AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maruti 800 Viral Bill: ಕೇವಲ 60,000 ರೂ.ಗೆ ಸಿಗುತ್ತಿತ್ತು ಮಾರುತಿ 800 ಕಾರು! ಹಳೇ ಬಿಲ್ ನೋಡಿ ನೆಟ್ಟಿಗರು ಶಾಕ್!

ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ಮಾರುತಿ 800 ವಿಶೇಷ ಸ್ಥಾನ ಪಡೆದಿದೆ. ಇತ್ತೀಚೆಗೆ 1984ರ ಮಾರುತಿ 800 ಕಾರಿನ ಖರೀದಿ ಬಿಲ್ ವೈರಲ್ ಆಗಿದೆ. ರೂ. 47,500 ಎಕ್ಸ್-ಶೋರೂಮ್ ಬೆಲೆ ಅಂದಿನ ಕಾಲದ ಮೌಲ್ಯವನ್ನು ತೋರಿಸುತ್ತದೆ. ಆದರೆ ಇದರ ಅಸಲಿಯತ್ತಿನ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ, AI ಬಳಸಿ ನಕಲಿ ಬಿಲ್ ಸೃಷ್ಟಿಸಲಾಗಿದೆ ಎಂದು ವಾದಿಸಿದ್ದಾರೆ. ಆದಾಗ್ಯೂ, ಈ ಚಿತ್ರವನ್ನು ಪೋಸ್ಟ್ ಮಾಡಿದ ಮೂಲ ಖಾತೆಯಿಂದ ಈವರೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

Maruti 800 Viral Bill: ಕೇವಲ 60,000 ರೂ.ಗೆ ಸಿಗುತ್ತಿತ್ತು ಮಾರುತಿ 800 ಕಾರು! ಹಳೇ ಬಿಲ್ ನೋಡಿ ನೆಟ್ಟಿಗರು ಶಾಕ್!
ಮಾರುತಿ 800 ಹಳೆಯ ಬಿಲ್ ವೈರಲ್Image Credit source: instagram
ಅಕ್ಷತಾ ವರ್ಕಾಡಿ
|

Updated on: May 21, 2026 | 12:05 PM

Share

ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ‘ಮಾರುತಿ 800’ (Maruti 800) ಕಾರಿಗೆ ಎಂದಿಗೂ ವಿಶೇಷ ಸ್ಥಾನವಿದೆ. ಮಧ್ಯಮ ವರ್ಗದ ಕುಟುಂಬಗಳ ಕಾರು ಮಾಲೀಕತ್ವದ ಕನಸನ್ನು ನನಸು ಮಾಡಿದ ಕೀರ್ತಿ ಈ ಪುಟ್ಟ ಕಾರಿಗೆ ಸಲ್ಲುತ್ತದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದಶಕಗಳಷ್ಟು ಹಳೆಯದಾದ ಕಾರು ಖರೀದಿಯ ರಶೀದಿಯೊಂದು (ಬಿಲ್) ಸಖತ್ ವೈರಲ್ ಆಗುತ್ತಿದ್ದು, ಅಂದಿನ ದಿನಗಳಲ್ಲಿ ವಾಹನಗಳು ಎಷ್ಟು ಅಗ್ಗವಾಗಿದ್ದವು ಎಂಬುದನ್ನು ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ 1984ರ ಬಿಲ್:

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನ ‘namma_mysuru1994’ ಎಂಬ ಖಾತೆಯಲ್ಲಿ 1984ರ ಜುಲೈ 12ರ ದಿನಾಂಕ ಹೊಂದಿರುವ ಕಾರು ಖರೀದಿಯ ರಶೀದಿಯೊಂದನ್ನು ಹಂಚಿಕೊಳ್ಳಲಾಗಿದೆ. ಈ ಬಿಲ್ ಪ್ರಕಾರ, ಮಧ್ಯಪ್ರದೇಶದ ಬಾಗನ್ ಗ್ರಾಮದ ಶಾಮ್ ರಾವ್ ಎಂಬ ಗ್ರಾಹಕರು ಆಗಿನ ಕಾಲದ ಮಾರುತಿ 800 ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಅಂದಿನ ಎಕ್ಸ್ ಶೋರೂಮ್ ಬೆಲೆ ಕೇವಲ 47,500 ರೂಪಾಯಿಗಳಾಗಿತ್ತು! ಇದಕ್ಕೆ ಇನ್ಶೂರೆನ್ಸ್, ತೆರಿಗೆಗಳು ಮತ್ತು ಇತರೆ ಶುಲ್ಕಗಳನ್ನು ಸೇರಿಸಿದ ನಂತರ ಒಟ್ಟು ಆನ್ ರೋಡ್ ಬೆಲೆ ಸುಮಾರು 60,000 ರೂಪಾಯಿಗಳಾಗಿದೆ.

Maruti 800 Viral Bill

Maruti 800 Viral Bill

ಅಂದಿನ 60 ಸಾವಿರ ಇಂದಿನ 5-6 ಲಕ್ಷಕ್ಕೆ ಸಮಾನ:

ಈ ಬಿಲ್‌ನಲ್ಲಿರುವ ಬೆಲೆಯನ್ನು ನೋಡಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಆಶ್ಚರ್ಯಚಕಿತರಾಗಿದ್ದಾರೆ. ಆದರೆ ನೆಟ್ಟಿಗರು ಗಮನಿಸಿದ ಮತ್ತೊಂದು ಪ್ರಮುಖ ಅಂಶವೆಂದರೆ, 1984ರ ಕಾಲದ 60,000 ರೂಪಾಯಿಗಳು ಇಂದಿನ ಹಣದುಬ್ಬರ ಮತ್ತು ಮೌಲ್ಯದ ಲೆಕ್ಕಾಚಾರದಲ್ಲಿ ಸುಮಾರು 5 ರಿಂದ 6 ಲಕ್ಷ ರೂಪಾಯಿಗಳಿಗೆ ಸಮಾನವಾಗಿದೆ. ಅಂದಿನ ದಿನಗಳಲ್ಲಿ ಮಾರುತಿ 800 ಕಾರಿನಲ್ಲಿ ಕನಿಷ್ಠ ಹವಾನಿಯಂತ್ರಣ (AC) ಸೌಲಭ್ಯ ಕೂಡ ಇರುತ್ತಿರಲಿಲ್ಲ. ಆದರೂ ಭಾರತೀಯ ಮಾರುಕಟ್ಟೆಯಲ್ಲಿ ಇದು ಶ್ರೀಮಂತಿಕೆ ಅಥವಾ ಅಂತಸ್ತಿನ ಸಂಕೇತವಾಗಿ ಗುರುತಿಸಲ್ಪಟ್ಟಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

ಹಳೆಯ ನೆನಪುಗಳ ನಡುವೆ ಬಿಲ್‌ನ ಅಸಲಿತನದ ಬಗ್ಗೆ ಸಂಶಯ:

ಈ ವೈರಲ್ ಬಿಲ್ ಅನೇಕರಲ್ಲಿ ಹಳೆಯ ದಿನಗಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದ್ದರೆ, ಇನ್ನೂ ಕೆಲವು ನೆಟ್ಟಿಗರು ಈ ಬಿಲ್‌ನ ಅಸಲಿತನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಲ್‌ನಲ್ಲಿ ಬಳಕೆಯಾಗಿರುವ ಅಕ್ಷರಗಳ ಶೈಲಿ (Font) ಹಾಗೂ ಚಾಸಿಸ್ ವಿವರಗಳಲ್ಲಿ ಕೆಲವು ವ್ಯತ್ಯಾಸಗಳಿರುವುದನ್ನು ಗಮನಿಸಿರುವ ಕೆಲವರು, ಇದು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ಚಿತ್ರವಾಗಿರಬಹುದು ಎಂದು ಕಮೆಂಟ್ ಮಾಡಿದ್ದಾರೆ. ಆದಾಗ್ಯೂ, ಈ ಚಿತ್ರವನ್ನು ಪೋಸ್ಟ್ ಮಾಡಿದ ಮೂಲ ಖಾತೆಯಿಂದ ಈವರೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ
ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ