಮರು ಚುನಾವಣೆ, ಸ್ಥಳೀಯ ಚುನಾವಣೆ.
ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದು; ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ನಾಳೆ ಉಪವಾಸ ಸತ್ಯಾಗ್ರಹ
ರಾಜ್ಯಸಭಾ ಚುನಾವಣೆಯ ಮಧ್ಯೆ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ರದ್ದಾದ ನಂತರ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷವು ಆಕ್ರೋಶಗೊಂಡಿದೆ. ಸಂಸದ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಜಿತು ಪಟ್ವಾರಿ ಬಿಜೆಪಿ ಸೀಟು ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಪಟ್ವಾರಿ, ಕೆಲವೇ ದಿನಗಳ ಹಿಂದೆ ಬಿಜೆಪಿ ಮಹಿಳಾ ಮೀಸಲಾತಿದಾರನಂತೆ ನಟಿಸಿತ್ತು. ಈಗ ಮಹಿಳಾ ಅಭ್ಯರ್ಥಿಯನ್ನು ತುಳಿಯಲು ನಾಟಕವನ್ನಾಡುತ್ತಿದೆ ಎಂದು ಹೇಳಿದ್ದಾರೆ. ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಚುನಾವಣಾ ಆಯೋಗದ ಕಚೇರಿಯೆದುರು ಪ್ರತಿಭಟನೆ ನಡೆಸಿದೆ.
- Sushma Chakre
- Updated on: Jun 9, 2026
- 10:13 pm
ಕಾಂಗ್ರೆಸ್ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ
ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ಇದರಿಂದ ಚುನಾವಣೆಗೂ ಮೊದಲೇ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಗಿದೆ. ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಬಯಸಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ಮಧ್ಯಪ್ರದೇಶದ ಭೋಪಾಲ್ ಚುನಾವಣಾಧಿಕಾರಿಯಿಂದ ತಿರಸ್ಕೃತಗೊಂಡಿದೆ. ಮೀನಾಕ್ಷಿ ಅವರ ನಾಮಪತ್ರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.
- Sushma Chakre
- Updated on: Jun 9, 2026
- 7:38 pm
ರಾಜ್ಯಸಭೆ ಚುನಾವಣೆ ನಾಮಪತ್ರಕ್ಕೆ ನಾಳೆ ಕೊನೆ ದಿನ: ಅಭ್ಯರ್ಥಿಯನ್ನ ಅಂತಿಮಗೊಳಿಸದ ಬಿಜೆಪಿ, ಜೆಡಿಎಸ್; ಇಂದು ಘೋಷಣೆ ಸಾಧ್ಯತೆ
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಹೆಚ್.ಡಿ. ದೇವೇಗೌಡ ಸ್ಪರ್ಧೆ ಮೇಲೆ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ನಿಲ್ಲಿಸಬೇಕೇ ಎಂಬುದು ನಿರ್ಧಾರವಾಗಲಿದೆ. ಸದ್ಯ ಸದಾನಂದ ಗೌಡ, ಸುಮಲತಾ, ಶ್ರುತಿ, ಮಂಜುಳಾ ಸೇರಿದಂತೆ ಹಲವು ನಾಯಕರ ಹೆಸರು ರೇಸ್‌ನಲ್ಲಿವೆ. ಇಂದು ಮಧ್ಯಾಹ್ನದ ಬಳಿಕ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ.
- Kiran Haniyadka
- Updated on: Jun 7, 2026
- 11:21 am
ಹಿಮಾಚಲ ಸ್ಥಳೀಯ ಸಂಸ್ಥೆ ಚುನಾವಣೆ; ಆಡಳಿತಾರೂಢ ಕಾಂಗ್ರೆಸ್ಗೆ ಆಘಾತ; ಬಿಜೆಪಿ ಗೆಲುವಿನ ಕೇಕೆ
BJP victory in Himachal Local Body elections: ಹಿಮಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಪ್ರಮುಖ ಮೂರು ಮಹಾನಗರ ಪಾಲಿಕೆಗಳ (Municipal Corporations) ಚುನಾವಣೆಯಲ್ಲಿ ವಿರೋಧ ಪಕ್ಷವಾದ ಬಿಜೆಪಿ ಭರ್ಜರಿ ಜಯ ಸಾಧಿಸುವ ಮೂಲಕ ಗದ್ದುಗೆ ಹಿಡಿದಿದೆ. ಮೇ 31, 2026 ರಂದು ಹೊರಬಿದ್ದಿರುವ ಈ ಮಹತ್ವದ ಚುನಾವಣಾ ಫಲಿತಾಂಶದ ವಿವರ ಇಲ್ಲಿದೆ.
- Vijaya Sarathy SN
- Updated on: May 31, 2026
- 7:10 pm
Tamil Nadu Cabinet Expansion: ತಮಿಳುನಾಡು ಸರ್ಕಾರದ ಸಂಪುಟ ವಿಸ್ತರಣೆ, ವಿಜಯ್ ಸಂಪುಟ ಸೇರಿದ 23 ಶಾಸಕರು, ಕಾಂಗ್ರೆಸ್ ಶಾಸಕರಿಗೂ ಸಚಿವ ಸ್ಥಾನ
ತಮಿಳುನಾಡು ರಾಜಕೀಯದಲ್ಲಿ ಇಂದು ಅತ್ಯಂತ ಐತಿಹಾಸಿಕ ಹಾಗೂ ಮಹತ್ವದ ತಿರುವು ಸಿಕ್ಕಿದೆ. ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು ಧೂಳೆಬ್ಬಿಸಿರುವ ಮುಖ್ಯಮಂತ್ರಿ ವಿಜಯ್ (TVK ಪಕ್ಷ) ತಮ್ಮ ಮೊದಲ ಪ್ರಮುಖ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಮೈತ್ರಿ ಸರ್ಕಾರದ ಈ ನೂತನ ರಾಜಕೀಯ ಬೆಳವಣಿಗೆಯ ವಿವರ ಇಲ್ಲಿದೆ.
- Nayana Rajeev
- Updated on: May 21, 2026
- 11:14 am
ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ
JPC on One Nation One Election: ಒಂದು ರಾಷ್ಟ್ರ ಒಂದು ಚುನಾವಣೆ ವ್ಯವಸ್ಥೆಯಿಂದ ದೇಶಕ್ಕೆ 7 ಲಕ್ಷ ಕೋಟಿ ರೂ. ಉಳಿತಾಯವಾಗಲಿದ್ದು, ಜಿಡಿಪಿ ಶೇ. 1.6ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಜಂಟಿ ಸಂಸದೀಯ ಸಮಿತಿ (JPC) ಅನಿಸಿಕೆ ವ್ಯಕ್ತಪಡಿಸಿದೆ. ಈ ಸುಧಾರಣೆಯಿಂದ ಆಡಳಿತದ ಕ್ಷಮತೆ ಸುಧಾರಿಸಿ, ಸರ್ಕಾರದ ಯೋಜನೆಗಳು ಜನರನ್ನು ಪರಿಣಾಮಕಾರಿಯಾಗಿ ತಲುಪುತ್ತವೆ. ಸಮಿತಿಯ ವರದಿ ಪ್ರಕಾರ, ಲೋಕಸಭೆ, ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದು ಆರ್ಥಿಕತೆಗೂ ಉತ್ತೇಜನ ಸಿಗಲಿದೆ.
- Vijaya Sarathy SN
- Updated on: May 20, 2026
- 4:43 pm
ಇನ್ನೂ ನಿಗೂಢವಾಗಿಯೇ ಇದೆ ಕೇರಳಂ ಸಿಎಂ ಹೆಸರು; ನಾಳೆ ಕಾಂಗ್ರೆಸ್ನಿಂದ ಅಧಿಕೃತ ಘೋಷಣೆ
ಕೇರಳದ ಚುನಾವಣಾ ಫಲಿತಾಂಶ ಹೊರಬಿದ್ದು 9 ದಿನಗಳು ಕಳೆದಿವೆ. ಯುಡಿಎಫ್ ಬಹುಮತ ಪಡೆದಿದ್ದರೂ ಕಾಂಗ್ರೆಸ್ ಇನ್ನೂ ಸಿಎಂ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಿಲ್ಲ. ವಿಧಾನಸಭಾ ಚುನಾವಣೆ ನಡೆದ ಬೇರೆ ರಾಜ್ಯಗಳಲ್ಲಿ ನೂತನ ಸರ್ಕಾರ ರಚನೆಯಾಗಿದ್ದರೂ ಕೇರಳಂನಲ್ಲಿ ಮಾತ್ರ ಇನ್ನೂ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಒಮ್ಮತದ ಅಭಿಪ್ರಾಯಕ್ಕೆ ಬರಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಎಂ ಯಾರಾಗಲಿದ್ದಾರೆ ಎಂಬುದು ಅಂತಿಮವಾಗಿದೆ ಎನ್ನಲಾಗುತ್ತಿದೆ. ನಾಳೆ ಕೇರಳಂ ನೂತನ ಸಿಎಂ ಹೆಸರು ಘೋಷಣೆಯಾಗಲಿದೆ.
- Sushma Chakre
- Updated on: May 13, 2026
- 8:48 pm
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್-ಮಾಜಿ ಮುಖ್ಯಮಂತ್ರಿ ಸ್ಟಾಲಿನ್ ಭೇಟಿ
ವಿಧಾನಸಭೆ ಪ್ರಮಾಣ ವಚನ ಸ್ವೀಕಾರದ ನಂತರ ತಮಿಳುನಾಡು ಸಿಎಂ ವಿಜಯ್ ಅವರು ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದಾರೆ. ಇದು ಭಾರೀ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಯನ್ನು ಸ್ಟಾಲಿನ್ ಮತ್ತು ಅವರ ಮಗ ಉದಯನಿಧಿ ಸ್ಟಾಲಿನ್ ಅವರು ಆತ್ಮೀಯ ಸ್ವಾಗತದೊಂದಿಗೆ ಸ್ವಾಗತಿಸಿದರು. ಏಪ್ರಿಲ್ 23ರ ಚುನಾವಣೆಗೆ ಮುಂಚಿತವಾಗಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಡಿಎಂಕೆ ತೀವ್ರ ಚುನಾವಣಾ ಸ್ಪರ್ಧೆಯಲ್ಲಿ ತೊಡಗಿತ್ತು. ವಿಜಯ್ ಕೂಡ ಡಿಎಂಕೆ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸಿದ್ದರು.
- Sushma Chakre
- Updated on: May 11, 2026
- 5:09 pm
ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ?
Vijay's Entry & Rahul Gandhi's Missed Political Opportunities: ರಾಜಕೀಯವು ಒಂದು ರೀತಿಯ ಚದುರಂಗದಾಟದಂತೆ. ಒಂದು ನಡೆಯು ಪಂದ್ಯ ಸೋಲುವಂತೆ ಮಾಡಬಹುದು, ಅಥವಾ ಗೆಲ್ಲಿಸಬಹುದು. ಆಂಧ್ರ, ಅಸ್ಸಾಮ್ ಮತ್ತು ತಮಿಳುನಾಡಿನಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮಾಡಿದ ಕೆಲ ತಪ್ಪುಗಳು ಆ ರಾಜ್ಯದಲ್ಲಿ ಅಧಿಕಾರ ಮರಳಿ ಬರದಂತೆ ಮಾಡಿವೆ.
- Vijaya Sarathy SN
- Updated on: May 10, 2026
- 3:46 pm
Thalapathy Vijay Oath Taking Live: ತಮಿಳುನಾಡಿನ ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕಾರ ನೇರಪ್ರಸಾರ
ಮಿಳು ನಾಡು ರಾಜಕಾರಣದಲ್ಲಿ ಇಂದು ಹೊಸ ಅಧ್ಯಾಯ ಆರಂಭವಾಗಿದೆ. ತಮಿಳಗ ವೆಟ್ರಿ ಕಳಗಂ (TVK) ನಾಯಕ, ಜನಪ್ರಿಯ ನಟ ವಿಜಯ್ (C. ಜೋಸೆಫ್ ವಿಜಯ್) ಅವರು ಇಂದು ಬೆಳಿಗ್ಗೆ 10 ಗಂಟೆಗೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
- Bhavana Hegde
- Updated on: May 10, 2026
- 9:21 am
West Bengal CM: ಬಂಗಾಳದಲ್ಲಿ ಬಿಜೆಪಿ ಯುಗ ಆರಂಭ; ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ
Suvendu Adhikari Swearing-In Ceremony: ಪಶ್ಚಿಮ ಬಂಗಾಳ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಅದ್ದೂರಿ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಸುವೇಂದು ಅಧಿಕಾರಿ ಇಂದು ಬಂಗಾಳದ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
- Sushma Chakre
- Updated on: May 9, 2026
- 11:41 am
ಬಂಗಾಳ ಮುಂದಿನ ಸಿಎಂ ಸುವೇಂದು ಅಧಿಕಾರಿ? ಅಗ್ನಿಮಿತ್ರಾ, ನಿಸಿತ್ ಉಪಮುಖ್ಯಮಂತ್ರಿಗಳು?
West Bengal govt formation, Suvendu Adhikari frontrunner for CM: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಇಂದು ಶುಕ್ರವಾರ ನಡೆಯುತ್ತಿದೆ. ವರದಿಗಳ ಪ್ರಕಾರ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ. ಇಬ್ಬರು ಡಿಸಿಎಂಗಳಿರಬಹುದು ಎನ್ನಲಾಗಿದೆ. ಅಗ್ನಿಮಿತ್ರಾ ಪೌಲ್, ನಿಸಿತ್ ಪ್ರಾಮಾಣಿಕ್ ಮೊದಲಾದವರ ಹೆಸರು ಡಿಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ.
- Vijaya Sarathy SN
- Updated on: May 8, 2026
- 2:17 pm