Viral Video : ಪ್ರೀತಿಯಲ್ಲಿ ಬೀಳುವುದು ಸುಲಭ ಆದರೆ ಬಹುಕಾಲದವರೆಗೆ ಸಂಬಂಧದೊಳಗೆ ಪರಸ್ಪರ ಪ್ರೀತಿಯಿಂದ ಇರಬೇಕೆಂದರೆ ಅಪಾರ ತಾಳ್ಮೆ ಬೇಕಾಗುತ್ತದೆ. ಕಠಿಣ ಪರಿಶ್ರಮ ಬೇಕಾಗುತ್ತದೆ. ಇದೆಲ್ಲವೂ ಸೂಕ್ತ ದಿಕ್ಕಿನಲ್ಲಿ ಸಾಗಲು ಅದೃಷ್ಟವೂ ಬೇಕಾಗುತ್ತದೆ. ಇದೆಲ್ಲವೂ ಮೇಳೈಸಿರುವ ಒಂದು ಜೋಡಿಯ ವಿಡಿಯೋ ಇಲ್ಲಿದೆ. ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ಮತ್ತು ಇನ್ಸ್ಟಾಗ್ರಾಂನ ಟುಡೇ ಇಯರ್ಸ್ ಓಲ್ಡ್ ಪುಟದಲ್ಲಿ ಮರುಹಂಚಿಕೆಯಾದ ಈ ವಿಡಿಯೋ ನೋಡಿ. ಇಲ್ಲಿರುವ ಈ ಅಜ್ಜ-ಅಜ್ಜಿ ಏಳನೇ ತರಗತಿಯಲ್ಲಿದ್ದಾಗ ಪರಿಚಯವಾದರು. ಕಾಲಕ್ರಮೇಣ ಪ್ರೀತಿಸಿ ಮದುವೆಯಾದರು. ಇವರಿಬ್ಬರ ಮದುವೆಗೆ ಈಗ 60 ವರ್ಷಗಳು. ಇಬ್ಬರಿಗೂ 80 ವರ್ಷಗಳು. ಈಗಲೂ ಇವರಲ್ಲಿ ಪ್ರೀತಿಯ ಅದೇ ನವಿರಿದೆ.
ಈ ದಿನಮಾನಗಳಲ್ಲಿ ಇಂಥ ಜೋಡಿ ಅಪರೂಪ ಎಂದು ನೆಟ್ಟಿಗರು ಪ್ರಶಂಸಿದಿದ್ದಾರೆ. ಸುಮಾರು ಆರು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಇದುವರೆಗೆ 6.81 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.
ನೀವಿಬ್ಬರೂ ಅದ್ಭುತವಾಗಿ ಕಾಣುತ್ತಿದ್ದೀರಾ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ನಿಮಗೆ ಅಭಿನಂದನೆಗಳು ಹೀಗೆ ಬಾಳಿ ಬದುಕಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 5:06 pm, Mon, 5 September 22