
Viral Video : ಮಕ್ಕಳು ತಮ್ಮನ್ನು ಹೇಗೆ ಸದಾ ಆಟವಾಡಿಸುತ್ತಲೇ ಇರಬೇಕೆಂದು ಬಯಸುತ್ತವೆಯೋ ಹಾಗೆ ನಾಯಿಗಳು ಕೂಡ. ತಮಗಿಷ್ಟವಾದ ಆಟಗಳನ್ನು ಆಡಿದ ನಂತರ ಸೂಕ್ತ ಪ್ರತಿಫಲಕ್ಕಾಗಿ ಅವು ಕಾಯುತ್ತಿರುತ್ತವೆ. ಇಲ್ಲೊಂದು ಗೋಲ್ಡನ್ ರಿಟ್ರೈವರ್ ನಾಯಿ ಇದೆ. ಅದರ ಪೋಷಕರು ಅದಕ್ಕೆ ಕಪ್ ಆಟ ಆಡಿಸುತ್ತಿದ್ದಾರೆ. ಆನ್ಲೈನ್ನಲ್ಲಿ ವೈರಲ್ ಆಗಿರುವ ಈ ವಿಡಿಯೋ ನಿಮ್ಮ ಮನಸ್ಸನ್ನು ಅರಳಿಸದೇ ಇರದು. ಈ ವಿಡಿಯೋ ಎಲ್ಲಿ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. Yoda4ever ಎಂಬ ಟ್ವಿಟ್ಟರ್ ಖಾತೆದಾರರು ಇದನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ.
‘ನಾನು ನನ್ನ ಮನಸ್ಸನ್ನು ಬದಲಾಯಿಸಿದೆ, ನನಗಿದನ್ನು ಕೊಡಿ’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಪೋಸ್ಟ್ ಆಗಿದೆ. ಅದರ ಪೋಷಕರು ಎರಡು ಕಪ್ಗಳನ್ನಿಟ್ಟು ಇವುಗಳಲ್ಲಿ ಒಂದನ್ನು ಮುಟ್ಟು ಎಂದು ಹೇಳುತ್ತಾರೆ. ಅದು ಒಂದು ಕಪ್ ಮುಟ್ಟಿ ಆರಿಸಿಕೊಳ್ಳುತ್ತದೆ. ನೋಡಿದರೆ ಅದರಲ್ಲಿ ಒಂದೇ ಪೀಸ್ ಅದರ ಆಹಾರವಿರುತ್ತದೆ. ನಂತರ ಇನ್ನೊಂದು ಕಪ್ ಅನ್ನು ಪೋಷಕರು ತೋರಿಸುತ್ತಾರೆ. ಅದರಲ್ಲಿ ಸಾಕಷ್ಟು ಆಹಾರದ ತುಣುಕುಗಳಿರುತ್ತವೆ! ಹೀಗೆ ನಾಯಿಗಳೊಂದಿಗೆ ಇಂಥ ಆಟಗಳನ್ನು ಆಡುವುದರಿಂದ ಸಾಕಿದವರಿಗೂ ನಾಯಿಗೂ ಮನಸ್ಸು ಉಲ್ಲಸಿತವಾಗುತ್ತದೆ.
ಸೆಪ್ಟೆಂಬರ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ ನಂತರ 14.7 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆ ಗಳಿಸಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಲೈಕ್ಗಳು, 37,000 ಪ್ರತಿಕ್ರಿಯೆ, 73,500 ಕ್ಕೂ ಹೆಚ್ಚು ರೀಟ್ವೀಟ್ ಹೊಂದಿದೆ.
‘ಇವನ ಕೊನೆಯ ಲುಕ್ ಇದೆಯಲ್ಲ, ಅದನ್ನು ನಾನು ಪ್ರೀತಿಸುತ್ತೇನೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಈ ಜಗತ್ತಿನಲ್ಲಿ ನಾಯಿಗಳಿಗಿಂತ ಉತ್ತಮ ಜೀವಿಗಳಿದ್ದರೆ, ನಾನಿನ್ನೂ ಅವರನ್ನು ಭೇಟಿ ಮಾಡಬೇಕಿದೆ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:09 am, Tue, 6 September 22