
ಅಮೆರಿಕ, ಜಪಾನ್ (Japan) ಸೇರಿದಂತೆ ಮುಂದುವರೆದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿರುವ ಒಂದಷ್ಟು ಹೈಟೆಕ್ ಸೌಲಭ್ಯಗಳು (Facility), ಸಾರ್ವಜನಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆಗಳು ಭಾರತದಲ್ಲೂ (India) ಇದ್ದಿದ್ದರೆ ತುಂಬಾ ಚೆನ್ನಾಗಿ ಇರುತ್ತಿತ್ತು ಎಂದು ಹಲವರು ಮಾತನಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ರು ವಿದೇಶಿ ಮಹಿಳೆ ಭಾರತದಲ್ಲಿರುವ ಈ ಒಂದಷ್ಟು ಸೌಲಭ್ಯಗಳು ಅಮೆರಿಕದಲ್ಲೂ ಇರ್ಬೇಕಿತ್ತು ಎಂದು ಹೇಳಿದ್ದಾರೆ. ಯುಪಿಐ ಸೇವೆ, ಆಟೋದಿಂದ ಹಿಡಿದು ವೈದ್ಯಕೀಯ ಸೇವೆಯವರೆಗೆ ಭಾರತದಲ್ಲಿರುವ ಒಂದಷ್ಟು ವಿಷಯಗಳು ನಮ್ಮಲ್ಲೂ ಇದ್ದಿದ್ರೆ ಚೆನ್ನಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಅಮೆರಿಕನ್ ಮಹಿಳೆಯ ಮುಕ್ತ ಮಾತಿಗೆ ಭಾರತೀಯರು ಫಿದಾ ಆಗಿದ್ದಾರೆ.
ಸುಮಾರು ನಾಲ್ಕು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಅಮೆರಿಕ ಮೂಲದ ಕ್ರಿಸ್ಟೆನ್ ಫಿಷರ್ ಎಂಬ ಮಹಿಳೆ ಭಾರತದಲ್ಲಿ ಲಭ್ಯವಿರುವ ಆಟೋದಿಂದ ಹಿಡಿದು ವೈದ್ಯಕೀಯ ಸೇವೆಯ ವರೆಗೆ 10 ಸೌಲಭ್ಯಗಳು ಅಮೆರಿಕದಲ್ಲೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ಫಿಷರ್ (kristenfischer3) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತಷ್ಟು ಓದಿ: Viral: ದೆಹಲಿ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಜಡೆ ಜಗಳ; ವೈರಲ್ ಆಯ್ತು ವಿಡಿಯೋ
ಮಾರ್ಚ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಭಾರತದ ಬಗ್ಗೆ ಒಳ್ಳೆಯ ವಿಷಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಷ್ಟೆಲ್ಲಾ ಇದ್ರೂ ಹೆಚ್ಚಿನವರು ಅಮೆರಿಕಕ್ಕೆ ಹೋಗಲು ಬಯಸುತ್ತಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆದ್ರೆ ಭಾರತದಲ್ಲಿರುವವರು ಈ ವಿಷಯಗಳ ಬಗ್ಗೆ ಹೆಮ್ಮಿಯಿಂದ ಹೇಳಿದ್ದನ್ನು ನಾನೆಂದು ನೋಡೇ ಇಲ್ಲʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Wed, 19 March 25