ಫ್ಲಾಪ್‌ ಆದ ಮಾರ್ಕೆಟಿಂಗ್‌ ತಂತ್ರ; ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಬಟ್ಟೆ ಮಾರಲು ಹೋದವನ ಕೈಗೆ ಸಿಕ್ಕಿದ್ದು ಬರೀ ಚಿಪ್ಪು

ರೈಲ್ವೆ ಸ್ಟೇಷನ್‌ನಲ್ಲಿ ಯಾರೋ ಹಳಿಯ ಪಕ್ಕದಲ್ಲೇ ನಿಂತುಕೊಂಡಿದ್ದಂತಹ ಸಂದರ್ಭದಲ್ಲಿ ಚಲಿಸುತ್ತಿದ್ದ ಟ್ರೈನ್‌ನಿಂದ ಕೈ ಹೊರ ಹಾಕಿ ಅವರ ಮೊಬೈಲ್‌, ಪರ್ಸ್‌ ಎಗರಿಸಿದಂತಹ ಒಂದಷ್ಟು ದೃಶ್ಯಗಳನ್ನು ನೋಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್‌ ಆಗುತ್ತಿದ್ದು, ತನ್ನ ಬಟ್ಟೆ ವ್ಯಾಪಾರವನ್ನು ಮಾರ್ಕೆಟಿಂಗ್‌ ಮಾಡುವ ಸಲುವಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ವೇಳೆ, ಬಂದಂತಹ ಟ್ರೈನ್‌ನಲ್ಲಿದ್ದ ಪ್ರಯಾಣಿಕರು ಆತನ ಕೈಯಲ್ಲಿದ್ದ ಶರ್ಟ್‌ಗಳನ್ನೇ ಎಗರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಫ್ಲಾಪ್‌ ಆದ ಮಾರ್ಕೆಟಿಂಗ್‌ ತಂತ್ರ; ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಬಟ್ಟೆ ಮಾರಲು ಹೋದವನ ಕೈಗೆ ಸಿಕ್ಕಿದ್ದು ಬರೀ ಚಿಪ್ಪು
ವೈರಲ್​ ವಿಡಿಯೋ
Edited By:

Updated on: Mar 11, 2025 | 3:38 PM

ವ್ಯಾಪಾರಸ್ಥರು ತಮ್ಮ ವ್ಯಾಪಾರರವನ್ನು (Business) ವೃದ್ಧಿಸುವ ಸಲುವಾಗಿ ಹಲವಾರು ಮಾರ್ಕೆಟಿಂಗ್‌ ತಂತ್ರ (Marketing Strategy) ಗಳನ್ನು ಮಾಡುತ್ತಿರುತ್ತಾರೆ. ಈಗಂತೂ ಹೆಚ್ಚಿನವರು ತಮ್ಮ ಉತ್ಪನ್ನ, ವ್ಯಾಪಾರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆಯ ಮಾರ್ಕೆಟಿಂಗ್‌ ಜಾಹೀರಾತುಗಳನ್ನು ನೀಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಬಟ್ಟೆ ವ್ಯಾಪಾರದ ಮಾರ್ಕೆಟಿಂಗ್‌ ಮಾಡುವ ಸಲುವಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ (Train Platform) ಬಳಿ ನಿಂತು ಒಂದಷ್ಟು ಶರ್ಟ್‌ಗಳನ್ನು ಹಿಡಿದು ವಿಡಿಯೋ ಮಾಡಿದ್ದು, ಆ ಸಮಯದಲ್ಲಿಯೇ ಟ್ರೈನ್‌ ಒಂದು ಬಂದಿದ್ದು, ಈತ ವಿಡಿಯೋ ಮಾಡುವ ಭರದಲ್ಲಿರುವಾಗಲೇ ರೈಲಿನಲ್ಲಿದ್ದ ಪ್ರಯಾಣಿಕರು ಈತನ ಕೈಯಲ್ಲಿದ್ದ ಶರ್ಟ್‌ಗಳನ್ನೇ ಎಗರಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಇದೀಗ ವೈರಲ್‌ ಆಗುತ್ತಿದೆ.

ಯುವಕನೊಬ್ಬ ರೈಲ್ವೆ ಪ್ಲಾಟ್‌ಫಾರ್ಮ್‌ ಬಳಿ ನಿಂತುಕೊಂಡು ಒಂದಷ್ಟು ಶರ್ಟ್‌ಗಳನ್ನು ಕೈಯಲ್ಲಿ ಹಿಡಿದು ತನ್ನ ವ್ಯಾಪಾರದ ಬಗ್ಗೆ ಜಾಹೀರಾತು ನೀಡುತ್ತಿದ್ದ ವೇಳೆ, ಟ್ರೈನ್‌ ಒಂದು ಬಂದಿದ್ದು, ಆ ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದ ಪ್ರಯಾಣಿಕರು ಕೈ ಹೊರ ಹಾಕಿ ಈತನ ಕೈಯಲ್ಲಿದ್ದ ಬಟ್ಟೆಗಳನ್ನು ಎಗರಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯುವಕನೋರ್ವ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ತನ್ನ ಕೈಯಲ್ಲಿ ಕೆಲವು ಶರ್ಟ್‌ಗಳನ್ನು ಹಿಡಿದು ಕ್ಯಾಮೆರಾದ ಮುಂದೆ ಪ್ರಚಾರ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಸ್ನೇಹಿತರೇ, ಇಂದು ನಾವು ನಿಮಗಾಗಿ ಪ್ರೀಮಿಯಂ ಶರ್ಟ್‌ಗಳನ್ನು ತಂದಿದ್ದೇವೆ, ಅವು ಮಾರುಕಟ್ಟೆಯಲ್ಲಿ ತುಂಬಾ ಟ್ರೆಂಡಿಂಗ್ ಆಗಿವೆ ಎಂದು ಹೇಳುತ್ತಾ ಪ್ರಚಾರ ಮಾಡುತ್ತಿದ್ದಾಗ ಅದೇ ಸಮಯದಲ್ಲಿ, ರೈಲೊಂದು ಬಂದಿದ್ದು, ಆ ರೈಲಿನ ಫುಟ್‌ ಬೋರ್ಡ್‌ನಲ್ಲಿ ನಿಂತಿದ್ದ ಒಂದಷ್ಟು ಪ್ರಯಾಣಿಕರು ಈತನ ಕೈಯಲ್ಲಿದ್ದ ಶರ್ಟ್‌ಗಳನ್ನು ಎಗರಿಸಿದ್ದಾರೆ.

ಇದನ್ನೂ ಓದಿ
ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನೇ ಜೀವಂತ ಸುಟ್ಟು ಹಾಕಿದ ಮಹಿಳೆ
ವರನಿಗೆ ಮೆಸೇಜ್‌ ಮಾಡಿ ಮದುವೆ ಹಿಂದಿನ ದಿನ ನಾಪತ್ತೆಯಾದ ವಧು
ಪ್ರವಾಸಿಗರೆದುರೇ ಮರಿಗೆ ಜನ್ಮ ನೀಡಿದ ಆನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌

ಇದನ್ನೂ ಓದಿ: ಚಲಿಸುತ್ತಿರುವ ಟ್ರೈನಿನಲ್ಲಿ ಡೇಂಜರಸ್‌ ಸ್ಟಂಟ್ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವಕ; ಮುಂದೇನಾಯ್ತು ನೋಡಿ

ಮಾರ್ಚ್‌ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ವೈರಲ್‌ ಆಗುವ ಸಲುವಾಗಿಯೇ ಮಾಡಿದಂತಹ ವಿಡಿಯೋದಂತಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್‌ ಎಂದು ವ್ಯವಸ್ಥಿತವಾಗಿ ಕಾಣುತ್ತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈತನ ಮಾರ್ಕೆಟಿಂಗ್‌ ತಂತ್ರದಿಂದ ಅವರಿಗೆ ಫ್ರೀ ಬಟ್ಟೆ ಸಿಕ್ತುʼ ಎಂದು ತಮಾಷೆ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ