ಪಂಜಾಬ್ ಮದುವೆಯಲ್ಲಿ ವಧು-ವರರ ಮೇಲೆ ಹಣದ ಮಳೆ; ನೋಟಿನ ಬಂಡಲ್ ಎಸೆದ ಅತಿಥಿಗಳು!

ಪಂಜಾಬ್​ನ ವಿವಾಹದ ಸಂದರ್ಭದಲ್ಲಿ ದಂಪತಿಯ ಮೇಲೆ ನೋಟುಗಳ ಬಂಡಲ್‌ಗಳನ್ನು ಸುರಿಸಿದ ಅನಿವಾಸಿ ಭಾರತೀಯ ಅತಿಥಿಗಳ ವಿಡಿಯೋ ವೈರಲ್ ಆಗಿದೆ. ವಧು-ವರರ ಮೇಲೆ ನೋಟಿನ ಬಂಡಲ್​ಗಳನ್ನೇ ಎಸೆಯುತ್ತಾ ಹಣದ ಮಳೆ ಸುರಿಸಿರುವ ಅತಿಥಿಗಳ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ನಡೆದ ವಿವಾಹ ದೇಶದ ಗಮನ ಸೆಳೆದಿದೆ.

ಪಂಜಾಬ್ ಮದುವೆಯಲ್ಲಿ ವಧು-ವರರ ಮೇಲೆ ಹಣದ ಮಳೆ; ನೋಟಿನ ಬಂಡಲ್ ಎಸೆದ ಅತಿಥಿಗಳು!
Money Rain In Punjab Wedding

Updated on: Feb 18, 2026 | 5:50 PM

ತರಣ್ ತರಣ್, ಫೆಬ್ರವರಿ 18: ಪಂಜಾಬ್​ನ ತರಣ್ ತರಣ್ ಜಿಲ್ಲೆಯಲ್ಲಿ ನಡೆದ ಮದುವೆ (Wedding Video) ಸಮಾರಂಭದಲ್ಲಿ ವಧು-ವರರು ಅಲಂಕೃತ ವೇದಿಕೆಯ ಮೇಲೆ ನಿಂತಾಗ ಆ ಮದುವೆಗೆ ಬಂದಿದ್ದ ಅತಿಥಿಗಳು ನೋಟುಗಳ ಬಂಡಲ್‌ಗಳನ್ನು ಅವರತ್ತ ಎಸೆಯುವ ದೃಶ್ಯಗಳು ಕಂಡುಬಂದವು. ವೇದಿಕೆ ಮತ್ತು ಸುತ್ತಮುತ್ತಲಿನ ನೆಲ ಪೂರ್ತಿ ನೋಟುಗಳ ರಾಶಿಯಿಂದ ತುಂಬಿತ್ತು.

ಈ ಮದುವೆಗೆ ಹಾಜರಾಗಲು ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳಿಂದ ಅನಿವಾಸಿ ಭಾರತೀಯ (ಎನ್‌ಆರ್‌ಐ) ಅತಿಥಿಗಳು ಆಗಮಿಸಿದ್ದರು. ಮ್ಯೂಸಿಕ್ ಹಾಕುತ್ತಿದ್ದಂತೆ ಅವರು ನವವಿವಾಹಿತರ ಮೇಲೆ ಭಾರತೀಯ ರೂಪಾಯಿ ಮತ್ತು ಯುಎಸ್ ಡಾಲರ್‌ಗಳನ್ನು ಎಸೆದರು. ಈ ವೇಳೆ ಅತಿಥಿಗಳು ವೇದಿಕೆಯ ಸುತ್ತಲೂ ಡ್ಯಾನ್ಸ್ ಮಾಡುತ್ತಿದ್ದರು.

ಇದನ್ನೂ ಓದಿ: ಈ ಗ್ರಾಮದ ಸೊಸೆಯಂದಿರು ಸ್ಮಾರ್ಟ್​​ಫೋನ್ ಬಳಸುವಂತಿಲ್ಲ; ಕಾರಣ ಕೇಳಿದ್ರೆ ಆಶ್ಚರ್ಯ ಪಡುತ್ತೀರ!

ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಕೂಡ ಅತಿಥಿಗಳ ಈ ಸಂಭ್ರಮಾಚರಣೆಯಲ್ಲಿ ಸೇರಿಕೊಂಡರು. ಹಣ ತುಂಬಿದ ಚೀಲಗಳಿಂದ ನೋಟುಗಳನ್ನು ತೆಗೆದು ದಂಪತಿಯತ್ತ ಎಸೆಯಲಾರಂಭಿಸಿದರು. ನೆಲದಲ್ಲಿ ಚದುರಿದ ನೋಟುಗಳನ್ನು ಸಂಗ್ರಹಿಸಿ ವಿಂಗಡಿಸುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ಈ ಮದುವೆಯ ಸಂದರ್ಭದಲ್ಲಿ ಸುಮಾರು 5 ಲಕ್ಷ ರೂ.ಗಳನ್ನು ವೇದಿಕೆಯ ಮೇಲೆ ಸುರಿಯಲಾಗಿದೆ ಎಂದು ಹೇಳಲಾಗಿದೆ.

ಈ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವು ಬಳಕೆದಾರರು ಈ ದೃಶ್ಯವನ್ನು ಪಂಜಾಬಿ ವಿವಾಹದ ವೈಭವ ಎಂದು ಬಣ್ಣಿಸಿದರೆ, ಇನ್ನು ಕೆಲವರು ಇಂತಹ ಅದ್ದೂರಿ ಸಂಪತ್ತಿನ ಪ್ರದರ್ಶನದ ಅಗತ್ಯವನ್ನು ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us