Viral Video: 33 ಕೋಟಿ ರೂ. ಗೆದ್ದ ವ್ಯಕ್ತಿ, ಖುಷಿ ತಡೆಯಲಾರದೇ ಹೃದಯಾಘಾತದಿಂದ ಸಾವು

ಹೆಚ್ಚು ಖುಷಿಯಾದ್ರೂ ಹಾರ್ಟ್‌ ಅಟ್ಯಾಕ್‌ ಸಂಭವಿಸುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಸಿಂಗಾಪುರದ  ಮರೀನಾ ಬೇ ಕ್ಯಾಸಿನೋದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಜೂಜಿನಲ್ಲಿ ನಾಲ್ಕು ಮಿಲಿಯನ್‌ ಡಾಲರ್‌ ಜಾಕ್‌ಪಾಟ್‌ ಗೆದ್ದ ಖುಷಿಯಲ್ಲಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Viral Video: 33 ಕೋಟಿ ರೂ. ಗೆದ್ದ ವ್ಯಕ್ತಿ,  ಖುಷಿ ತಡೆಯಲಾರದೇ ಹೃದಯಾಘಾತದಿಂದ ಸಾವು
ವೈರಲ್​ ವಿಡಿಯೋ
Edited By:

Updated on: Jun 25, 2024 | 9:39 AM

ನಮ್ಮೊಂದಿಗೆ ಅದೃಷ್ಟ ಇದ್ರೆ ಮಾತ್ರ ನಾವು ಮಾಡುವ ಕೆಲಸದಲ್ಲಿ ನಮಗೆ ಜಯ ಗಳಿಸಲು ಸುಲಭ ಸಾಧ್ಯ. ಆದರೆ ಕೆಲವೊಮ್ಮೆ ಈ ಅದೃಷ್ಟ ದೇವತೆಯೇ ನಮ್ಮ ಪಾಲಿಗೆ ದುರಾದೃಷ್ಟವಾಗಬಹುದು. ಇದಕ್ಕೆ ಸೂಕ್ತ ನಿದರ್ಶನದಂತಿರುವ ಘಟನೆಯೊಂದು ಇದೀಗ ನಡೆದಿದ್ದು, ವ್ಯಕ್ತಿಯೊಬ್ಬರು ತನ್ನ ಅದೃಷ್ಟದಿಂದ ಕ್ಯಾಸಿನೋ ಒಂದರಲ್ಲಿ ಬರೋಬ್ಬರಿ 4 ಮಿಲಿಯನ್‌ ಡಾಲರ್‌ (33,38,19,200) ಜಾಕ್‌ ಪಾಟ್‌ ಹೊಡೆದಿದ್ದು, ಜಾಕ್‌ ಪಾಟ್‌ ಗೆದ್ದ ವಿಪರೀತ ಖುಷಿಯಲ್ಲಿ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಈ ಆಘಾತಕಾರಿ ಘಟನೆ ಸಿಂಗಾಪುರದ ಮರೀನಾ ಬೇ ಕ್ಯಾಸಿನೋದಲ್ಲಿ ನಡೆದಿದ್ದು, ಕ್ಯಾಸಿನೊ ಜೂಜಿನಲ್ಲಿ ಬರೋಬ್ಬರಿ 4 ಮಿಲಿಯನ್‌ ಡಾಲರ್‌ ಗೆದ್ದ ವ್ಯಕ್ತಿಯೊಬ್ಬರು, ಜಾಕ್‌ ಪಾಟ್‌ ಹೊಡೆದ ವಿಪರೀತ ಖುಷಿಯಲ್ಲಿ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೇ ಆ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದರೂ ಅದನ್ನು ಅನುಭವಿಸುವ ಭಾಗ್ಯ ಅವರಿಗೆ ಇಲ್ಲದಂತಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ:

ಈ ಕುರಿತ ಪೋಸ್ಟ್‌ ಒಂದನ್ನು @Osint613 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮರೀನಾ ಬೇ ಸಿಂಗಾಪುರ್‌ ಕ್ಯಾಸಿನೋದಲ್ಲಿ ವ್ಯಕ್ತಿಯೊಬ್ಬರು 4 ಮಿಲಿಯನ್‌ ಡಾಲರ್‌ ಗೆದ್ದ ಖುಷಿಯಲ್ಲಿ ಹೃದಯಾಘಾತದಿಂದ ನಿಧನರಾದರು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ವಿಡಿಯೋದಲ್ಲಿ ಕ್ಯಾಸಿನೋದಲ್ಲಿ ಲಾಟರಿ ಗೆದ್ದ ಖುಷಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಸುತ್ತ ಕುಳಿತ ಕುಟುಂಬಸ್ಥರು ದಯವಿಟ್ಟು ಎದ್ದು ಬನ್ನಿ ಎಂದು  ಜೋರಾಗಿ ಅಳುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬೃಹತ್‌ ಗಾಳಿಪಟದೊಂದಿಗೆ ಆಕಾಶಕ್ಕೆ ಹಾರಿದ ಮೂರು ವರ್ಷದ ಮಗು

ಜೂನ್‌ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅಬ್ಬಬ್ಬಾ ಹೆಚ್ಚು ಖುಷಿಪಟ್ಟರೂ ತುಂಬಾ ಕಷ್ಟ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us