Video: ಬಾತ್ ರೂಮ್‌ಗೆ ಹೋಗಲು ಟೈಮ್ ಇಲ್ಲ; ಮಗುವಿನ ಆರೈಕೆಯಲ್ಲಿ ಸುಸ್ತಾದ ಮಹಿಳೆ

ಮನೆ ನೋಡಿಕೊಳ್ಳುತ್ತಾ ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ. ಈ ಸಮಯದಲ್ಲಿ ಗಂಡನ ಬೆಂಬಲ ಬಹಳ ಮುಖ್ಯ. ಆದರೆ ಇಲ್ಲೊಬ್ಬಳು ಮಹಿಳೆ ನಿದ್ದೆಯಿಲ್ಲದೆ ಅದೆಷ್ಟೋ ರಾತ್ರಿ ಕಳೆದಿದ್ದಾಳೆ. ತನ್ನ ಗಂಡನ ಬೆಂಬಲವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾಳೆ. ಈ ವಿಡಿಯೋ ಸದ್ಯ ಎಕ್ಸ್ ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬಾತ್ ರೂಮ್‌ಗೆ ಹೋಗಲು ಟೈಮ್ ಇಲ್ಲ; ಮಗುವಿನ ಆರೈಕೆಯಲ್ಲಿ ಸುಸ್ತಾದ ಮಹಿಳೆ
ವೈರಲ್‌ ವಿಡಿಯೋ
Image Credit source: Twitter

Updated on: Nov 24, 2026 | 4:18 PM

ಪ್ರೀತಿ ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ (mother). ಮಕ್ಕಳನ್ನು ಬೆಳೆಸಲು ಎಲ್ಲವನ್ನೂ ತ್ಯಾಗ ಮಾಡ್ಬೇಕು. ಊಟ, ತಿಂಡಿ ಸರಿಯಾದ ಸಮಯಕ್ಕೆ ಆಗಲ್ಲ, ನಿದ್ದೆಯಿಲ್ಲದ ರಾತ್ರಿಗಳನ್ನು ಕಾಣಬಹುದು. ಮನೆ ಸಂಸಾರ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಹಿಳೆಯನ್ನು ಮಾನಸಿಕವಾಗಿ ಕುಗ್ಗಿಸಿದೆ. ತನ್ನ ಪತಿ ಆಫೀಸ್ ಪಾರ್ಟಿ ಸ್ನೇಹಿತರ ಜತೆಗೆ ಎಂಜಾಯ್ ಮೆಂಟ್, ಕ್ರಿಕೆಟ್ ಆಟ ಎಂದು ಯಾವಾಗಲೂ ಬ್ಯುಸಿಯಾಗಿರುತ್ತಾರೆ. ಆದರೆ ತಾನು ಮನೆ ಕೆಲಸ, ಮಗುವನ್ನು ನೋಡಿಕೊಳ್ಳುವುದು ಹೀಗೆ ಎಲ್ಲಾ ಜವಾಬ್ದಾರಿಯಿಂದ ನನ್ನ ಬಳಲಿ ಹೋಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಿಮ್ಮ ಪತಿಗೆ ಈ ಬಗ್ಗೆ ತಿಳಿಸಿ ಜವಾಬ್ದಾರಿಯನ್ನು ಹಂಚಿಕೊಳ್ಳಿ ಎಂದು ಮಹಿಳೆಗೆ ಸಲಹೆ ನೀಡಿದ್ದಾರೆ.

ಮನೆ ಮಕ್ಕಳ ಆರೈಕೆಯಲ್ಲಿ ಬಳಲಿದ ಮಹಿಳೆ

ರೋಸಿ (Rosy) ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮಹಿಳೆಯೊಬ್ಬಳು ಮನೆ ಮಕ್ಕಳ ಆರೈಕೆಯಿಂದ ತೀರಾ ಬಳಲಿದ್ದಾಳೆ. ಮಕ್ಕಳ ಆರೈಕೆಯಲ್ಲಿ ಪತಿಯ ಬೆಂಬಲವಿಲ್ಲ. ಮಹಿಳೆಯ ಮಾನಸಿಕ ಹಾಗೂ ದೈಹಿಕ ಹೊರೆಯನ್ನು ತೋರಿಸಲಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಮಹಿಳೆ ತನ್ನ ಐದು ತಿಂಗಳ ಮಗುವನ್ನು ಎತ್ತಿಕೊಂಡು ಮನೆಯೊಳಗೆ ಓಡಾಡುತ್ತಲೇ ತನ್ನ ಮಾನಸಿಕ ಹಾಗೂ ದೈಹಿಕವಾಗಿ ಎಷ್ಟು ನೊಂದಿದ್ದೇನೆ ಎಂದು ವಿವರಿಸಿದ್ದಾಳೆ.

Loading...

ವೈರಲ್‌ ವಿಡಿಯೋ ಇಲ್ಲಿದೆ


ಬಾತ್ ರೂಮ್ ಗೆ ಹೋಗಲು ಟೈಮ್ ಇಲ್ಲ

ಬೆಳಗ್ಗೆಯಿಂದ ಕಂದನನ್ನು ಎತ್ತಿಕೊಂಡು ಸುತ್ತಾಡುತ್ತಿದ್ದೇನೆ.  ಐದು ತಿಂಗಳು ತುಂಬಿದಾಗಿನಿಂದ ನಾನು ನಿದ್ದೆ ಅಂದ್ರೆ ಏನು ಎಂಬುದನ್ನೇ ನಾನು ಮರೆತುಬಿಟ್ಟಿದ್ದೇನೆ. ಇಡೀ ದಿನದಲ್ಲಿ ಕೇವಲ ಮೂರು ಬಾರಿ 20 ನಿಮಿಷ ಮಾತ್ರ ಮಲಗುತ್ತಾನೆ, ಎದ್ದ ತಕ್ಷಣ ಮತ್ತೆ ಎತ್ತಿಕೊಂಡು ಸುತ್ತಾಡಿಸಬೇಕು. ಬಾತ್ ರೂಮ್ ಗೆ ಹೋಗಲು ಟೈಮ್ ಇಲ್ಲ. ಬಾತ್‌ರೂಮ್‌ಗೆ ಹೋಗುವುದೇ ಒಂದು ಐಷಾರಾಮಿ ಅನುಭವ ಎನ್ನುವಂತಾಗಿದೆ. ಎರಡನೇ ಮಗು ಹುಟ್ಟಿದ ಬಳಿಕ ತಮ್ಮ ಗಂಡನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನನ್ನ ಗಂಡನಿಗೆ ಮಕ್ಕಳ ಬಗ್ಗೆ ಯಾವುದೇ ಚಿಂತೆಯೇ ಇಲ್ಲ. ನನ್ನ ಬದುಕು ನರಕವಾಗಿದೆ. ಆಫೀಸ್, ಪಾರ್ಟಿ, ಕ್ರಿಕೆಟ್ ಎಂದು ಯಾವಾಗಲೂ ಅದರಲ್ಲೇ ಮುಳುಗಿರುತ್ತಾರೆ. ಈಗೀಗ ಪ್ರತಿ ಶುಕ್ರವಾರ ಕ್ರಿಕೆಟ್ ಆಡಲು ಶುರುಮಾಡಿದ್ದಾರೆ.  ಹೀಗಾಗಿ ರಾತ್ರಿ 9 ಅಥವಾ 10 ಗಂಟೆಗೆ ಮನೆ ನೆನಪಾಗುತ್ತದೆ ಎಂದು ಬೇಜವಾಬ್ದಾರಿತನ ತೋರುವ ಪತಿ ವಿರುದ್ಧ ಗರಂ ಆಗಿದ್ದಾಳೆ.

ಗಂಡನ ನನ್ನ ಮೇಲೆ ರೇಗಾಡ್ತಾರೆ

ನಾನೇನಾದ್ರು ಫೋನ್ ಮಾಡಿ ಇನ್ನೂ ಮ್ಯಾಚ್ ಮುಗಿದಿಲ್ವಾ ಎಂದು ಕೇಳಿದ್ರೆ ಸಾಕು, ಮೈ ಬೀಳುತ್ತಾರೆ. ಸರಿಯಾಗಿ ಮಾತನಾಡುವುದನ್ನು ಕಲಿ ಎಂದು ನನ್ನ ಮೇಲೆ ರೇಗಾಡುತ್ತಾರೆ. ನನ್ನ ಮುಖ ನೋಡಿ, ನನ್ನ ಸ್ಥಿತಿ ಏನಾಗಿದೆ ಎಂದು ನಿಮಗೆ ಅರಿವಾಗುತ್ತದೆ. ನನ್ನ ಗಂಡನ ಮೇಲೆ ಎಷ್ಟೇ ಕೋಪ ಸಿಟ್ಟಿದ್ರು ಮಗುವಿನ ಮುಖ ನೋಡಿದ್ರೆ ಎಲ್ಲವೂ ಕರಗಿ ಹೋಗುತ್ತದೆ. ನನ್ನ ಕಂದನ ನಗು ನೋಡಿ ಎಷ್ಟು ಮುದ್ದಾಗಿದೆ ಎಂದು ಹೇಳಿದ್ದಾಳೆ. ಆದರೆ, ಈ ಮಹಿಳೆ ಸುಸ್ತಾಗಿ ಸೋಫಾದ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಮಗು ಮತ್ತೆ ಅಳಲು ಶುರುಮಾಡಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: ತಾಯಿ ಮಗಳ ಪುನರ್ಮಿಲನ; ಒಂದು ವರ್ಷದ ಬಳಿಕ ಮಗಳನ್ನು ಕಂಡು ಕಣ್ಣೀರು ಹಾಕಿದ ಹೆತ್ತಮ್ಮ

ಮಹಿಳೆಗೆ ಧೈರ್ಯ ತುಂಬಿದ ನೆಟ್ಟಿಗರು

ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದೇ ಕಾರಣಕ್ಕೆ ಅವಿಭಕ್ತ ಕುಟುಂಬ ಬೇಕೆನ್ನುವುದು ಎಂದಿದ್ದಾರೆ. ಇನ್ನೊಬ್ಬರು, ಆಕೆಗೆ ನಿಜವಾಗಿ ವಿಶ್ರಾಂತಿ ಹಾಗೂ ವಿಶೇಷ ಪ್ರೀತಿ ಬೇಕೆನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮಕ್ಕಳ ಆರೈಕೆ ಮಾಡುವುದು ಪತಿ ಪತ್ನಿ ಇಬ್ಬರ ಜವಾಬ್ದಾರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us