Viral: ನಕಲಿ ಗಾಯ ತೋರಿಸಿ ರಜೆ ತೆಗೆದುಕೊಳ್ಳಿ; ಸಿಕ್ ಲೀವ್‌ ಪಡೆಯಲು ಹೊಸ ಟ್ರಿಕ್ಸ್‌ ಹೇಳಿಕೊಟ್ಟ ಮೆಕಪ್‌ ಆರ್ಟಿಸ್ಟ್

ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಭಾರೀ ಚರ್ಚೆಯನ್ನು ಹುಟ್ಟು ಹಾಕುತ್ತವೆ. ಅಂತಹದ್ದೊಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಮೇಕಪ್‌ ಆರ್ಟಿಸ್ಟ್‌ ಒಬ್ರು ಆಫೀಸ್‌ನಲ್ಲಿ ಅನಾರೋಗ್ಯ ರಜೆ ಪಡೆಯಲು ದೇಹದ ಮೇಲೆ ನಕಲಿ ಆಕ್ಸಿಡೆಂಟ್‌ ಗಾಯದ ಗುರುತುಗಳನ್ನು ಹೇಗೆ ಮಾಡುವುದು ಎಂಬ ಬಗ್ಗೆ ಹೇಳಿ ಕೊಟ್ಟಿದ್ದಾರೆ. ಆದ್ರೆ ಈ ವಿಡಿಯೋ ಇದೀಗ ಭಾರೀ ಟೀಕೆಗಳನ್ನು ಎದುರಿಸುತ್ತಿದೆ.

Viral: ನಕಲಿ ಗಾಯ ತೋರಿಸಿ ರಜೆ ತೆಗೆದುಕೊಳ್ಳಿ; ಸಿಕ್ ಲೀವ್‌ ಪಡೆಯಲು ಹೊಸ ಟ್ರಿಕ್ಸ್‌ ಹೇಳಿಕೊಟ್ಟ ಮೆಕಪ್‌ ಆರ್ಟಿಸ್ಟ್
ವೈರಲ್​​ ವಿಡಿಯೋ
Edited By:

Updated on: Apr 02, 2025 | 4:13 PM

ಕೆಲವೊಂದು ಬಾರಿ ಕೆಲಸದ ಒತ್ತಡ ಹೆಚ್ಚಿದ್ದ ಸಂದರ್ಭದಲ್ಲಿ ಹಲವು ಕಂಪೆನಿಗಳು ರಜೆ (leave) ಕೊಡಲು ನಿರ್ಬಂಧಗಳನ್ನು ವಿಧಿಸುತ್ತವೆ. ಇಂತಹ ಸಂದರ್ಭದಲ್ಲಿ ಒಂದಷ್ಟು ಉದ್ಯೋಗಿಗಳು ಅನಾರೋಗ್ಯವೆಂಬ (sick) ಸುಳ್ಳು ಕಾರಣಗಳನ್ನು ಕೊಟ್ಟು ರಜೆ ಪಡೆದುಕೊಳ್ಳುತ್ತಾರೆ. ಜ್ವರ, ತಲೆನೋವು ಅಂತೆಲ್ಲಾ ಹೇಳಿ ರಜೆ ತೆಗೆದುಕೊಳ್ಳುವವರು ಇದ್ದಾರೆ. ಎರಡು ಮೂರು ದಿನಗಳಿಗಿಂತ ಹೆಚ್ಚಿನ ಸಿಕ್‌ ಲೀವ್‌ (sick leave) ಪಡೆಯಲು ಇಲ್ಲೊಬ್ರು ಪುಣೆ (Pune) ಮೂಲದ ಮೇಕಪ್‌ ಆರ್ಟಿಸ್ಟ್‌ (makeup artist) ಮೇಕಪ್‌ ಟ್ರಿಕ್ಸ್‌ ಹೇಳಿಕೊಟ್ಟಿದ್ದಾರೆ. ಮೇಕಪ್‌ ಮುಖಾಂತರ ದೇಹದ ಮೇಲೆ ನಕಲಿ ಆಕ್ಸಿಡೆಂಟ್‌ ಗಾಯಗಳನ್ನು ಮಾಡಿಕೊಂಡು ಹೇಗೆ ಸಿಕ್‌ ಲೀವ್‌ ಪಡೆಯಬಹುದು ಎಂದು ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದ್ದು, ಟೀಕೆಗಳನ್ನು ಕೂಡಾ ಎದುರಿಸುತ್ತಿದೆ.

ಪುಣೆ ಮೂಲದ ಮೇಕಪ್‌ ಆರ್ಟಿಸ್ಟ್‌ ಸಿಕ್‌ ಲೀವ್‌ ಪಡೆಯಲು ದೇಹದ ಮೇಲೆ ನಕಲಿ ಆಕ್ಸಿಡೆಂಟ್‌ ಗಾಯದ ಗುರುತುಗಳನ್ನು ಹೇಗೆ ಮಾಡುವುದು ಎಂಬುದನ್ನು ಕಲಿಸಿಕೊಟ್ಟಿದ್ದಾರೆ. ಈ ಮೇಕಪ್‌ ಟ್ಯುಟೋರಿಯಲ್‌ ವೀಡಿಯೊ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದು, ಮನರಂಜನೆಯ ಉದ್ದೇಶಕ್ಕಾಗಿ ಮಾಡಲಾದ ಈ ವೀಡಿಯೊ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮೇಕಪ್ ಆರ್ಟಿಸ್ಟ್‌ ಪ್ರೀತಮ್ ಜುಜಾರ್ ಕೊಥವಾಲಾ (faridas_makeup_studio) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊಗಳನ್ನು ಹಂಚಿಕೊಂಡಿದ್ದು, “ಇದು ಕೇವಲ ಮನೋರಂಜನೆಯ ಉದ್ದೇಶಕ್ಕಾಗಿ ಮಾತ್ರ, ದಯವಿಟ್ಟು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮೇಕಪ್‌ ಆರ್ಟಿಸ್ಟ್‌ ಮುಖದ ಮೇಲೆ ನಕಲಿ ಗಾಯದ ಗುರುತುಗಳನ್ನು ಹೇಗೆ ಮಾಡುವುದು ಎಂಬುದನ್ನು ತೋರಿಸಿಕೊಡುವಂತಹ ದೃಶ್ಯವನ್ನು ಕಾಣಬಹುದು. ಇದು ಐಟಿ ಕಂಪೆನಿಯ ಉದ್ಯೋಗಿಗಳ ಸಲುವಾಗಿ ಮಾಡಿದ್ದು, ರಜೆ ಪಡೆಯಲು ಹೀಗೆ ಮಾಡಿ ಎಂದು ಹೇಳಿ ಮೇಕಪ್‌ ಮೂಲಕ ಮುಖದ ಮೇಲೆ ಆಕ್ಸಿಡೆಂಟ್‌ ಗಾಯದ ಗುರುತುಗಳನ್ನು ಹೇಗೆ ಮಾಡುವುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ ಈ ವಿಡಿಯೋವನ್ನು ಮ್ಯಾನೇಜರ್‌ಗೆ ತೋರಿಸದಿರಿ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ: ಜಾಮ್‌ನಗರದಿಂದ ದ್ವಾರಕಾಕ್ಕೆ ಪಾದಯಾತ್ರೆ; ದಾರಿ ಮಧ್ಯೆ ಕೋಳಿ ಹಿಂಡನ್ನು ರಕ್ಷಿಸಿದ ಅನಂತ್‌ ಅಂಬಾನಿ

ಒಂದು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 33.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತಮಾಷೆಯಲ್ಲ, ಇದು ಕೆಲಸದ ಸ್ಥಳದಲ್ಲಿನ ಅನೈತಿಕತೆ ಮತ್ತು ಅಪ್ರಾಮಾಣಿಕತೆಯನ್ನು ತೋರಿಸುತ್ತದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಲ್ಲಿ ನೈತಿಕತೆ ಎಲ್ಲಿದೆ, ಇಂತಹ ಹುಚ್ಚಾಟವನ್ನು ಯಾರು ಪ್ರಯತ್ನಿಸದಿರಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವಿನ ವಿಶ್ವಾಸವನ್ನು ಕಡಿಮೆ ಮಾಡುವ ನಾಚಿಕೆಗೇಡಿನ ಪ್ರಯತ್ನ ಇದುʼ ಎಂದು ಕಿಡಿ ಕಾರಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:24 pm, Wed, 2 April 25

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us