ಈ ವಿಧಾನ ಸಭಾ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಕಾಣಿಸಿಕೊಳ್ಳುತ್ತೆ ದೆವ್ವ!
ದೆವ್ವ ಭೂತಗಳೆಂದರೆ ಎಲ್ಲರಿಗೂ ಭಯನೇ. ಇದೀಗ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಕಾಣಿಸಿಕೊಂಡಿರುವ ಯುವತಿಯ ನೆರಳಿನ ಆಕೃತಿಯೂ ಭದ್ರತಾ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಈ ಕಾರಣದಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವ ಭದ್ರತಾ ಸಿಬ್ಬಂದಿಗಳು ಭಯಭೀತರಾಗಿದ್ದು ರಾತ್ರಿ ಕರ್ತವ್ಯ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಕೋಲ್ಕತ್ತಾ, ಅಕ್ಟೋಬರ್ 31: ನೀವು ಆಗಾಗ ದೆವ್ವ ಭೂತದ ಕಥೆ ಕೇಳಿರುತ್ತೀರಿ. ದೆವ್ವ (Ghost) ಭೂತ ಕಾಣಿಸಿಕೊಂಡ ವಿಡಿಯೋಗಳನ್ನು ನೋಡಿರುತ್ತೀರಿ. ಆದರೆ ದೆವ್ವ ಕಾಣಿಸಿಕೊಂಡ ಅನುಭವ ಆದರೆ ಹೇಗಿರುತ್ತದೆ ಎಂದು ಒಮ್ಮೆ ಊಹಿಸಿ. ಆದರೆ ಪಶ್ಚಿಮ ಬಂಗಾಳದ ವಿಧಾನಸಭಾ (West Bengal Vidhana Sabha) ಕಟ್ಟಡದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಗಳಿಗೆ ಈ ಅನುಭವ ಆಗಿದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಯುವತಿಯ ನೆರಳಿನ ಆಕೃತಿಯನ್ನು ನೋಡಿದ್ದಾರೆಂದು ವರದಿಯಾಗಿವೆ.
ವಿಧಾನಸಭಾ ಮುಖ್ಯ ಕಟ್ಟಡದ ಎರಡನೇ ಮಹಡಿಯಲ್ಲಿ ಯುವತಿ ನೆರಳಿನ ಆಕೃತಿ ಕಾಣಿಸಿಕೊಂಡಿದೆ. ಈ ನೆರಳು ಆಕೃತಿ ಮೊದಲ ಮಹಡಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು, ಇದು ಭದ್ರತಾ ಸಿಬ್ಬಂದಿಯಲ್ಲಿ ಭಯವನ್ನು ಉಂಟು ಮಾಡಿದೆ. ಕೆಲ ಭದ್ರತಾ ಸಿಬ್ಬಂದಿ ವಿಧಾನಸಭೆಯ ಈ ಭಾಗದಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ.
ಇದನ್ನೂ ಓದಿ:ಹರ್ ಕಿ ಪೌರಿಯಲ್ಲಿ ತಿಲಕಕ್ಕಾಗಿ ಮಹಿಳೆಯರ ನಡುವೆ ಬಿಗ್ ಫೈಟ್
ವಿಧಾನಸಭೆ ಆವರಣದಲ್ಲಿ ನಿರ್ಮಾಣವಾಗಿರುವ ಭಯದ ವಾತಾವರಣದ ಈ ಸುದ್ದಿಯೂ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರವರೆಗೂ ತಲುಪಿದೆ. ಇಷ್ಟು ದೊಡ್ಡ ಸ್ಥಳ, ಇಷ್ಟು ದೊಡ್ಡ ಕಟ್ಟಡ, ಒಬ್ಬರು ಅಥವಾ ಇಬ್ಬರು ಜನರಿದ್ದರೆ ಭಯ ಇರುತ್ತದೆ. ಆದರೆ ಅದು ದೆವ್ವದ ಒತ್ತಡವೋ ಅಲ್ಲವೋ ನನಗೆ ತಿಳಿದಿಲ್ಲ. ಇದು ಮಾನಸಿಕ ಒತ್ತಡ ಆಗಿರಬಹುದು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Fri, 31 October 25








