Viral: ಇಂದು ಅವರಿಬ್ಬರ ಸರದಿ, ಮುಂದೆ ನನ್ನದು; ಕಾರ್ಪೊರೇಟ್ ಜಗತ್ತಿನ ಉದ್ಯೋಗ ಅಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಉದ್ಯೋಗಿ

ಖಾಸಗಿ ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಉದ್ಯೋಗ ಭದ್ರತೆ ಇರೋದಿಲ್ಲ. ಇದೀಗ ಐಟಿ ಉದ್ಯೋಗಿ ಮಾಡಿದ ಪೋಸ್ಟ್ ಇದಕ್ಕೆ ಸಾಕ್ಷಿಯಾಗಿದೆ. ತನ್ನ ಕಣ್ಣಾರೆ ಸಹ ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿಯ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಅವರ ಸರದಿ, ಮುಂದೆ ನನ್ನ ಸರದಿ ಎಂಬ ಕಟು ಸತ್ಯವನ್ನು ಹೇಳಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಇಂದು ಅವರಿಬ್ಬರ ಸರದಿ, ಮುಂದೆ ನನ್ನದು; ಕಾರ್ಪೊರೇಟ್ ಜಗತ್ತಿನ ಉದ್ಯೋಗ ಅಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಉದ್ಯೋಗಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 03, 2026 | 3:34 PM

ಕಾರ್ಪೊರೇಟ್ ಜಗತ್ತಿನಲ್ಲಿ (Corporate) ಕೆಲಸ ಮಾಡುವ ಉದ್ಯೋಗಿಗಳ ಕಷ್ಟ ಹೇಳಿ ಪ್ರಯೋಜನವಿಲ್ಲ. ಕಂಪನಿ ಯಾವಾಗ ಕೆಲಸದಿಂದ ತೆಗೆದು ಹಾಕುತ್ತವೆ ಎಂದು ಹೇಳಲಾಗದು. ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ಇದೀಗ ಉದ್ಯೋಗಿ ಕಾರ್ಪೊರೇಟ್ ಉದ್ಯೋಗಿಯ ರೆಡ್ಡಿಟ್ ಪೋಸ್ಟ್ ಸದ್ಯ ನೆಟ್ಟಿಗರ ಗಮನ ಸೆಳೆದಿದೆ. ಇಬ್ಬರೂ ಸಹೋದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದನ್ನು ಕಂಡು ಉದ್ಯೋಗಿ ತನಗಾದ ಆತಂಕವನ್ನು ಹೊರಹಾಕಿದ್ದಾರೆ. ಈ ರೆಡ್ಡಿಟ್ ಪೋಸ್ಟ್‌ಗೆ ನೆಟ್ಟಿಗರು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ವರ್ಕ್ ಪ್ಲೇಸ್ (r/indianworkplace) ಹೆಸರಿನ ರೆಡ್ಡಿಟ್ ಪೋಸ್ಟ್ ಕಾರ್ಪೊರೇಟ್ ಉದ್ಯೋಗಿಯೊಬ್ಬರು ಲೇಆಫ್ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಪೋಸ್ಟ್‌ಗೆ ಇಂದು ನಾನು ಕೆಲಸದ ಭದ್ರತೆ ನೋಡುವ ರೀತಿ ಸಂಪೂರ್ಣವಾಗಿ ಬದಲಾಗಿದೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

Reddit Post

ಈ ಪೋಸ್ಟ್ ನಲ್ಲಿ ನನ್ನ ಕಂಪನಿಯಲ್ಲಿ ಇಂದು ಲೇಆಫ್ ನಡೆದಿತ್ತು. ನನ್ನ ಕೆಲಸವನ್ನು ಉಳಿಸಿಕೊಳ್ಳುವ ಅದೃಷ್ಟ ನನ್ನದಾಗಿತ್ತು, ಆದರೆ ನನ್ನ ಇಬ್ಬರು ತಂಡದ ಸದಸ್ಯರು ಅಷ್ಟು ಅದೃಷ್ಟವಂತರಾಗಿರಲಿಲ್ಲ. ನನ್ನ ಸಹದ್ಯೋಗಿಗಳಿಬ್ಬರು ಹೊರಟು ನಿಂತಾಗ ನಾನು ಉಳಿದಿದ್ದೇನೆ ಎಂಬ ಕಾರಣಕ್ಕೆ ವಿಚಿತ್ರ ಭಾವನೆ, ದುಃಖ, ಭಯ ಮತ್ತು ಅಪರಾಧಿ ಮನೋಭಾವ ನನ್ನನ್ನು ಕಾಡುತ್ತಿದೆ. ಒಂದು ವೇಳೆ ಅವರ ಸ್ಥಾನದಲ್ಲಿ ನಾನು ಇದ್ದಿದ್ದರೆ ಏನು ಮಾಡುತ್ತಿದ್ದೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಲೇ ಇದೆ ಎಂದು ಹೇಳಿದ್ದಾರೆ.

ಈಗೀಗ ಉದ್ಯೋಗ ಮಾರುಕಟ್ಟೆ ತುಂಬಾ ಕಠಿಣವಾಗಿದೆ. ರಾತ್ರೋರಾತ್ರಿ ಇಷ್ಟೊಂದು ಬದಲಾವಣೆಗಳು ಸಂಭವಿಸಬಹುದು ಎಂದು ಊಹಿಸುವುದೇ ಭಯಾನಕವಾಗಿದೆ. ಕೆಲಸ ಯಾವುದೇ ಇರಲಿ, ಆದರೆ ಎಷ್ಟು ಸುರಕ್ಷಿತ ಎಂದು ನಾನು ಪ್ರಶ್ನಿಸುತ್ತೇನೆ. ಪ್ರಸ್ತುತ ಜಾಗತಿಕ ಆರ್ಥಿಕ ಪರಿಸ್ಥಿತಿಯೊಂದಿಗೆ ಎಐ, ಆರ್ಥಿಕ ಒತ್ತಡ ಹೀಗೆ ಕಂಪನಿಯಲ್ಲಿ ನಡೆಯುವ ಅನೇಕ ವಿಷಯಗಳು ಉದ್ಯೋಗದ ಭದ್ರತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಾಸ್ತವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗ ಕಳೆದುಕೊಳ್ಳುವ ಸನ್ನಿವೇಶ ಎದುರಿಸಬೇಕಾದ ಪ್ರತಿಯೊಬ್ಬರ ಬಗ್ಗೆಯೂ ನನಗೆ ಭಯವಾಗುತ್ತದೆ. ಅದು ಎಷ್ಟು ಕಷ್ಟಕರವಾಗಿರುತ್ತದೆ ಎಂದು ನನಗೆ ಊಹಿಸಲು ಸಾಧ್ಯವಿಲ್ಲ. ನಿಮ್ಮ ಮೇಲೆ ಇಂತಹ ಪರಿಣಾಮ ಬೀರದಿದ್ದರೂ ಸಹ, ಬೇರೆ ಯಾರಾದರೂ ತಮ್ಮ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ನಂತರ ನಿಮಗೂ ಕೂಡ ಈ ರೀತಿ ಭಾವನೆ ಅನುಭವಿಸಿದ್ದಾರೆಯೇ?. ನೀವು ಈ ಆತಂಕವನ್ನು ಹೇಗೆ ನಿಭಾಯಿಸಿದ್ದೀರಿ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ಓವರ್ ಟೈಮ್ ಡ್ಯೂಟಿ ಮಾಡಿದ್ರೂ ಸಂಬಳ ಹೆಚ್ಚು ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸತ್ತು ಜಾಬ್ ರಿಸೈನ್ ಮಾಡಿದ ಉದ್ಯೋಗಿ

ಈ ಪೋಸ್ಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಬಳಕೆದಾರರಲ್ಲಿ ಒಬ್ಬರು ನನಗೂ ನಿಮ್ಮ ಹಾಗೆಯೇ ಆತಂಕ, ಭಯ ಕಾಡುತ್ತದೆ ಎಂದಿದ್ದಾರೆ. ಮತ್ತೊಬ್ಬರು, ನನ್ನನ್ನು 3 ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಯಿತು. ಆದರೆ ಈ ಜೀವನವು ಕೆಲವೊಮ್ಮೆ ನಿಜವಾಗಿಯೂ ನೋವಿನಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಉದ್ಯೋಗ ಭದ್ರತೆಯಿಲ್ಲ, ನನ್ನ ಪ್ರಕಾರ ಉಳಿತಾಯ ಮಾತ್ರ ಮುಖ್ಯವಲ್ಲ, ತುರ್ತು ನಿಧಿ ಯಾವಾಗಲೂ ಇರಲೇಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:34 pm, Mon, 3 August 26

Loading...
Unable to load recommendations.
Follow Us