ಕನ್ನಡ “ಬಡ ಆರ್ಥಿಕತೆಯ” ಭಾಷೆ, ನಾನು ಇಂಗ್ಲಿಷ್ ಮಾತನಾಡುತ್ತೇನೆ, ಎಕ್ಸ್​​ನಲ್ಲಿ ಪೋಸ್ಟ್​​​ ವೈರಲ್​

ಕನ್ನಡದ ಬಗ್ಗೆ ಅನೇಕ ವಲಸಿಗರಿಗೆ ಗೌರವವಿಲ್ಲ ಎಂಬುದು ಇದೀಗ ವೈರಲ್‌ ಆಗಿರುವ ಪೋಸ್ಟ್​​​ನಿಂದ ಅರ್ಥವಾಗುತ್ತದೆ. ಕನ್ನಡವನ್ನು ಪ್ರತಿ ಬಾರಿ ಅವಮಾನಿಸಿ, ಕನ್ನಡಿಗರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಇದೀಗ ಮತ್ತೆ ಕನ್ನಡವನ್ನು ಬಡ ಆರ್ಥಿಕತೆ ಹೊಂದಿರುವ ಭಾಷೆ ಹೇಳಿರುವ ಪೋಸ್ಟ್‌ ಒಂದು ಎಕ್ಸ್​​​​​​​ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಬಡ ಆರ್ಥಿಕತೆಯ ಭಾಷೆ, ನಾನು ಇಂಗ್ಲಿಷ್ ಮಾತನಾಡುತ್ತೇನೆ, ಎಕ್ಸ್​​ನಲ್ಲಿ ಪೋಸ್ಟ್​​​ ವೈರಲ್​
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2025 | 6:05 PM

ಕನ್ನಡದ (Kannada) ಮೇಲೆ ಒಂದಲ್ಲ ಒಂದು ದಬ್ಬಾಳಿಕೆಗಳು ನಡೆಯುತ್ತಲೇ ಇದೆ. ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿ, ಕನ್ನಡಿಗರ ಕೋಪಕ್ಕೆ ಗುರಿಯಾದ ಅನೇಕರಿದ್ದಾರೆ.  ಕರ್ನಾಟಕದಲ್ಲಿ ಇದ್ದು ಕನ್ನಡಕ್ಕೆ ಅವಮಾನಿಸುವುದು ಎಷ್ಟು ಸರಿ. ಇದೀಗ ಮತ್ತೆ ಕನ್ನಡದ ಬಗ್ಗೆ ಅವಮಾನ ಮಾಡುವಂತೆ ಮಾತನಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದು  ವೈರಲ್​​​ ಆಗಿದೆ. ಕನ್ನಡ ಮತ್ತು ತಮಿಳಿನಂತಹ ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಕಲಿಯಲು ಯೋಗ್ಯವಲ್ಲ, “ಬಡ ಆರ್ಥಿಕತೆಯ” ಭಾಷೆಗಳು ಮತ್ತು “ಕಳಪೆ ಗುಣಮಟ್ಟದ ಜೀವನ” ಎಂದು ಎಕ್ಸ್​​ನಲ್ಲಿ ಬರೆದುಕೊಳ್ಳಲಾಗಿದೆ. ಇದೀಗ ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಭಾಷೆ ವಿಚಾರವಾಗಿ ಮತ್ತೆ ಕಿಚ್ಚು ಹಚ್ಚುವ ಕೆಲಸ ಆಗಿದೆ ಎಂದು ಅನೇಕರು ಕಮೆಂಟ್​​ ಮಾಡಿದ್ದಾರೆ. ಇದೀಗ ಈ ಪೋಸ್ಟ್​​ ಬೆಂಗಳೂರು ಮತ್ತು ಚೆನ್ನೈನಂತಹ ದಕ್ಷಿಣ ಭಾರತದ ನಗರಗಳ ಬಳಕೆದಾರರಿಂದ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಟೋಕಾಟೇಕ್ಸ್ (TokaTakes) ಎಂಬ ಎಕ್ಸ್​​ ಖಾತೆಯಲ್ಲಿ ಈ ಪೋಸ್ಟ್​​ನ್ನು ಹಂಚಿಕೊಳ್ಳಲಾಗಿದೆ.

ನಾನು ಜಪಾನ್‌ಗೆ ಹೋದರೆ, ನಾನು ಜಪಾನೀಸ್ ಕಲಿಯುತ್ತೇನೆ. ನಾನು ಚೀನಾಕ್ಕೆ ಹೋದರೆ, ನಾನು ಚೈನೀಸ್ ಕಲಿಯುತ್ತೇನೆ. ನಾನು ಬೆಂಗಳೂರಿಗೆ ಹೋದರೆ, ನಾನು ಇಂಗ್ಲಿಷ್ ಮಾತನಾಡುತ್ತೇನೆ. ನಾನು ಚೆನ್ನೈಗೆ ಹೋದರೆ, ನಾನು ಇಂಗ್ಲಿಷ್ ಮಾತನಾಡುತ್ತೇನೆ. ಬಡ ಆರ್ಥಿಕತೆ ಮತ್ತು ಕಳಪೆ ಗುಣಮಟ್ಟದ ಜೀವನ ಹೊಂದಿರುವ ಭಾಷೆಗಳನ್ನು ಕಲಿಯುವುದರಲ್ಲಿ ಅರ್ಥವಿಲ್ಲ ಎಂದು ಪೋಸ್ಟ್​​​ನಲ್ಲಿ ಹಂಚಿಕೊಳ್ಳಲಾಗಿದ್ದು, ಇಲ್ಲಿನ ಜನ ಭಾಷಾ ಚರ್ಚೆಗಳನ್ನು ಬಹಳ ಮಾಡಿಕೊಂಡಿದ್ದಾರೆ. ವಲಸಿಗರ ವಿರುದ್ಧ “ಭಾಷಾ ಕಿರುಕುಳ” ಮಾಡಲಾಗುತ್ತಿದೆ ಎಂದು ಈ ಪೋಸ್ಟ್​​​ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ
ವೈದ್ಯರೇ ಪತ್ತೆ ಮಾಡಲು ಆಗದ ಕಾಯಿಲೆ, ಚಾಟ್ ಜಿಟಿಪಿಯಿಂದ ಪತ್ತೆಯಾಯ್ತು
2BHK ಮನೆ, ಸಿಂಪಲ್​​ ಲೈಫ್, ನಿವೃತ್ತಿ ವೇಳೆಗೆ 4.7 ಕೋಟಿ ರೂ ಸಂಪಾದನೆ
ಟ್ರಾಫಿಕ್ ಜಾಮ್ ನಡುವೆ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಉದ್ಯಮಿ
ನಡುರಸ್ತೆಯಲ್ಲೇ ತಂದೆ ಮಗನ ಹೊಡೆದಾಟ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಈ ಪೋಸ್ಟ್​​​​ ಶ್ರೀಮಂತ ರಾಷ್ಟ್ರಗಳ ಭಾಷೆಗಳಿಗೆ ಹೋಲಿಸಿದರೆ ಭಾರತೀಯ ಭಾಷೆಗಳು ಶ್ರಮಕ್ಕೆ ಯೋಗ್ಯವಾಗಿಲ್ಲ ಎಂಬಂತೆ ಇತ್ತು ಎಂದು ಅನೇಕರು ಹೇಳಿದ್ದಾರೆ. ಈ ಪೋಸ್ಟ್ ತೀವ್ರ ಚರ್ಚೆಗೆ ನಾಂದಿ ಹಾಡಿದ್ದು, ಅನೇಕರು ಈ ಬಗ್ಗೆ ಕಾಮೆಂಟ್​​ ಮಾಡಿದ್ದಾರೆ. ಭಾಷೆ ಆಧಾರದ ಮೇಲೆ ನಿಮ್ಮ ಈ ನಿಲುವುವನ್ನು ನಾವು ಒಪ್ಪುದಿಲ್ಲ ಎಂದು ಹಲವು ಎಕ್ಸ್​​​ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ನಾಗರಿಕವಾಗಿ ವರ್ತಿಸುವ, ಸ್ಥಳೀಯ ಭಾಷೆಗಳನ್ನು ಕಲಿಯುವ ಮತ್ತು ಗೌರವಿಸುವ ಸಾಕಷ್ಟು ಜನರಿದ್ದಾರೆ. ವಿದೇಶಿಯರು ಸಹ ಅದನ್ನು ನಿರರ್ಗಳವಾಗಿ ಮತ್ತು ಹೆಮ್ಮೆಯಿಂದ ಮಾಡುತ್ತಾರೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಕಷ್ಟು ಸ್ಥಳೀಯರಿದ್ದಾರೆ. ಅವರಿಗೆ ಹೆಚ್ಚಿನ ವಲಸಿಗರ ಅಗತ್ಯವಿಲ್ಲ ಎಂದು ಖಡಕ್​​​​​​​ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ನಿಂತ ಮಳೆ ನೀರಿಗೆ ಬಿದ್ದ ಐಫೋನ್;‌ ದುಬಾರಿ ಫೋನ್‌ ಹೋಯ್ತಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಯುವಕ

ಇನ್ನೊಬ್ಬ ಬಳಕೆದಾರ ಈ ಪೋಸ್ಟ್​​ಗೆ ಬೆಂಬಲಿಸಿ ಕಮೆಂಟ್​​ ಮಾಡಿದ್ದಾರೆ. ನಾವು ಇಂಗ್ಲಿಷ್‌ನಲ್ಲಿ ಮಾತನಾಡಲು ಸಂತೋಷಪಡುತ್ತೇವೆ. ನಾವು ಹಿಂದಿ ಕಲಿಯುತ್ತೇವೆ ಎಂದು ನಿರೀಕ್ಷಿಸಬೇಡಿ ಎಂದು ಹೇಳಿದ್ದಾರೆ. ಬೆಂಗಳೂರು ಮತ್ತು ಚೆನ್ನೈನಂತಹ ನಗರಗಳಲ್ಲಿ ಭಾಷೆ ಬಹಳ ಹಿಂದಿನಿಂದಲೂ ಸೂಕ್ಷ್ಮ ಮತ್ತು ರಾಜಕೀಯ ವಿಷಯವಾಗಿದೆ, ಅಲ್ಲಿ ಕನ್ನಡ ಮತ್ತು ತಮಿಳಿನ ಮೇಲಿನ ಪ್ರಾದೇಶಿಕವಾಗಿ ಗೌರವವಿದೆ. ಆದರೆ ಇಂತಹ ವಸಿಗರು ಬಂದು ಅಲ್ಲಿ ಸಂಘರ್ಷ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sat, 12 July 25