Viral Video: ಅಪಾಯ ಇದ್ರೂ ಇದೆಂಥಾ ಹುಚ್ಚಾಟ; ಚಲಿಸುತ್ತಿರುವ ರೈಲಿನಲ್ಲಿ ಯುವಕನ ಡೇಂಜರಸ್ ಸ್ಟಂಟ್
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಎಲ್ಲರನ್ನೂ ಬೆಚ್ಚಿ ಬಿಳಿಸುವಂತಿರುತ್ತವೆ. ಇದೀಗ ಅಂತಹದೇ ವಿಡಿಯೋವೊಂದು ವೈರಲ್ ಆಗಿದ್ದು, ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ಡೇಂಜರಸ್ ಸ್ಟಂಟ್ ಮಾಡಿದ್ದಾನೆ. ಈತನ ಈ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈಗ ಇದೊಂದು ಫ್ಯಾಷನ್ ಆಗಿ ಬಿಟ್ಟಿದೆ. ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್ ವಿಡಿಯೋಗಳಿಗೆ ಲೈಕ್ಸ್, ವೀವ್ಸ್ ಪಡೆಯಲು, ತಮ್ಮ ತಾಕತ್ತು ಪ್ರದರ್ಶಿಸುವ ಸಲುವಾಗಿ ಬಿಸಿ ರಕ್ತದ ಯುವಕರು ತಮ್ಮ ಜೀವದ ಬಗ್ಗೆ ಕಿಂಚಿತ್ತೂ ಯೋಚಿಸದೆ ಅಪಾಯಕಾರಿ ಸ್ಟಂಟ್ ಗಳನ್ನು ಮಾಡುತ್ತಿರುತ್ತಾರೆ. ಹೀಗೆ ಯುವ ಜನತೆ ಹುಚ್ಚಾಟ ಮೆರೆಯುವಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಇದೀಗ ಅಂತಹದೇ ವಿಡಿಯೋವೊಂದು ವೈರಲ್ ಆಗಿದ್ದು, ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ಡೇಂಜರಸ್ ಸ್ಟಂಟ್ ಮಾಡಿದ್ದಾನೆ. ಈತನ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಕೆಲ ದಿನಗಳ ಹಿಂದೆ ಮುಂಬೈನ ಸೆವ್ರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ರೈಲು ಚಲಿಸಲು ಆರಂಭಿಸುತ್ತಿದ್ದಂತೆ ಯುವಕನೊಬ್ಬ ರೈಲಿನ ಹ್ಯಾಂಡಲ್ ಹಿಡಿದು ಡೇಂಜರಸ್ ಸ್ಟಂಟ್ ಮಾಡಿದ್ದಾನೆ.
ಈ ಕುರಿತ ಪೋಸ್ಟ್ ಒಂದನ್ನು @introvert_hu_ji ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ರೈಲ್ವೆ ನಿಲ್ದಾಣದಿಂದ ರೈಲು ಹೊರಡುತ್ತಿದ್ದಂತೆ ರೈಲಿನ ಹ್ಯಾಂಡಲ್ ಹಿಡಿದು ಡೇಂಜರಸ್ ಸ್ಟಂಟ್ ಮಾಡಿ ಯುವಕನೊಬ್ಬ ರೈಲು ಹತ್ತುವ ದೃಶ್ಯವನ್ನು ಕಾಣಬಹುದು.
Bhai slipper kis company ke hain bass yah bata de 🥹😭 pic.twitter.com/0J22DfEgwH
— Introvert //🙇🏻♂️ (@introvert_hu_ji) March 17, 2024
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದ್ದು, ಯುವಕನ ಈ ಹುಚ್ಚಾಟಕ್ಕೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ