AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಕೆಲಸದಾಕೆ 10 ದಿನ ಸುದೀರ್ಘ ರಜೆ, ಸಂಬಳ ಕಡಿತಗೊಳಿಸಬೇಕೇ ಅಥವಾ ಬೇಡವೇ ಗೊಂದಲದಲ್ಲಿ ಮನೆಯೊಡತಿ

ಸೋಷಿಯಲ್‌ ಮೀಡಿಯಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಟ್ ನಲ್ಲಿ ಬಳಕೆದಾರರು ಹಂಚಿಕೊಳ್ಳುವ ಸ್ಟೋರಿಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಆದರೆ ಇದೀಗ ಮಹಿಳೆಯೊಬ್ಬರು ತನ್ನ ಮನೆಕೆಲಸದಾಕೆಯೂ ಹತ್ತು ದಿನಗಳ ಕಾಲ ರಜೆ ಹಾಕಿದ್ದು, ಸಂಬಳ ಕಡಿತಗೊಳಿಸಬೇಕೇ ಅಥವಾ ಬೇಡವೇ ಎಂದು ಗೊಂದಲದಲ್ಲಿಯೇ ಪೋಸ್ಟ್ ಹಂಚಿಕೊಂಡಿದ್ದಾರೆ. ಮಹಿಳೆಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಸಲಹೆಗಳನ್ನು ನೀಡಿದ್ದಾರೆ.

ಮನೆಕೆಲಸದಾಕೆ 10 ದಿನ ಸುದೀರ್ಘ ರಜೆ, ಸಂಬಳ ಕಡಿತಗೊಳಿಸಬೇಕೇ ಅಥವಾ ಬೇಡವೇ ಗೊಂದಲದಲ್ಲಿ ಮನೆಯೊಡತಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 06, 2025 | 11:26 AM

Share

ಬೆಂಗಳೂರಿನಂತಹ ನಗರಗಳಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣ ಮನೆಯ ಕೆಲಸವನ್ನು ಮಾಡಲು ಸಮಯವಿಲ್ಲ. ಹೀಗಾಗಿ ದಿನನಿತ್ಯದ ಕೆಲಸವನ್ನು ಮಾಡಲು ಕೆಲಸದಾಕೆಯನ್ನು ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ಮನೆಕೆಲಸ ದಾಕೆಗೆ ಒಂದು ದಿನ ರಜೆ ಹಾಕಿದ್ರೆ ಮುಗಿದೇ ಹೋಯಿತು. ಎಲ್ಲವನ್ನು ಮ್ಯಾನೇಜ್ ಮಾಡಿಕೊಂಡು ಹೋಗುವುದು ಕಷ್ಟ. ಅದಲ್ಲದೇ, ಕೆಲಸದಾಕೆ ರಜೆ ಹಾಕಿದ್ರೆ ಸಂಬಳ ಹೇಗೆ ಕೊಡೋದು ಎನ್ನುವ ಗೊಂದಲಗಳು ಮೂಡುತ್ತವೆ. ಇದೀಗ ಇಂತಹದ್ದೆ ಗೊಂದಲದಲ್ಲಿ ಮಹಿಳೆಯೊಬ್ಬರು ತನ್ನ ಮನೆಕೆಲಸದಾಕೆಯೂ ಹತ್ತು ದಿನಗಳ ಕಾಲ ರಜೆ ಹಾಕಿದ್ದು, ಸಂಬಳ ಕಡಿತಗೊಳಿಸಬೇಕೇ ಅಥವಾ ಬೇಡವೇ ಎಂದು ರೆಡ್ಡಿಟ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯ ಸಲಹೆಗಳನ್ನು ನೀಡಿದ್ದಾರೆ.

ಮಹಿಳೆಯೂ ಪೋಸ್ಟ್ ನಲ್ಲಿ, ‘ನಾನು ನಿಜವಾಗಿಯೂ ನನ್ನನ್ನು ನ್ಯಾಯಯುತ ವ್ಯಕ್ತಿ ಎಂದು ಪರಿಗಣಿಸುತ್ತೇನೆ. ನಾನು ಅವಳಿಗೆ ಆರೋಗ್ಯ ವಿಮೆ ಪಡೆಯಲು ಸಹಾಯ ಮಾಡಿದ್ದೇನೆ ಮತ್ತು ಅವಳಿಗೆ ಬೋನಸ್‌ಗಳು ಮತ್ತು ಅವಳು ಕೇಳುವ ಎಲ್ಲಾ ವಸ್ತುಗಳನ್ನು ನೀಡಿದ್ದೇನೆ. ಒಂದೆರಡು ದಿನಗಳ ರಜೆ ನೀಡಲು ನನಗೆ ಅಭ್ಯಂತರವಿಲ್ಲ. ಇದು ಸಾಮಾನ್ಯ – ಎಲ್ಲರಿಗೂ ವಿರಾಮ ಬೇಕು – ಆದರೆ ಅವಳು 10 ದಿನಗಳು ರಜೆ ತೆಗೆದುಕೊಂಡಾಗ, ಸಂಬಳ ಕಡಿತವು ಸಮಂಜಸವಲ್ಲವೇ, ಈ ರಜೆಯೂ ತಿಂಗಳ ಮೂರನೇ ಒಂದು ಭಾಗಕ್ಕೆ ಸಮಾನ’ ಎಂದು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ:

Do people ever cut their maid’s salary? byu/theparadoxicalnaari inbangalore

‘ಬೇರೆ ಯಾರೂ ನನ್ನ ಸಂಬಳವನ್ನು ಕಡಿತಗೊಳಿಸಲಿಲ್ಲ, ನೀವು ಅದನ್ನು ಏಕೆ ಕಡಿತಗೊಳಿಸಿದ್ದೀರಿ (ಪ್ರತಿ ತಿಂಗಳು ಅವಳ ಸಂಬಂಧಿಕರು ಆಸ್ಪತ್ರೆಯಲ್ಲಿರುತ್ತಾರೆ ಇಲ್ಲದಿದ್ದರೆ ಸಾಯುತ್ತಿರುತ್ತಾರೆ) ಎಂದು ಕೇಳಿದಾಗ ನನಗೆ ಅಪರಾಧಿ ಭಾವನೆ ಕಾಡುತ್ತದೆ. ನಾನು ಅವಳ ಕುಟುಂಬಕ್ಕೆ ಔಷಧಿಗಳನ್ನು ಖರೀದಿಸಿದ್ದೇನೆ, ಅವಳ ಮನೆಗೆ ಅವಳನ್ನು ಡ್ರಾಪ್ ಮಾಡಿದ್ದೇನೆ. ವಿಮೆಯನ್ನು ಹೇಗೆ ಬಳಸಬೇಕೆಂದು ಅವಳಿಗೆ ಹೇಳಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಕೆಲವೇ ಕ್ಷಣಗಳಲ್ಲಿ ಪತ್ನಿಗೆ ಕಪಾಳಮೋಕ್ಷ ಮಾಡಿದ ಪೊಲೀಸಪ್ಪ; ವಿಡಿಯೋ ವೈರಲ್‌

ಈ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಉತ್ಸಾಹಭರಿತ ಚರ್ಚೆಗೆ ಕಾರಣವಾಗಿದೆ. ಬಳಕೆದಾರರು ಈ ಮಹಿಳೆಯ ಸಮಸ್ಯೆಗೆ ಸೃಜನಶೀಲ ಪರಿಹಾರಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ಕೆಲಸದಾಕೆಯ ಗೈರುಹಾಜರಿಯನ್ನು ಇತರ ಯಾವುದೇ ಕೆಲಸದಂತೆ, ನಿಗದಿತ ನಿಯಮಗಳು ಮತ್ತು ನಿರೀಕ್ಷೆಗಳೊಂದಿಗೆ ಪರಿಗಣಿಸಿ ಎಂದಿದ್ದಾರೆ. ಮತ್ತೊಬ್ಬರು, ಕೆಲಸದಾಕೆ ರಜೆ ತೆಗೆದುಕೊಂಡಾಗ ಬದಲಿ ಕೆಲಸಕ್ಕಾಗಿ ವ್ಯವಸ್ಥೆ ಮಾಡಿ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಇದು ಉದ್ಯೋಗದಾತ ಹಾಗೂ ಉದ್ಯೋಗಿ ಸಂಬಂಧ, ಆದ್ದರಿಂದ ಅದನ್ನು ಹಾಗೆಯೇ ಪರಿಗಣಿಸಿ. ನ್ಯಾಯಯುತ ಉದ್ಯೋಗದಾತರಾಗಿರಿ ಮತ್ತು ಉಳಿದವುಗಳನ್ನು ನೀವು ತಪ್ಪಿತಸ್ಥ ಭಾವನೆಯಿಲ್ಲದೆ ಮಾಡಬಹುದು ” ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?