
ಅಲ್ಲು ಅರ್ಜುನ್ (Allu Arjun) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ(Rashmika Mandanna) ಮಂದಣ್ದ ಅಭಿನಯದ ಪುಷ್ಟ(Pushpa) ಚಿತ್ರ ರಿಲೀಸ್ ಆಗಿ, ತಿಂಗಳುಗಳೇ ಕಳೆದಿವೆ. ಹೀಗಿದ್ದರೂ ಚಿತ್ರದ ಹಾಡು, ಡೈಲಾಗ್, ಅಲ್ಲು ಅರ್ಜುನ್ ಅವರ ಸಿಗ್ನೇಚರ್ ಸ್ಟೆಪ್ಗಳು ಇಂದಿಗೂ ವೈರಲ್ ಆಗುತ್ತಿವೆ. ಶ್ರೀವಲ್ಲಿ ಹಾಡಿನ ಕ್ರೇಜ್ ಅಂತೂ ಭಾರತ ಮಾತ್ರವಲ್ಲದೆ ವಿದೇಶಗಳಿಗೂ ಹಬ್ಬಿತ್ತು, ಇದೀಗ ವ್ಯಕ್ತಿಯೊಬ್ಬ ಪುಷ್ಟ ಚಿತ್ರದ ಶ್ರೀವಲ್ಲಿ ಹಾಡನ್ನು 5 ಭಾಷೆಗಳಲ್ಲಿ ಹಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟರ್ನಲ್ಲಿ ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಅವರು ಅದರ ವಿಡಿಯೋವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಶ್ರೀವಲ್ಲಿ ಹಾಡನ್ನು ಹಿಂದಿ, ತಮಿಳು, ಮಲಯಾಳಂ, ತೆಲುಗು ಮತ್ತು ಇನ್ನೊಂದು ಬಾರಿ ಹಿಂದಿ ಭಾಷೆಯಲ್ಲಿ ಹಾಡಿದ್ದಾರೆ. ಇದರ ವಿಡಿಯೋ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ನಿನ್ನೆ ರಾತ್ರಿ ವಿಡಿಯೋ ಹಂಚಿಕೊಂಡಿದ್ದು ನೂರಾರು ಬಾರಿ ಶೇರ್ ಆಗಿದ್ದು 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ವ್ಯಕ್ತಿಯ ಧ್ವನಿ ಕೇಳಿ ಕೇಳುಗರು ಅಮೇಜಿಂಗ್ ಎಂದಿದ್ದಾರೆ. ಕಾಮೆಂಟ್ನಲ್ಲಂತೂ ವ್ಯಕ್ತಿಯ ಪ್ರತಿಭೆ ಮತ್ತು ಆತನ ಕಂಠ ಮಾಧುರ್ಯವನ್ನು ಮೆಚ್ಚಿಕೊಂಡಿದ್ದಾರೆ. ಶ್ರೀವಲ್ಲಿ ಹಾಡಿಗೆ ಭಾರತ ಮಾತ್ರವಲ್ಲದೆ ವಿದೇಶಿಗರು ಕೂಡ ಸಖತ್ ಸ್ಟೆಪ್ ಹಾಕಿದ್ದರು. ಇದೀಗ 5 ಭಾಷೆಗಳಲ್ಲಿ ಒಂದೇ ಹಾಡನ್ನು ಹಾಡುವ ಮೂಲಕ ವಿಭಿನ್ನ ಪ್ರಯತ್ನ ಮಾಡಿದ್ದಾರೆ.
ಪುಷ್ಪ ಚಿತ್ರ ನಿರೀಕ್ಷೆಯಂತೆ ಯಶಸ್ಸು ಗಳಿಸಿದೆ. ಅಲ್ಲು ಅರ್ಜುನ್ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿದ ಪುಷ್ಪ ಚಿತ್ರಕ್ಕೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೊಸ ಅವತಾರ ನೆಟ್ಟಿಗರ ಮೆಚ್ಚುಗೆಗೂ ಕಾರಣವಾಗಿದೆ.
ಇದನ್ನೂ ಓದಿ:
Published On - 4:53 pm, Wed, 23 February 22