ಪ್ರತಿಯೊಬ್ಬ ಹೆಣ್ಣು ಕೂಡಾ ನನ್ನನ್ನು ಮದುವೆಯಾಗುವ ಗಂಡು ಹಾಗಿರಬೇಕು, ಹೀಗಿರಬೇಕು ಎಂದೆಲ್ಲಾ ಬಯಸುತ್ತಾಳೆ. ತನ್ನ ಬಯಕೆಗೆ ತಕ್ಕಂತೆ ವಯಸ್ಸಿನಲ್ಲಿ ತನಗಿಂತ 5-6 ವರ್ಷ ದೊಡ್ಡವವನ್ನು ಮದುವೆಯಾಗುತ್ತಾರೆ. ಆದ್ರೆ ಈಗ 20, 25 ವರ್ಷ ವರ್ಷ ಯುವತಿಯರು ತಮ್ಮ ತಾತನ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವ ಟ್ರೆಂಡ್ ಒಂದು ಹುಟ್ಟಿಕೊಂಡಿದೆ. ಈ ಹಿಂದೆಯೂ ಇಂತಹ ಸಾಕಷ್ಟು ಘಟನೆಗಳ ಸುದ್ದಿಗಳು ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, 20 ರ ತರುಣಿಯೊಬ್ಬರು 70 ವರ್ಷದ ಹಣ್ಣು ಮುದುಕನನ್ನು ಮದುವೆಯಾಗಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ದೃಶ್ಯ ನೋಡಿ ನಾವುಗಳು ಮಠ ಸೇರೋದೇ ಬೆಸ್ಟು ಎಂದಿದ್ದಾರೆ ಯುವಕರು.
ಈ ಕುರಿತ ವಿಡಿಯೋವನ್ನು Gulzar_sahab ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಚೆಂದುಳ್ಳಿ ಚೆಲುವೆಯೊಬ್ಬಳು 70 ರ ಹರೆಯದ ಮುದುಕನನ್ನು ಮದುವೆಯಾಗುವ ದೃಶ್ಯವನ್ನು ಕಾಣಬಹುದು. ಕುಟುಂಬಸ್ಥರ ಸಮ್ಮಖದಲ್ಲಿ ನಡೆದ ಈ ಮದುವೆಯಲ್ಲಿ ಮುದುಕ ಯುವತಿಯ ಕುತ್ತಿಗೆಗೆ ಹೂವಿನ ಹಾರ ಹಾಕುತ್ತಿದ್ದಂತೆ ಬಹಳ ಖುಷಿ ಖುಷಿಯಿಂದ ಯುವತಿಯು ಸಹ ಮುದುಕನಿಗೆ ಹಾರ ಬದಲಾಯಿಸಿದ್ದಾಳೆ.
ಇದನ್ನೂ ಓದಿ: ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಧ್ವಜ ಹಿಡಿದು ಸಂಭ್ರಮಿಸಿದ ಪಾಕಿಸ್ತಾನ ತಂಡ, ಅಪರೂಪದ ದೃಶ್ಯ ವೈರಲ್
यह सब क्या देखना पड़ रहा है ☹️ pic.twitter.com/1woN1IIGv5
— ज़िन्दगी गुलज़ार है ! (@Gulzar_sahab) September 26, 2024
ಸೆಪ್ಟೆಂಬರ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನೆಲ್ಲಾ ನೋಡಿ ಸಿಂಗಲ್ ಆಗಿರುವ ನನ್ನ ದುಃಖ ಇನ್ನೂ ಜಾಸ್ತಿಯಾಗ್ತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಕಲಿಯುಗ ಇಲ್ಲಿ ಏನೂ ಬೇಕಾದ್ರೂ ಆಗ್ಬೋದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Fri, 27 September 24