AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ದಿನಸಿ ಅಂಗಡಿಯಲ್ಲಿ ಸಾಮಗ್ರಿ ಖರೀದಿಸಿ ವಿಶಿಷ್ಟ ಅನುಭವ ತೆರೆದಿಟ್ಟ ಅಮೆರಿಕನ್ ಮಹಿಳೆ

ಇತ್ತೀಚೆಗಿನ ದಿನಗಳಲ್ಲಿ ತಮಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನು ಆನ್ಲೈನ್ ನಲ್ಲಿ ಖರೀದಿ ಮಾಡುವವರೇ ಹೆಚ್ಚು. ಆದರೆ ವಿದೇಶಿ ಮಹಿಳೆ ದೆಹಲಿಯ ಬೀದಿಗಳಲ್ಲಿ ಅಲೆದಾಡಿ ದಿನಸಿ ಅಂಗಡಿಯಲ್ಲಿ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ತನ್ನ ವಿಶಿಷ್ಟ ಅನುಭವದ ವಿಡಿಯೋ ಹಂಚಿಕೊಂಡಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ದಿನಸಿ ಅಂಗಡಿಯಲ್ಲಿ ಸಾಮಗ್ರಿ ಖರೀದಿಸಿ ವಿಶಿಷ್ಟ ಅನುಭವ ತೆರೆದಿಟ್ಟ ಅಮೆರಿಕನ್ ಮಹಿಳೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Oct 20, 2026 | 11:58 AM

Share

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (Online shopping) ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೌದು, ಬ್ಲಿಂಕ್‌ಇಟ್ ಅಥವಾ ಇನ್‌ಸ್ಟಾಮಾರ್ಟ್‌ನಂತಹ ತ್ವರಿತ ವಾಣಿಜ್ಯದ ಈ ಯುಗದಲ್ಲಿ ನಾವಿದ್ದೇವೆ. ಆದರೆ ಅಮೆರಿಕದಿಂದ ಬಂದು ದೆಹಲಿಯಲ್ಲಿ ನೆಲೆಸಿರುವ ವಿದೇಶಿ ಮಹಿಳೆ ದಿನಬಳಕೆಯ ವಸ್ತುಗಳನ್ನು ಕಿರಾಣಿ ಅಂಗಡಿಯಲ್ಲಿ ಖರೀದಿ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಕಾಣಸಿಗುವ ಭಾರತೀಯ ದಿನಸಿ ಅಂಗಡಿಗಳನ್ನು ಹಾಡಿ ಹೊಗಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದಿನಸಿ ವಸ್ತುಗಳನ್ನು ಖರೀದಿಸಿದ ವಿದೇಶಿ ಮಹಿಳೆ

ಅಮೇರಿಕನ್ ಕಂಟೆಂಟ್ ಕ್ರಿಯೇಟರ್ ಕ್ರಿಸ್ಟನ್ ಫಿಶರ್ (Kristen Fischer) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ವಿದೇಶಿ ಮಹಿಳೆ ಮನೆಯಿಂದ ಸ್ವಲ್ಪವೇ ದೂರದಲ್ಲಿರುವ ದಿನಸಿ ಅಂಗಡಿಗೆ ಬೆಳಗ್ಗಿನ ಜಾವ ನಡೆದುಕೊಂಡು ಹೋಗಿದ್ದಾರೆ. ಹಾಲು ಸೇರಿದಂತೆ ಮನೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಖರೀದಿಸಿ ಅಂಗಡಿ ಮಾಲೀಕನಿಗೆ ಹಣ ಕೊಟ್ಟು ನಗುತ್ತಾ ಮನೆಗೆ ಹಿಂತಿರುಗುವುದನ್ನು ಇಲ್ಲಿ ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಕಿರಾಣಿ ಅಂಗಡಿಗಳನ್ನು ಮೆಚ್ಚಿಕೊಂಡ ವಿದೇಶಿ ಮಹಿಳೆ

ಭಾರತದ ಬಗ್ಗೆ ನನಗೆ ಅತ್ಯಂತ ಇಷ್ಟವಾದ ವಿಷಯವೆಂದರೆ ರಸ್ತೆಯ ಪ್ರತಿಯೊಂದು ಮೂಲೆಯಲ್ಲಿ ಈ ರೀತಿಯ ಸಣ್ಣ ಅಂಗಡಿಗಳಿವೆ. ನಿಮಗೆ ಬೇಕಾಗಿರುವುದೆಲ್ಲವೂ ಕೆಲವೇ ಕೆಲವು ಹೆಜ್ಜೆಗಳ ದೂರದಲ್ಲಿ ಸಿಗುತ್ತದೆ. ಇದು ತುಂಬಾ ತ್ವರಿತ ಮತ್ತು ಅನುಕೂಲಕರವಾಗಿದೆ. ಈ ಸ್ಥಳೀಯ ದಿನಸಿ ಅಂಗಡಿಗಳು ಭಾರತದ ಆರ್ಥಿಕತೆಯ ಬೆನ್ನೆಲುಬು ಹಾಗೂ ದೇಶದ ಹೆಮ್ಮೆ ಎಂದು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: ಅಂಡಮಾನ್ ಸೌಂದರ್ಯಕ್ಕೆ ಮನಸೋತ ಕೊರಿಯನ್ ಮಹಿಳೆ

ನೆಟ್ಟಿಗರ ಕಾಮೆಂಟ್‌ಗಳು ಹೀಗಿವೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾವು ಭಾರತೀಯರು ಸುಲಭವಾಗಿ ಸಿಗುವ ಹಾಗೂ ಸಣ್ಣ ವಿಷಯಗಳನ್ನು ಮೆಚ್ಚಿಕೊಳ್ಳಲು ಮರೆಯುತ್ತೇವೆ. ಆದರೆ, ಅಮೆರಿಕಾದಲ್ಲಿ, ನೀವು ಕಾರು ಇಲ್ಲದೆ ಎಲ್ಲಿಗೂ ಹೋಗಲು ಸಾಧ್ಯವಿಲ್ಲ; ಸಣ್ಣ ವಿಷಯಗಳಿಗೂ ನೀವು ಮೈಲುಗಟ್ಟಲೆ ಹೋಗಬೇಕು ಎಂದು ವಾಸ್ತವತೆ ಬಗ್ಗೆ ಹೇಳಿದ್ದಾರೆ. ಇನ್ನೊಬ್ಬರು, ಸಣ್ಣ ಪುಟ್ಟ ವಿಷ್ಯಗಳನ್ನು ಮೆಚ್ಚಿಕೊಳ್ಳುವ ವಿದೇಶಿಗರೇ ನಮಗೆ ಮಾದರಿ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, ನಾವು ಅನಿವಾಸಿ ಭಾರತೀಯರು ಅಮೆರಿಕಕ್ಕೆ ತೆರಳಿ ಕಾಸ್ಟ್ಕೊದಂತಹ ದೊಡ್ಡ ಮಾಲ್‌ಗಳಲ್ಲಿ ಖರೀದಿ ಮಾಡುವಾಗ, ಅಮೆರಿಕದ ಮಹಿಳೆಯೊಬ್ಬರು ಭಾರತದ ಒಂದು ಸಣ್ಣ ಅಂಗಡಿಯಲ್ಲಿ ಶಾಪಿಂಗ್ ಮಾಡುವುದರಲ್ಲಿ ಖುಷಿ ಕಾಣುತ್ತಾರೆ ಎಂಬುದು ನಿಜಕ್ಕೂ ಅಚ್ಚರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ
ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ