Viral Video: ಸಿಂಪಲ್​​ ಆಗಿ ನಿಶ್ಚಿತಾರ್ಥ ಮಾಡಿಕೊಂಡ ‘ಗಿಣಿರಾಮ’ ನಟಿ ನಯನಾ ನಾಗರಾಜ್

‘ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮಿಂಚಿದ್ದ ನಯನ ನಾಗರಾಜ್. ಇದೀಗ ಸಿಂಪಲ್​​ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ನಿಶ್ಚಿತಾರ್ಥದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡ ಕೇವಲ ಒಂದು ದಿನದಲ್ಲೇ 1ಮಿಲಿಯನ್​​ ಅಂದರೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಕಂಡಿದೆ.

Viral Video: ಸಿಂಪಲ್​​ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಗಿಣಿರಾಮ ನಟಿ ನಯನಾ ನಾಗರಾಜ್
ನಿಶ್ಚಿತಾರ್ಥ ಮಾಡಿಕೊಂಡ 'ಗಿಣಿರಾಮ' ನಟಿ ನಯನಾ ನಾಗರಾಜ್
Image Credit source: instagram

Updated on: Mar 03, 2024 | 12:17 PM

ನಯನಾ ನಾಗರಾಜ್​​ ಎಂಬ ಹೆಸರಿಗಿಂತ ‘ಮಹತಿ’ ಎಂದೇ ಮನೆಮಾತಾಗಿರುವ ಕಿರುತೆರೆ ನಟಿ ಇತ್ತೀಚಿಗಷ್ಟೇ ಸಿಂಪಲ್​​ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ನಿಶ್ಚಿತಾರ್ಥದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.  ‘ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಾಯಕಿಯಾಗಿ ಮಿಂಚಿದ್ದ ನಯನ ನಾಗರಾಜ್. ನಟನೆಯ ಜೊತೆಗೆ ತನ್ನ ಕೋಗಿಲೆ ಕಂಠದಿಂದ ಉತ್ತಮ ಗಾಯಕಿಯಾಗಿಯೂ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ನಯನಾ ನಾಗರಾಜ್ ಹಾಗೂ ಸುಹಾಸ್ ಶಿವಣ್ಣನನ್ನು ಪ್ರೀತಿಸುತ್ತಿದ್ದು, ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಮನೆಯಲ್ಲೇ ಸಿಂಪಲ್​ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ವಿಡಿಯೋವನ್ನು ನಯನಾ ಅವರು ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​ ಆಗಿದೆ.

ನಯನಾ ನಾಗರಾಜ್ ನಿಶ್ಚಿತಾರ್ಥದ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ತಮ್ಮನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗಿದ ಧ್ರುವ ಸರ್ಜಾ ಪುತ್ರಿ

ವಿಡಿಯೋದಲ್ಲಿ ಮನೆಯಲ್ಲೇ ಶಾಸ್ತ್ರೋಕ್ತವಾಗಿ ಹೂ ಮುಡಿಸುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ನೆರವೇರಿರುವುದನ್ನು ಕಾಣಬಹುದು. ನಿಶ್ಚಿತಾರ್ಥದ ವಿಡಿಯೋ ಹಂಚಿಕೊಂಡ ಕೇವಲ ಒಂದು ದಿನದಲ್ಲೇ 1 ಮಿಲಿಯನ್​​ ಅಂದರೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಕಂಡಿದೆ. ಅಭಿಮಾನಿಗಳು ಸೇರಿದಂತೆ ಸಾಕಷ್ಟು ಕಲಾವಿದರು ಶುಭ ಕೋರಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Sun, 3 March 24