Viral Video : ನೃತ್ಯವನ್ನು ಶ್ರಮಪಟ್ಟು ಕಲಿತು ಪ್ರದರ್ಶನ ಮಾಡುವ ಸಾಕಷ್ಟು ಜನರು ನಮ್ಮ ನಡುವೆ ಇದ್ದಾರೆ. ಕೆಲವರು ಉತ್ಸಾಹದಿಂದ ತಮ್ಮಷ್ಟಕ್ಕೆ ತಾವು ಮಾಡುವವರೂ ಇದ್ದಾರೆ. ಎಲ್ಲೋ ಹಾಡು ಕೇಳಿದರೆ ಸಾಕು ಇದ್ದಲ್ಲಿಯೇ ಕುಣಿಯುವವರೂ ಇದ್ದಾರೆ. ಇಲ್ಲೊಂದು ಪ್ರಸಿದ್ಧ ಪಾರ್ಟಿ ಟ್ರ್ಯಾಕ್ಗೆ ವಯಸ್ಸಾದ ವ್ಯಕ್ತಿಯೊಬ್ಬರು ಕುಣಿಯುತ್ತಿರುವುದನ್ನು ನೋಡಿ. 2014 ರ ಖೂಬ್ಸೂರತ್ನ ಸೋನಮ್ ಕಪೂರ್ ಅಭಿನಯದ ಅಭಿ ತೋ ಪಾರ್ಟಿ ಶುರು ಹುಯೀ ಹೈ ಹಾಡಿಗೆ ಇವರು ನರ್ತಿಸಿದ್ದಾರೆ. ಇದನ್ನು ಗಾಯಕರಾದ ಬಾದ್ಶಾ ಮತ್ತು ಆಸ್ಥಾ ಹಾಡಿದ್ದಾರೆ. ಎಂಟರ್ಟೈನರ್ ನಿಗಮ್ ಪಟೇಲ್ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ ಈ ಅಜ್ಜನಿಗೆ 82. ಯಾವುದೇ ಹಿಂಜರಿಕೆ ಇಲ್ಲದೆ ಮನದುಂಬಿ ಕುಣಿದಿದ್ದಾರೆ. ಇವರ ಈ ಜೋಶ್ನಿಂದ ವೇದಿಕೆಯ ಮೇಲಿರುವವರಿಗೆಲ್ಲ ಉತ್ಸಾಹ ಉಕ್ಕಿ ಹರಿದಿದೆ. ಆಗಸ್ಟ್ 18 ರಂದು ಈ ವಿಡಿಯೋ ಅನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿದೆ. ಈತನಕವೂ ಸುಮಾರು 9 ಲಕ್ಷ ವೀಕ್ಷಣೆ, 28,000 ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
ಈ ವಿಡಿಯೋ ಎಲ್ಲರಿಗೂ ಸ್ಪೂರ್ತಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಖಾತೆದಾರರು, ‘ವಾಹ್, ನಾನು ಜಿಮ್ಗೆ ಹೋಗಲು ಶುರು ಮಾಡುತ್ತಿದ್ದೇನೆ. ಬಹುಶಃ 82ರ ವಯಸ್ಸಿನಲ್ಲಿ ಇವರಂತೆಯೇ ನಾನೂ ನೃತ್ಯ ಮಾಡಬಲ್ಲೆ’ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಜೀವನವನ್ನು ಹೀಗೆಯೇ ಕಳೆಯಬೇಕು’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ನಿಮಗೂ ಈಗ ಪಾರ್ಟಿಗೆ ಹೋಗಿ ಡ್ಯಾನ್ಸ್ ಮಾಡಬೇಕು ಅನ್ನಿಸುತ್ತಿದೆಯಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:40 am, Tue, 6 September 22