ರೈಲು(Train) ವಿಳಂಬವಾಗುವುದು ಭಾರತದಲ್ಲಿ ಹೊಸತೇನಲ್ಲ, ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದಲೂ, ಕೆಲವೊಮ್ಮೆ ಹವಾಮಾನ ವೈಪರೀತ್ಯದಿಂದಲೂ ರೈಲುಗಳು ಗಂಟೆಗಟ್ಟಲೆ ನಿಂತಿರುವುದನ್ನು ಕಾಣಬಹುದು. ಆದರೆ ಆಗ್ರಾದ ರೈಲು ನಿಲ್ದಾಣವೊಂದರಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ರೈಲು ಅರ್ಧ ಗಂಟೆ ನಿಂತಲ್ಲೇ ನಿಂತಿತ್ತು.
ಸ್ಟೇಷನ್ ಮಾಸ್ಟರ್ ನಿದ್ರೆಗೆ ಜಾರಿದ್ದ ಕಾರಣ ಗ್ರೀನ್ ಸಿಗ್ನಲ್ ಸಿಗದೆ ರೈಲೊಂದು ಅರ್ಧಗಂಟೆಗಳ ಕಾಲ ನಿಲ್ದಾಣದಲ್ಲೇ ನಿಂತಿದ್ದ ಘಟನೆ ನಡೆದಿದೆ.
ನಾವು ಸ್ಟೇಷನ್ ಮಾಸ್ಟರ್ ವಿರುದ್ಧ ಕ್ರಮ ಕೈಗೊಲ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಡಿ ಮೋಡ್ ರೈಲು ನಿಲ್ದಾಣವು ಇಟಾವಾಗೆ ಮುಂಚಿತವಾಗಿ ಬರುವ ಒಂದು ಸಣ್ಣ ಹಾಗೂ ಪ್ರಮುಖ ನಿಲ್ದಾಣವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಏಕೆಂದರೆ ಆಗ್ರಾ ಜೊತೆಗೆ ಝಾನ್ಸಿಯಿಂದ ಪ್ರಯಾಗರಾಜ್‌ಗೆ ಹೋಗುವ ರೈಲುಗಳು ಸಹ ಈ ನಿಲ್ದಾಣದ ಮೂಲಕ ಹಾದು ಹೋಗುತ್ತವೆ.
ಮತ್ತಷ್ಟು ಓದಿ:Indian Railway: ರೈಲುಗಳಿಗೂ ಇದೆ ಜೀವಿತಾವಧಿ; ರೈಲು ಎಷ್ಟು ಸಮಯದವರೆಗೆ ಸೇವೆ ನೀಡಬಲ್ಲದು?
ರೈಲಿನ ಲೋಕೋ ಪೈಲಟ್ ಸ್ಟೇಷನ್ ಮಾಸ್ಟರ್ ಅನ್ನು ಎಬ್ಬಿಸಲು ಹಲವಾರು ಬಾರಿ ಹಾರ್ನ್ ಹಾಕಬೇಕಾಯಿತು.
ಸ್ಟೇಷನ್ ಮಾಸ್ಟರ್ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ. ಡ್ಯೂಟಿಯಲ್ಲಿದ್ದ ‘ಪಾಯಿಂಟ್ಸ್ ಮನ್’ ಹಳಿಗಳ ಪರಿಶೀಲನೆಗೆ ಜೊತೆಯಲ್ಲಿ ಹೋಗಿದ್ದರಿಂದ ನಿಲ್ದಾಣದಲ್ಲಿ ಒಬ್ಬರೇ ಇದ್ದಿದ್ದಾಗಿ ಹೇಳಿದರು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ