Viral: ಮದುವೆ ಸಮಾರಂಭದಲ್ಲಿ ಸೀತಾ ಸ್ವಯಂವರ ಕಥೆಯನ್ನು ಮರು ಸೃಷ್ಟಿಸಿದ ಜೋಡಿ; ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ವರ ಕುದುರೆ ಏರಿ ಬರುವಂತಹದ್ದು, ವಧು ಬುಲೆಟ್‌ ಬೈಕ್‌ ಏರಿ ಬರುವಂತಹ ದೃಶ್ಯಗಳನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಶೇಷ ಮದುವೆ ನಡೆದಿದ್ದು, ಈ ವಿವಾಹ ಕಾರ್ಯಕ್ರಮದಲ್ಲಿ ವಧು-ವರ ಸೀತಾ ಸ್ವಯಂವರದ ಕಥೆಯನ್ನು ಮರುಸೃಷ್ಟಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಆಧುನಿಕ ಯುಗದ ಈ ಸ್ವಯಂವರದ ದೃಶ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Follow us
ಮಾಲಾಶ್ರೀ ಅಂಚನ್​
| Updated By: Digi Tech Desk

Updated on:Dec 11, 2024 | 2:20 PM

ಜನಕ ರಾಜನ ಪುತ್ರಿ ಸೀತೆಯ ಸ್ವಯಂವರದಲ್ಲಿ ಯಾರು ಶಿವ ಧನಸ್ಸನ್ನು ಎತ್ತುತ್ತಾರೋ ಅವರಿಗೆ ಸೀತೆಯನ್ನು ಕೊಟ್ಟು ವಿವಾಹ ಮಾಡುವುದಾಗಿ ಜನಕ ರಾಜ ಶರತ್ತನ್ನು ವಿಧಿಸಿದ್ದರು. ಈ ಸ್ವಯಂವರದಲ್ಲಿ ಹಲವಾರು ರಾಜ್ಯದ ರಾಜರುಗಳು, ರಾಜ ಕುಮಾರರು, ಚಕ್ರವರ್ತಿಗಳು ಭಾಗವಹಿಸಿದ್ದರು. ಆದರೆ ಇವರ್ಯಾರಿಗೂ ಶಿವ ಧನಸ್ಸನ್ನು ಎತ್ತಲು ಬಿಡಿ ಅಲ್ಲಾಡಿಸಲು ಕೂಡಾ ಸಾಧ್ಯವಾಗಲಿಲ್ಲ. ಕೊನೆಗೆ ಶ್ರೀರಾಮನು ಶಿವ ಧನಸ್ಸನ್ನು ಎತ್ತಿ ಬಿಲ್ಲನ್ನು ಮುರಿದನು. ಹೀಗೆ ಷರತ್ತಿನಲ್ಲಿ ಗೆದ್ದ ಶ್ರೀರಾಮನಿಗೆ ಸೀತೆಯನ್ನು ಮದುವೆ ಮಾಡಿ ಕೊಟ್ಟ ʼಸೀತಾ ಸ್ವಯಂವರʼದ ಕಥೆಯನ್ನು ನೀವೆಲ್ಲರೂ ಕೇಳಿರುತ್ತೀರಿ ಅಲ್ವಾ. ಇಲ್ಲೊಂದು ಮದುವೆ ಕಾರ್ಯಕ್ರಮದಲ್ಲಿಯೂ ಸೀತಾ ಸ್ವಯಂವರದ ಈ ಕಥೆಯನ್ನು ಮರು ಸೃಷ್ಟಿ ಮಾಡಿದ್ದು, ಈ ಸುಂದರ ದೃಶ್ಯ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ವರ ಕುದುರೆ ಏರಿ ಮದುವೆ ಮನೆಗೆ ಆಗಮಿಸುವಂತಹ ಅಥವಾ ವಧು ಬುಲೆಟ್‌ ಏರಿ ಎಂಟ್ರಿ ಕೊಡುವಂತಹ ದೃಶ್ಯಗಳನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಶಿಷ್ಟ ಮದುವೆ ನಡೆದಿದ್ದು, ಸೀತಾ ಸ್ವಯಂವರ ಥೀಮ್‌ನಲ್ಲಿ ವಧುವನ್ನು ವೇದಿಕೆಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ಹೌದು ಈ ಮದುವೆಯಲ್ಲಿ ಸೀತಾ ಸ್ವಯಂವರದ ಕಥೆಯನ್ನು ಮರು ಸೃಷ್ಟಿ ಮಾಡಿದ್ದು, ಈ ದೃಶ್ಯ ಸಖತ್‌ ವೈರಲ್‌ ಆಗುತ್ತಿದೆ.

Commentsshalla ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೆಲ ಪುರುಷರು ಬಿಲ್ಲನ್ನು ಎತ್ತಲು ಪ್ರಯತ್ನಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಕೊನೆಗೆ ವರ ಶ್ರೀರಾಮನಂತೆ ಬಿಲ್ಲನ್ನು ಎತ್ತಿ ಬಾಣವನ್ನು ಬಿಟ್ಟು ವಧುವನ್ನು ವೇದಿಗೆಕೆ ಅದ್ದೂರಿಯಾಗಿ ಸ್ವಾಗತಿಸಿದ್ದಾನೆ.

ಇದನ್ನೂ ಓದಿ: ತಾಯಿ ರೀಲ್ಸ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದ ವೇಳೆ ರಸ್ತೆಯತ್ತ ಓಡಿ ಹೋದ ಕಂದಮ್ಮ; ಮುಂದೇನಾಯ್ತು ನೋಡಿ…

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಕಲಿಯುಗದಲ್ಲಿ ಸೀತಾರಾಮರಂತಹ ಪವಿತ್ರ ಪ್ರೇಮ ಎಲ್ಲೂ ಇಲ್ಲ, ಹಾಗಾಗಿ ಇದನ್ನೆಲ್ಲಾ ಮಾಡುವ ಅವಶ್ಯಕತೆ ಇಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಾವಾಗ ವನವಾಸಕ್ಕೆ ಹೋಗ್ತಿರಾ?ʼ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯ ತುಂಬಾನೆ ಮುದ್ದಾಗಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:18 pm, Tue, 10 December 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ