ಖ್ಯಾತ ಪೇಸ್ಟ್ರಿ ಬಾಣಸಿಗ(Pastry Chef )ಅಮೊರಿ ಗುಯಿಚನ್ (Amaury Guichon) ಈ ಬಾರಿ ಚಾಕೋಲೇಟ್ನಲ್ಲಿ ಹುಲಿಯನ್ನು ತಯಾರಿಸಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ಇವರು ಈಗಾಗಲೇ ವಿವಿಧ ಪ್ರಾಣಿ, ಮನುಷ್ಯರ ರೀತಿ ಚಾಕೋಲೇಟ್ನಲ್ಲಿ ಆಕೃತಿಯನ್ನು ನಿರ್ಮಿಸಿ ಖ್ಯಾತಿಗಳಿಸಿದ್ದಾರೆ. ಇದೀಗ ಚೀನಾದ ಹೊಸ ವರ್ಷದ ಹಿನ್ನಲೆ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಲು ಚಾಕೋಲೇಟ್ನಲ್ಲಿ ಹುಲಿಯನ್ನು ತಯಾರಿಸಿದ್ದಾರೆ. ಫೆಬ್ರವರಿ 1 ರಂದು ಚೀನಾ ಹೊಸ ವರ್ಷವನ್ನು (China New Year) ಸ್ವಾಗತಿಸಿದೆ. ಈ ಹಿನ್ನಲೆಯಲ್ಲಿ ಅಮೊರಿ ಗುಯಿಚನ್ ವಿಶೇಷ ಕಲಾಕೃತಿ ತಯಾರಿಸಿದ್ದಾರೆ. ಚಾಕೋಲೇಟ್ ಹುಲಿದ ತಯಾರಿಕೆಯ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಮೊದಲು ಚಾಕೋಲೇಟ್ಅನ್ನು ಹುಲಿಯ ವಿವಿಧ ಭಾಗಗಳ ಆಕೃತಿಯಲ್ಲಿ ತಯಾರಿಸಿಕೊಳ್ಳುತ್ತಾರೆ. ನಂತರ ಅದನ್ನು ಒಂದೊಂದಾಗಿ ಜೋಡಿಸಿ, ಬಣ್ಣವನ್ನು ಹಚ್ಚುತ್ತಾರೆ. ಹುಲಿಯ ಎಲ್ಲಾ ಭಾಗಗಳಲ್ಲಿ ಬೇಕಾದ ಬಣ್ಣವನ್ನು ಸ್ಪ್ರೇ ಮಾಡುತ್ತಾರೆ. ಕಣ್ಣು, ಹುಲಿಯ ಮೈಮೇಲಿನ ಪಟ್ಟೆಗಳು, ಮೀಸೆ ಎಲ್ಲವನ್ನೂ ತಮ್ಮ ಕೈಚಳಕದ ಮೂಲಕ ಮೂಡಿಸುತ್ತಾರೆ. ಇದೇನು ಮೊದಲ ಬಾರಿಯಲ್ಲ ಈ ಹಿಂದೆಯೂ ಅಮೊರಿ ಗುಯಿಚನ್ ಅನೇಕ ಆಕೃತಿಗಳನ್ನು ತಯಾರಿಸಿ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದಾರೆ.
ಇದೀಗ ಚೀನಾದ ನ್ಯೂ ಇಯರ್ ಸಂಭ್ರಮಕ್ಕೆ ಚಾಕಲೋಟ್ಹುಲಿಯ ಆಕೃತಿ ತಯಾರಿಸಿದ ಅಮೊರಿ ಗುಯಿಚನ್ ಅದರೊಂದಿಗೆ ನಿಂತು ಪೋಸ್ ನೀಡಿದ್ದಾರೆ. ಫೆ.1 ರಂದು ಹಂಚಿಕೊಂಡ ವಿಡಿಯೋ 4.7 ಲಕ್ಷ ಲೈಕ್ಸ್ ಪಡೆದಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಇದನ್ನೂ ಓದಿ:
Viral Video; ಮೃಗಾಲಯದಲ್ಲಿದ್ದ ಕರಡಿ ಬೋನ್ಗೆ 3 ವರ್ಷದ ಮಗುವನ್ನು ಎಸೆದ ಮಹಿಳೆ
Published On - 5:40 pm, Wed, 2 February 22