Viral: ನಿಮ್ಗೆ ಕನ್ನಡ ಬರೆಯಲು ಬರ್ತದಾ? ಚೆಂದವಾಗಿ ಕನ್ನಡಾಕ್ಷರ ಬರೆಯುವ ಮೂಲಕ ಉತ್ತರ ಕೊಟ್ಟ ಕನ್ನಡತಿ
ಪ್ರಸ್ತುತ ಚೀನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಾ, ಅಲ್ಲಿನ ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವ್ಲಾಗ್‌ಗಳನ್ನು ಹಂಚಿಕೊಳ್ಳುವ ಕರ್ನಾಟಕ ಮೂಲದ ಅಸೀಮಾ ಎಂಬ ಯುವತಿಯ ಬಗ್ಗೆ ಬಹುತೇಕ ಹೆಚ್ಚಿನವರಿಗೆ ಗೊತ್ತಿದೆ ಅಲ್ವಾ. ಸ್ಪಷ್ಟ ಕನ್ನಡದಲ್ಲಿ ಮಾತನಾಡುವ ಮೂಲಕವೇ ಕನ್ನಡಿಗರ ಮನಗೆದ್ದ ಹುಡುಗಿ ಇವರು. ಇದೀಗ ಈಕೆ ಕನ್ನಡಾಕ್ಷರವನ್ನು ಚೆಂದವಾಗಿ ಬರೆದು ತೋರಿಸಿದ್ದಾರೆ. ಇವರ ಈ ಸುಂದರ ಕೈ ಬರಹಕ್ಕೆ ನೆಟ್ಟಿಗರು ಮನ ಸೋತಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ನಮಸ್ತೆ ನಾನು ನಿಮ್ಮ ಅಸೀಮಾ, ಚೈನಾದಿಂದ ಮಾತಾಡ್ತಿದ್ದೇನೆ ಎನ್ನುತ್ತಾ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ, ರೀಲ್ಸ್ ಶೇರ್ ಮಾಡುವ ಕನ್ನಡತಿಯ ಬಗ್ಗೆ ಬಹುತೇಕ ನಿಮಗೆಲ್ಲರಿಗೂ ಗೊತ್ತೇ ಇದೆ ಅಲ್ವಾ. ಪ್ರಸ್ತುತ ಚೀನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇವರು ಸಷ್ಟ ಕನ್ನಡದಲ್ಲಿ ಮಾತನಾಡುವ ಮೂಲಕವೇ ಕನ್ನಡಿಗರ ಮನ ಗೆದ್ದ ಹುಡುಗಿ. ಇವರು ಪ್ರತಿನಿತ್ಯ ಚೀನಾದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಸ್ಪಷ್ಟ ಕನ್ನಡವನ್ನು ಮಾತನಾಡುವ ಇವರ ಬಳಿ ನಿಮಗೆ ಕನ್ನಡ ಬರೆಯಲು ಬರ್ತದಾ ಎಂದು ಯಾರೋ ಒಬ್ರು ಪ್ರಶ್ನೆ ಕೇಳಿದ್ದು, ಇದಕ್ಕೆ ಇವರು ಕನ್ನಡ ಎನೆ ಕುಣಿದಾಡುವುದೆನ್ನೆದೆ ಎನ್ನುವ ಕುವೆಂಪುರವರ ಸಾಲುಗಳನ್ನು ಚೆಂದವಾಗಿ ಬರೆಯುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದ್ದು, ಅಸೀಮಾರ ಸುಂದರ ಕೈ ಬರಹಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.
ಅಸೀಮಾ ಅವರಿಗೆ ಯಾರೋ ಒಬ್ರು ಮೆಸೇಜ್ ಮಾಡಿ ನಿಮಗೆ ಕನ್ನಡ ಬರೆಯಲು ಬರ್ತದಾ ಎಂದು ಕೇಳಿದ್ದಾರೆ. ಇದಕ್ಕೆ ಇವರು ಒಂದು ವಿಡಿಯೋದಲ್ಲಿ ʼಕನ್ನಡ ಎನೆ ಕುಣಿದಾಡುವುದೆನ್ನೆದೆʼ ಎಂಬ ಕುವೆಂಪುರವರ ಸಾಲುಗಳನ್ನು ಚೆಂದವಾಗಿ ಬರೆಯುವ ಮೂಲಕ ಸೂಕ್ತ ಉತ್ತರವನ್ನು ನೀಡಿದ್ದು, ಇವರ ಈ ಸುಂದರ ಕೈ ಬರಹಕ್ಕೆ ಎಲ್ಲರೂ ಮನ ಸೋತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಅಸೀಮಾ ಧೋಳ (nimma_aseemaa) ಈ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ನಂಗೆ ಕನ್ನಡ ಬರಿಲಿಕೆ ಬರ್ತದಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಸೀಮಾ ʼಕನ್ನಡ ಎನೆ ಕುಣಿದಾಡುವುದೆನ್ನೆದೆ ಎಂಬ ಕುವೆಂಪುರವರ ಸಾಲುಗಳನ್ನು ಕನ್ನಡದಲ್ಲಿ ಬಹಳ ಚೆಂದವಾಗಿ ಬರೆದು ತೋರಿಸುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಮಹಿಳಾ ಭಕ್ತರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸಿದ ಮಹಿಳೆ, ವಿಡಿಯೋ ವೈರಲ್
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಎಷ್ಟು ಮಸ್ತ್ ಆಗಿದೆ ಹ್ಯಾಂಡ್ ರೈಟಿಂಗ್ʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಕೈ ಬರಹ ತುಂಬಾ ಸುಂದರವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ