ಮಮ್ಮಿನಾ ಈಗ್ಲೇ ಕರ್ಕೊಂಡು ಹೋಗಿ; ಐಸ್‌ಕ್ರೀಂ ತಿಂದ ತಾಯಿಯನ್ನು ಬಂಧಿಸಲು ಪೊಲೀಸರನ್ನೇ ಮನೆಗೆ ಕರೆಸಿದ ಪುಟ್ಟ ಪೋರ

ಮಕ್ಕಳು ತಮ್ಮಿಷ್ಟದ ವಸ್ತುಗಳನ್ನು ಯಾರಾದ್ರೂ ಮುಟ್ಟಿದ್ರೆ ಕೋಪದಲ್ಲಿ ಕೂರುವುದು ಸಾಮಾನ್ಯ ಅಲ್ವಾ. ಆದ್ರೆ ಇಲ್ಲೊಬ್ಬ ಬಾಲಕ ತನ್ನಿಷ್ಟದ ಐಸ್‌ಕ್ರೀಮ್‌ ತಾಯಿ ತಿಂದು ಖಾಲಿ ಮಾಡಿದರೆಂದು, ಅಮ್ಮನ ವಿರುದ್ಧವೇ ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟಿದ್ದಾನೆ. ನನ್ನಮ್ಮ ಕೆಟ್ಟವ್ರು, ಅವ್ರನ್ನ ಈಗ್ಲೇ ಕರ್ಕೊಂಡು ಹೋಗಿ ಎಂದು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದು, ಪೊಲೀಸ್‌ ಹಾಗೂ ಬಾಲಕನ ನಡುವೆ ನಡೆದ ಈ ತಮಾಷೆಯ ಸಂಭಾಷಣೆಯ ತುಣುಕು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮಮ್ಮಿನಾ ಈಗ್ಲೇ ಕರ್ಕೊಂಡು ಹೋಗಿ; ಐಸ್‌ಕ್ರೀಂ ತಿಂದ ತಾಯಿಯನ್ನು ಬಂಧಿಸಲು ಪೊಲೀಸರನ್ನೇ ಮನೆಗೆ ಕರೆಸಿದ ಪುಟ್ಟ ಪೋರ
ವೈರಲ್​ ಪೋಸ್ಟ್​
Edited By:

Updated on: Mar 12, 2025 | 12:22 PM

ಅಮೆರಿಕ, ಮಾ. 12: ಸಾಮಾನ್ಯವಾಗಿ ಮಕ್ಕಳು (Children’s) ತಮ್ಮಿಷ್ಟದ ಬಟ್ಟೆ, ಆಟಿಕೆ (Toy), ತಿಂಡಿಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡಲ್ಲ. ಒಂದು ವೇಳೆ ಯಾರಾದ್ರೂ ತಮ್ಮ ಆಟಿಕೆಗಳನ್ನು ಮುಟ್ಟಿದರೆ ಅಥವಾ ತಿಂಡಿಗಳನ್ನು ತಿಂದ್ರೆ ಆ ಮಕ್ಳು ಇಡೀ ದಿನ ಅಳುತ್ತಾ ಕೋಪದಲ್ಲಿ ಕೂತು ಬಿಡುತ್ತಾರೆ. ಇಂತಹ ಮಕ್ಕಳ ನಡುವೆ ಇಲ್ಲೊಬ್ಬ ಬಾಲಕ ತನ್ನಿಷ್ಟದ ಐಸ್‌ಕ್ರೀಮ್‌ (Ice cream) ತಾಯಿ ತಿಂದು ಖಾಲಿ ಮಾಡಿದರೆಂದು ಪೊಲೀಸರಿಗೆಯೇ (Police) ದೂರನ್ನು (Complaint) ನೀಡಿದ್ದಾನೆ. ಹೌದು ಮಮ್ಮಿ ಕೆಟ್ಟವ್ರು, ಅವ್ರು ನನ್ನ ಐಸ್‌ಕ್ರೀಮ್‌ ತಿಂದಿದ್ದಾರೆ, ಅವ್ರನ್ನು ಕೂಡ್ಲೇ ಕರ್ಕೊಂಡು ಹೋಗಿ ಎಂದು ಪೊಲೀಸರಿಗೆ ಕರೆ ಮಾಡಿ ದೂರನ್ನು ನೀಡಿದ್ದು, ಪೊಲೀಸ್‌ ಹಾಗೂ ಬಾಲಕನ ನಡುವೆ ನಡೆದ ಈ ಹಾಸ್ಯಮಯ ಸಂಭಾಷಣೆಯ ತುಣುಕು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಅಮೇರಿಕದ ವಿಸ್ಕಾನ್ಸಿನ್‌ನಲ್ಲಿ ನಡೆದ ಘಟನೆ ಇದಾಗಿದ್ದು, 4 ರ ಹರೆಯದ ಬಾಲಕನೊಬ್ಬ ತನ್ನ ಹೆತ್ತ ತಾಯಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾನೆ. ತಾಯಿ ತನ್ನ ಐಸ್‌ಕ್ರೀಮ್‌ ತಿಂದು ಖಾಲಿ ಮಾಡಿದರೆಂದು 911 ಗೆ ಕರೆ ಮಾಡಿ, ಅಮ್ಮನನ್ನು ಆದಷ್ಟು ಬೇಗ ಕರ್ಕೊಂಡು ಹೋಗಿ ಎಂದು ದೂರನ್ನು ನೀಡಿದ್ದಾನೆ.

ಇದನ್ನೂ ಓದಿ
ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನೇ ಜೀವಂತ ಸುಟ್ಟು ಹಾಕಿದ ಮಹಿಳೆ
ವರನಿಗೆ ಮೆಸೇಜ್‌ ಮಾಡಿ ಮದುವೆ ಹಿಂದಿನ ದಿನ ನಾಪತ್ತೆಯಾದ ವಧು
ಪ್ರವಾಸಿಗರೆದುರೇ ಮರಿಗೆ ಜನ್ಮ ನೀಡಿದ ಆನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಸಿಎನ್‌ಎನ್‌ ಪ್ರಕಾರ ವಿಸ್ಕಾನ್ಸಿನ್‌ನ 4 ವರ್ಷದ ಬಾಲಕನೊಬ್ಬ 911 ಗೆ ಕರೆ ಮಾಡಿ ಅಳುತ್ತಾ ಅಮ್ಮ ಐಸ್‌ಕ್ರೀಮ್‌ ತಿಂದಿದ್ದಾರೆ ಅವರನ್ನು ಬಂಧಿಸಿ ಎಂದು ದೂರನ್ನು ನೀಡಿದ್ದಾನೆ. ಅಳುತ್ತಾ ಪೊಲೀಸರೊಂದಿಗೆ ಮಾತನಾಡಿದ ಬಾಲಕ ನನ್ನ ಅಮ್ಮ ತುಂಬಾ ಕೆಟ್ಟವ್ರು, ನೀವು ಬಂದು ಅವ್ರನ್ನು ಕರ್ಕೊಂಡು ಹೋಗಿ ಎಂದು ಹೇಳಿದ್ದಾನೆ. ನಾನು ಅವನ ಐಸ್‌ಕ್ರೀಮ್‌ ತಿಂದದ್ದಕ್ಕೆ ಅಸಮಾಧಾನಗೊಂಡು ಹೀಗೆ ದೂರು ನೀಡಿದ್ದು ಎಂದು ತಾಯಿ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದು, ಮರುದಿನ ಪೊಲೀಸರೇ ಮನೆಗೆ ಬಂದು ಬಾಲಕನಿಗೆ ಐಸ್‌ಕ್ರೀಮ್‌ ಕೊಟ್ಟು ಹೋಗಿದ್ದಾರೆ.

ಇದನ್ನೂ ಓದಿ: ಪ್ರೀತಿಯಲ್ಲಿ ಮೋಸ, ಅಶಾಂತಿ ಎಲ್ಲಾ ಸಮಸ್ಯೆಗಳಿಗೂ ಚಹಾ ಒಂದೇ ಪರಿಹಾರ; ಇದೇನು ಚಹಾ ಅಂಗಡಿಯೋ… ಜ್ಯೋತಿಷ್ಯ ಕೇಂದ್ರವೋ?

ಬಾಲಕ ಹಾಗೂ ಪೊಲೀಸರ ನಡುವೆ ನಡೆದ ಈ ಹಾಸ್ಯಮಯ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್‌ ತುಣುಕು ಹಾಗೂ ಪೊಲೀಸರಿಬ್ಬರು ಬಾಲಕನಿಗೆ ಐಸ್‌ಕ್ರೀಮ್‌ ಕೊಡಿಸಿ ಆತನೊಂದಿಗೆ ಕ್ಲಿಕ್ಕಿಸಿದ್ದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:21 pm, Wed, 12 March 25