Viral: 1857ರ ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಬರೆದ ತರ್ಲೆ ಉತ್ತರ ಹೇಗಿದೆ ನೋಡಿ…

ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳಲ್ಲಿ ಬರೆಯುವಂತಹ ತರ್ಲೆ ಮತ್ತು ಅಸಂಬದ್ಧ ಉತ್ತರಗಳಿಗೆ ಸಂಬಂಧಿಸಿದ ಕೆಲವೊಂದು ಫೋಟೋ ವಿಡಿಯೋಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಮತ್ತೊಂದು ಉತ್ತರ ಪತ್ರಿಕೆಯ ವಿಡಿಯೋವೊಂದು ವೈರಲ್‌ ಆಗಿದ್ದು, ಹಿಂದಿ ಭಾಷೆಯಲ್ಲಿ 1857 ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ತರ್ಲೆ ಉತ್ತರವನ್ನು ಬರೆದಿದ್ದಾನೆ. ವಿದ್ಯಾರ್ಥಿಯ ತರ್ಲೆ ಉತ್ತರಕ್ಕೆ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Viral: 1857ರ ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಬರೆದ ತರ್ಲೆ ಉತ್ತರ ಹೇಗಿದೆ ನೋಡಿ…
ವೈರಲ್​​ ವಿಡಿಯೋ
Edited By:

Updated on: Nov 19, 2024 | 3:17 PM

ಪರೀಕ್ಷೆ ಅಂದಾಗ ಬಹುತೇಕ ಹೆಚ್ಚಿನ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳುತ್ತಾರೆ. ಅದರಲ್ಲಿ ಹಲವರು ಪರೀಕ್ಷೆಯ ದಿನ ಚೆನ್ನಾಗಿ ಓದಿ ಉತ್ತಮ ರೀತಿಯಲ್ಲಿ ಎಕ್ಸಾಮ್‌ ಬರೆದ್ರೆ ಇನ್ನೂ ಕೆಲವು ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ಲಾಸ್ಟ್‌ ಬೇಂಚ್‌ ಸ್ಟೂಡೆಂಟ್‌ಗಳು ಪರೀಕ್ಷೆಯಲ್ಲಿ ಜಸ್ಟ್‌ ಪಾಸ್‌ ಆದ್ರೆ ಸಾಕಪ್ಪಾ ಎನ್ನುತ್ತಾ ಎಕ್ಸಾಮ್‌ ಪೇಪರ್‌ ಭರ್ತಿ ಮಾಡಿದ್ರೆ ಆಯ್ತು ಎಂದು ತರ್ಲೆ ಮತ್ತು ಅಸಂಬದ್ಧ ಉತ್ತರಗಳನ್ನು ಬರೆಯುತ್ತಾರೆ. ಇಂತಹ ತರ್ಲೆ ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದ ಕೆಲವು ಫೋಟೋಗಳು ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಫೋಟೋವೊಂದು ಸಖತ್‌ ವೈರಲ್‌ ಆಗಿದ್ದು, ಹಿಂದಿ ಭಾಷೆಯಲ್ಲಿ 1857 ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ತರ್ಲೆ ಉತ್ತರವನ್ನು ಬರೆದಿದ್ದಾನೆ. ಈ ತರ್ಲೆ ಉತ್ತರಕ್ಕೆ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಇತಿಹಾಸ ವಿಷಯದ ಪರೀಕ್ಷೆಯಲ್ಲಿ ಹಿಂದಿಯಲ್ಲಿ 1857 ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಕೇಳಿದ ಪ್ರಶ್ನೆಗೆ ಲಾಸ್ಟ್‌ ಬೆಂಚ್‌ ವಿದ್ಯಾರ್ಥಿಯೊಬ್ಬ 1857 ರ ದಂಗೆ ಎಂದು ಬರೆದು ಅದರ ಕೆಳಗೆ ಬೆಳಕು ಚೆಲ್ಲುವಂತೆ ಟಾರ್ಚ್‌ನ ಚಿತ್ರ ಬಿಡಿಸಿದ್ದಾನೆ. ಈ ಫನ್ನಿ ವಿಡಿಯೋವನ್ನು kim_.taehyung_.7 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲಿ 1857 ರ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂದು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಬೆಳಕು ಚೆಲ್ಲುತ್ತದೆ ಎಂಬ ಅರ್ಥದಲ್ಲಿ ಟಾರ್ಚ್‌ನ ಚಿತ್ರ ಬಿಡಿಸಿದಂತ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಧನ ಸಹಾಯ ಮಾಡಲು ಬಯಸುವವರು ದಯವಿಟ್ಟು ನನ್ನೊಂದಿಗೆ ಮಾತನಾಡಿ, ಬೆಂಗಳೂರು ಆಟೋ ಚಾಲಕನ ಪೋಸ್ಟ್​

ಕೆಲ ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 24 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪರೀಕ್ಷೆಯಲ್ಲಿ ವಿದ್ಯಾರ್ಥಿ ಬರೆದಂತಹ ಈ ಫನ್ನಿ ಉತ್ತರವನ್ನು ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us