ಚಿನ್ನ ನಗದು ದೋಚಿದ್ದಲ್ಲದೆ ಅಡುಗೆ ಮನೆಯಲ್ಲಿ ಮಿರ್ಚಿ ಬಜ್ಜಿ ಮಾಡಿ ತಿಂದು ಗ್ಯಾಸ್ ಸಿಲಿಂಡರನ್ನೂ ಕದ್ದೊಯ್ದ ಕಳ್ಳರು
ಕಳ್ಳತನ ಮಾಡಲು ಬಂದು ಸಿಕ್ಕಿ ಬಿದ್ದು ಗೂಸಾ ತಿಂದವರ, ಕಳ್ಳತನಕ್ಕೆ ಬಂದು ಅಡುಗೆ ಕೋಣೆಯಲ್ಲಿ ಅಡುಗೆ ಮಾಡಿ ತಿಂದು ಪಾರಾರಿಯಾದವರ ಸಾಕಷ್ಟು ಸುದ್ದಿಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕಳ್ಳತನಕ್ಕೆ ಬಂದ ಮನೆಯಲ್ಲಿ ಖದೀಮರು ಮೆಣಸಿನಕಾಯಿ ಬಜ್ಜಿ ಮಾಡಿ ತಿಂದು ಹಣ, ಚಿನ್ನಾಭರಣದ ಜೊತೆಗೆ ಗ್ಯಾಸ್ ಸಿಲಿಂಡರನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಅಂಗಡಿಗಳಲ್ಲಿ, ಸ್ಥಿತಿವಂತರ ಮನೆಗಳಲ್ಲಿ ಕಳ್ಳತನ ನಡೆಯುವಂತಹ ಒಂದಲ್ಲಾ ಒಂದು ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇನ್ನೂ ಕಳ್ಳತನಕ್ಕೆ ಬಂದು ಕಿತಾಪತಿ ಮಾಡುವಂತಹವರ ಸುದ್ದಿಗಳು ಕೂಡಾ ಕೇಳಿ ಬರುತ್ತಿರುತ್ತವೆ. ಹೌದು ಅಂಗನವಾಡಿಗೆ ನುಗ್ಗಿ ಆಮ್ಲೇಟ್ ಮಾಡಿ ತಿಂದಂತಹ, ಕಳ್ಳತನಕ್ಕೆ ಬಂದು ನಿದ್ರೆಗೆ ಜಾರಿದ, ಅಡುಗೆ ಮಾಡಿ ತಿಂದು ಹೋದಂತಹ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕಳ್ಳತನಕ್ಕೆ ಬಂದ ಮನೆಯಲ್ಲಿ ಖದೀಮರು ಮೆಣಸಿನಕಾಯಿ ಬಜ್ಜಿ ಮಾಡಿ ತಿಂದು ಹಣ, ಚಿನ್ನಾಭರಣದ ಜೊತೆಗೆ ಗ್ಯಾಸ್ ಸಿಲಿಂಡರನ್ನು ಕದ್ದು ಪರಾರಿಯಾಗಿದ್ದಾರೆ. ಈ ಕುರಿತ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಕಳ್ಳರು ಚಿನ್ನ, ನಗದು ಸೇರಿದಂತೆ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣ ನಡೆದಿದ್ದು, ಕಳ್ಳತನಕ್ಕೆ ಬಂದವರು ಚಿನ್ನ, ಹಣದ ಜೊತೆಗೆ ಮನೆಯಲ್ಲಿದ್ದ ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ಕೂಡಾ ಕದ್ದೊಯ್ದಿದ್ದಾರೆ.
ಇದನ್ನೂ ಓದಿ: ನಿಮ್ಗೆ ಕನ್ನಡ ಬರೆಯಲು ಬರ್ತದಾ? ಚೆಂದವಾಗಿ ಕನ್ನಡಾಕ್ಷರ ಬರೆಯುವ ಮೂಲಕ ಉತ್ತರ ಕೊಟ್ಟ ಕನ್ನಡತಿ
ಈ ಘಟನೆ ಆಂಧ್ರ ಪ್ರದೇಶದ ಮಾರುತಿನಗರ ಎಂಬಲ್ಲಿ ನಡೆದಿದ್ದು, ಇಲ್ಲಿನ ಮನೆಯೊಂದಕ್ಕೆ ಕಳ್ಳತನಕ್ಕೆ ಬಂದ ಕಳ್ಳರು ಅಡುಗೆ ಕೋಣೆಯಲ್ಲಿ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ಮಾಡಿ ತಿಂದು, ಚಿನ್ನ, ಹಣದ ಜೊತೆಗೆ ಮನೆಯಲ್ಲಿದ್ದ ಮೂರು ಗ್ಯಾಸ್ ಸಿಲಿಂಡರ್‌ಗಳನ್ನು ಕದ್ದೊಯ್ದಿದ್ದಾರೆ. ಮನೆಯ ಮಾಲೀಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಈ ಚಟುವಟಿಕೆಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ