World’s Deepest Metro Stations: ಇದು ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣ; ವಿಡಿಯೋ ಇಲ್ಲಿದೆ ನೋಡಿ

|

Updated on: May 18, 2024 | 5:34 PM

ಆಡಿಟಿ ಸೆಂಟ್ರಲ್ ಎಂಬ ವೆಬ್‌ಸೈಟ್‌ನ ವರದಿಯ ಪ್ರಕಾರ, ಈ ಮೆಟ್ರೋ ನಿಲ್ದಾಣವು 116 ಮೀಟರ್ ಆಳವಾಗಿದೆ, ಅಂದರೆ ಈ ಆಳವು 35-40 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿದೆ. ಈ ಮೆಟ್ರೋ ನಿಲ್ದಾಣವನ್ನು ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

Worlds Deepest Metro Stations: ಇದು ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣ; ವಿಡಿಯೋ ಇಲ್ಲಿದೆ ನೋಡಿ
The deepest metro station in China
Follow us on

ಚೀನಾದಲ್ಲಿರುವ ವಿಶ್ವದ ಅತ್ಯಂತ ಆಳವಾದ ಮೆಟ್ರೋ ನಿಲ್ದಾಣ ವಿಡಿಯೋವೊಂದು ವೈರಲ್​​ ಆಗುತ್ತಿದೆ. ಇದನ್ನು ‘ಹಾಂಗ್ಯಾನ್‌ಕುನ್ ಮೆಟ್ರೋ ಸ್ಟೇಷನ್​​’ ಎಂದು ಕರೆಯಲಾಗುತ್ತದೆ. ಈ ಮೆಟ್ರೋ ನಿಲ್ದಾಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಒಟ್ಟು ಏಳು ಎಸ್ಕಲೇಟರ್‌ಗಳಿಂದ ಇಳಿದ ನಂತರ, ಈ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರ ಕಾಣಬಹುದು. ಈ ವಿಡಿಯೋ ನೋಡಿದಾಕ್ಷಣ ಒಂದು ಕ್ಷಣ ನಿಮಗೆ ಕನ್ಫೂಷನ್​​ ಆಗುವುದಂತೂ ಖಂಡಿತಾ.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ jen_l104 ಹೆಸರಿನ ID ಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಂಚಿಕೊಂಡ ಕೇವಲ 4 ದಿನಗಳಲ್ಲಿ 1.7 ಮಿಲಿಯನ್ ಅಂದರೆ 17 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಆದರೆ 51 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್​​ ಮಾಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಧಗಧಗನೆ ಹೊತ್ತಿ ಉರಿದ ಬುಲೆಟ್ ಬೈಕ್, ಬೆಂಕಿ ನಂದಿಸುವಾಗ ಪೆಟ್ರೋಲ್ ಟ್ಯಾಂಕ್ ಸ್ಫೋಟ, 10 ಮಂದಿಗೆ ಗಾಯ

ಆಡಿಟಿ ಸೆಂಟ್ರಲ್ ಎಂಬ ವೆಬ್‌ಸೈಟ್‌ನ ವರದಿಯ ಪ್ರಕಾರ, ಈ ಮೆಟ್ರೋ ನಿಲ್ದಾಣವು 116 ಮೀಟರ್ ಆಳವಾಗಿದೆ, ಅಂದರೆ ಈ ಆಳವು 35-40 ಅಂತಸ್ತಿನ ಕಟ್ಟಡಕ್ಕೆ ಸಮಾನವಾಗಿದೆ. ಇದರ ನಿರ್ಮಾಣವು 2017 ರಲ್ಲಿ ಪ್ರಾರಂಭವಾಯಿತು ಮತ್ತು ಇದು 2022 ರಲ್ಲಿ ಸಿದ್ಧವಾಯಿತು. ಈ ಮೆಟ್ರೋ ನಿಲ್ದಾಣವನ್ನು ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು ನಿರ್ಮಿಸಲು ತುಂಬಾ ಆಳವಾಗಿ ಅಗೆಯಬೇಕಾಯಿತು ಎಂದು ಹೇಳಲಾಗುತ್ತಿದೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:34 pm, Sat, 18 May 24