AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಅಬ್ಬಬ್ಬಾ… ಹೇಗಿದೆ ನೋಡಿ ಚೀನಾದ ಹೈಟೆಕ್‌ ಫುಡ್‌ ಡೆಲಿವರಿ ವ್ಯವಸ್ಥೆ

ಚೀನಾ ಯಾವಾಗ್ಲೂ ತಂತ್ರಜ್ಞಾನ ಮತ್ತು ಅತ್ಯಾಧುನಿಕ ವ್ಯವಸ್ಥೆಗಳನ್ನು ಜಾರಿಗೊಳಿಸುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಹೀಗೆ ಚೀನಾದಲ್ಲಿರುವ ಹೈಟೆಕ್‌ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿಯೂ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಡ್ರೋನ್‌ ಮೂಲಕ ಅಲ್ಲಿ ಫುಡ್‌ ಡೆಲಿವರಿ ಮಾಡಲಾಗುತ್ತಿದೆ. ಚೀನಾದ ಈ ಹೈಟೆಕ್‌ ಫುಡ್‌ ಡೆಲಿವರಿ ವ್ಯವಸ್ಥೆ ಕಂಡು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

Viral: ಅಬ್ಬಬ್ಬಾ… ಹೇಗಿದೆ ನೋಡಿ ಚೀನಾದ ಹೈಟೆಕ್‌ ಫುಡ್‌ ಡೆಲಿವರಿ ವ್ಯವಸ್ಥೆ
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Feb 03, 2025 | 4:02 PM

Share

ಈಗಂತೂ ಹೆಚ್ಚಿನವರು ಮನೆಯಲ್ಲಿ ಅಡುಗೆ ಮಾಡಲು ಮನಸ್ಸಿಲ್ಲದಿದ್ದಾಗ ಅಥವಾ ಹೋಟೆಲ್‌ಗೆ ಹೋಗೋದು ಬೇಡ ಅಂದಾಗ ಸ್ವಿಗ್ಗಿ, ಝೊಮ್ಯಾಟೋದಂತಹ ಫುಡ್‌ ಡೆಲಿವರಿ ಆಪ್ಲಿಕೇಷನ್‌ಗಳಲ್ಲಿ ತಮ್ಮಿಷ್ಟದ ಆಹಾರ ಆರ್ಡರ್‌ ಮಾಡ್ತಾರೆ. ಆದ್ರೆ ಕೆಲವೊಂದು ಬಾರಿ ಟ್ರಾಫಿಕ್‌ ಇತ್ಯಾದಿ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಆರ್ಡರ್‌ ಆಗುವುದಿಲ್ಲ. ಇದೇ ಕಾರಣಕ್ಕೆ ನಾವು ಡೆಲಿವರಿ ಬಾಯ್‌ಗಳನ್ನು ಶಪಿಸುತ್ತಿರುತ್ತೇವೆ. ಆದ್ರೆ ಚೀನಾದಲ್ಲಿ ಇದ್ಯಾವುದೇ ಟೆನ್ಷನ್‌ ಇಲ್ಲ. ಅಲ್ಲಿ ಗ್ರಾಹಕರು ಆರ್ಡರ್‌ ಮಾಡದಂತಹ ಆಹಾರಗಳನ್ನು ಡ್ರೋನ್‌ ಮೂಲಕ ಡೆಲಿವರಿ ಮಾಡಲಾಗುತ್ತದೆ. ಚೀನಾದ ಈ ಹೈಟೆಕ್‌ ಫುಡ್‌ ಡೆಲಿವರಿ ಪದ್ಧತಿಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಈ ಅತ್ಯಾಧುನಿಕ ವ್ಯವಸ್ಥೆಯನ್ನು ಕಂಡು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಮಹಿಳೆಯೊಬ್ಬರು ಚೀನಾದಲ್ಲಿರುವ ಹೈಟೆಕ್‌ ಫುಡ್‌ ಡೆಲಿವರಿ ವ್ಯವಸ್ಥೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೊಟೇಲ್‌, ರೆಸ್ಟೋರೆಂಟ್‌ ಇಲ್ಲದ ದೂರದ ಜಾಗದಲ್ಲಿಯೂ ಹೇಗೆ, ಯಾವ ರೀತಿ ಫುಡ್‌ ಡೆಲಿವರಿ ಬಾಯ್ಸ್‌ ಇಲ್ಲದೆ ಬರೀ ಡ್ರೋನ್‌ ಮೂಲಕ ಫುಡ್‌ ಡೆಲಿವರಿ ಮಾಡಲಾಗುತ್ತದೆ ಎಂಬುದನ್ನು ಹೇಳಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ( ಕೃಪೆ: midiforreal)

View this post on Instagram

A post shared by Midi米爷 (@midiforreal)

ಈ ಕುರಿತ ವಿಡಿಯೋವೊಂದನ್ನು midiforreal ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ವಿಡಿಯೋದಲ್ಲಿ ಡ್ರೋನ್‌ ಮೂಲಕ ಹೇಗೆ ಫುಡ್‌ ಡೆಲಿವರಿ ಮಾಡಲಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶೆನ್‌ಜೆನ್‌ನಲ್ಲಿರುವ ಡ್ರೋನ್‌ ಸ್ಟೇಷನ್‌ ಬಳಿ ಹೋದ ಆ ಮಹಿಳೆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ತಮಗಿಷ್ಟದ ಆಹಾರಗಳನ್ನು ಆರ್ಡರ್‌ ಮಾಡ್ತಾರೆ. ಆರ್ಡರ್‌ ಮಾಡಿದ 15 ನಿಮಿಷದೊಳಗೆ ಡ್ರೋನ್‌ ಆಹಾರದ ಪೊಟ್ಟಣವನ್ನು ಎತ್ತಿಕೊಂಡು ಬಂದು ಡ್ರೋನ್‌ ಸ್ಟೇಷನ್‌ನ ಮೆಷಿನ್‌ ಒಳಗೆ ತಂದು ಹಾಕುತ್ತದೆ. ನಂತರ ಅಲ್ಲಿಂದ ಮಹಿಳೆ ತಮ್ಮ ಆರ್ಡರ್ ಅನ್ನು ಕಲೆಕ್ಟ್‌ ಮಾಡ್ತಾರೆ. ಹೀಗೆ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಚೀನಾ 2050 ರಲ್ಲಿ ವಾಸಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚಿನ್ನ ನಗದು ದೋಚಿದ್ದಲ್ಲದೆ ಅಡುಗೆ ಮನೆಯಲ್ಲಿ ಮಿರ್ಚಿ ಬಜ್ಜಿ ಮಾಡಿ ತಿಂದು ಗ್ಯಾಸ್‌ ಸಿಲಿಂಡರನ್ನೂ ಕದ್ದೊಯ್ದ ಕಳ್ಳರು

ಜನವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 14.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಟ್ರಾಫಿಕ್‌ ಸಮಸ್ಯೆಯೇ ಇಲ್ಲ; ಇದೊಂದು ಒಳ್ಳೆಯ ಪರಿಕಲ್ಪನೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ರೀತಿಯ ಸೇವೆಗಳನ್ನು ಆನಂದಿಸಲು ಒಂದು ಬಾರಿಯಾದರೂ ಚೀನಾಕ್ಕೆ ಹೋಗ್ಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಚೀನಾದ ಈ ಹೈಟೆಕ್‌ ವ್ಯವಸ್ಥೆಯನ್ನು ಕಂಡು ಬೆರಗಾಗಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್