ಉದ್ಯೋಗದ ವೇಳೆ ಲವ್; ಮದುವೆಯಲ್ಲಿ ತಮ್ಮ ಕಂಪನಿಗೆ ಡಿಫರೆಂಟಾಗಿ ಥ್ಯಾಂಕ್ಸ್ ಹೇಳಿದ ವಧು!

ಅವರಿಬ್ಬರೂ ಒಂದೇ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದವರು. ಅವರಿಬ್ಬರ ನಡುವೆ ಪ್ರೀತಿ ಅಂಕುರಿಸಿರುತ್ತದೆ. ತನಗೆ ಬಾಳ ಸಂಗಾತಿಯನ್ನು ನೀಡಿದ ಕಂಪನಿಗೂ ತನ್ನ ಮದುವೆಯಲ್ಲಿ ಮುಖ್ಯ ಸ್ಥಾನ ನೀಡಬೇಕೆಂದು ಆ ವಧು ಒಂದು ನಿರ್ಧಾರ ಮಾಡುತ್ತಾಳೆ. ಆಕೆ ಏನು ಮಾಡಿದಳು, ಈ ಸುದ್ದಿ ವೈರಲ್ ಆಗುತ್ತಿರುವುದೇಕೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಉದ್ಯೋಗದ ವೇಳೆ ಲವ್; ಮದುವೆಯಲ್ಲಿ ತಮ್ಮ ಕಂಪನಿಗೆ ಡಿಫರೆಂಟಾಗಿ ಥ್ಯಾಂಕ್ಸ್ ಹೇಳಿದ ವಧು!
Bride Mehendi Design

Updated on: Feb 16, 2026 | 4:59 PM

ನವದೆಹಲಿ, ಫೆಬ್ರವರಿ 16: ಕಂಪನಿಗಳಲ್ಲಿ ಅನೇಕ ಲವ್ ಸ್ಟೋರಿಗಳು ನಡೆಯುತ್ತಿರುತ್ತವೆ, ಕೆಲವೊಮ್ಮೆ ಅಲ್ಲೇ ಇರುವ ಸಹೋದ್ಯೋಗಿಗಳಿಗೂ ಈ ವಿಷಯ ಗೊತ್ತಾಗುವುದಿಲ್ಲ. ಅಮೆಜಾನ್‌ (Amazon) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಲ್ಲೇ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿದಳು. ಆತನ ಜೊತೆ ಮದುವೆಯೂ ನಿಶ್ಚಯವಾಯಿತು. ಆಕೆ ತನಗೆ ಬಾಳ ಸಂಗಾತಿಯನ್ನು ಕೊಟ್ಟ ಕಂಪನಿಯಾದ ಅಮೆಜಾನ್​​ನ ಲೋಗೋವನ್ನು ತನ್ನ ಮೆಹಂದಿ ಶಾಸ್ತ್ರದಲ್ಲಿ ಕೈಯಲ್ಲಿ ಚಿತ್ರಿಸಿಕೊಳ್ಳುವ ಮೂಲಕ ತಮ್ಮಿಬ್ಬರ ಪರಿಚಯಕ್ಕೆ ಕೊಂಡಿಯಾದ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾಳೆ.

ವಧು ಪ್ರಿಯಾಂಶಿ ಶ್ರೀಮಲ್ ತನ್ನ ಪ್ರಿಯಕರನ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದಾಳೆ. ಈ ವೇಳೆ ಮೆಹಂದಿ ಶಾಸ್ತ್ರದಲ್ಲಿ ತನ್ನ ಕೈಗಳ ಮೇಲೆ ಅಮೆಜಾನ್ ಕಂಪನಿಯ ಲೋಗೋ ಡಿಸೈನ್ ಹಾಕಿಸಿಕೊಳ್ಳುವ ಮೂಲಕ ತಮ್ಮ ಪ್ರೇಮಕತೆಗೆ ನಾಂದಿ ಹಾಡಿದ ಸ್ಥಳಕ್ಕೂ ತನ್ನ ಮದುವೆಯಲ್ಲಿ ವಿಶೇಷ ಸ್ಥಾನ ನೀಡಿದ್ದಾಳೆ. ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ: ಡಿವೋರ್ಸ್​​​ ಸಿಕ್ಕ ಖುಷಿಗೆ ಕೈ ತುಂಬಾ ಮೆಹಂದಿ ಹಚ್ಚಿ ಸಂಭ್ರಮಿಸಿದ ಮಹಿಳೆ

@insideamazon Instagram ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ ಪ್ರಿಯಾಂಶಿಯ ಕೈಗಳ ಮೇಲೆ ಮೆಹಂದಿಯ ವೇಳೆ ಅಮೆಜಾನ್ ಲೋಗೋವನ್ನು ಹಾಕಿಸಿಕೊಂಡಿರುವುದನ್ನು ನೋಡಬಹುದು. ಈ ಖಾತೆಯು ಅಮೆಜಾನ್‌ನಲ್ಲಿನ ಜೀವನ ಮತ್ತು ಕೆಲಸದ ಬಗ್ಗೆ ತೆರೆಮರೆಯ ಕಥೆಗಳನ್ನು ಹೈಲೈಟ್ ಮಾಡುತ್ತದೆ. ಈ ಖಾತೆಯನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸಹ ಫಾಲೋ ಮಾಡುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us