ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತಿದೆ. ಅದು ನಿಜವೂ ಹೌದು. ಕೆಲವರಿಗೆ ಅತಿವೇಗವಾಗಿ ವಾಹನ ಚಲಾಯಿಸುವ ಆಸೆ. ಲಾಂಗ್ ಡ್ರೈವಿಂಗ್, ಸ್ಪೀಡ್ ಡ್ರೈವಿಂಗ್ನಲ್ಲಿ ಹುಚ್ಚಾಟಗಳು ಹೆಚ್ಚಾದಾಗ ಇಂತಹ ಘಟನೆ ನಡೆಯುತ್ತದೆ. ಆದ್ದರಿಂದ ಪ್ರತಿ ಬಾರಿ ವಾಹನ ಚಲಾಯಿಸುವಾಗಲೂ ಎಚ್ಚರದಿಂದರಬೇಕು. ಇಲ್ಲಿ ಮುಂದಿದ್ದ ಕಾರಿನವನನ್ನು ಹಿಂದಿಕ್ಕಿ ತಾನು ಮುಂದೆ ಹೋಗಬೇಕು ಎಂಬ ಅವಸರಕ್ಕೆ ಬಿದ್ದ ಪಿಕಪ್ ಡ್ರೈವರ್ಗೆ ಸಿಕ್ಕ ಪ್ರತಿಫಲ ಏನು ಎಂಬುದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದಿದೆ. ಸದ್ಯ ಈ ವಿಡಿಯೋ ನೋಡಿದವರೆಲ್ಲಾ ಹುಬ್ಬೇರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಅಮೆರಿಕಾದ ಫ್ಲೋರಿಡಾದ ಹೆದ್ದಾರಿಯಲ್ಲಿ ನಡೆದಿದೆ. ಎರಡೂ ಕಡೆಗಳಿಂದ ವಾಹನಗಳು ಬರುತ್ತಿದ್ದವು. ಎದುರುಗಡೆಯಿಂದ ಸ್ಕೂಲ್ ಬಸ್, ಇನ್ನಿತರ ವಾಹನಗಳು ಬರುತ್ತಿದ್ದವು. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಓವರ್ ಟೇಕ್ ಮಾಡಿಕೊಂಡು ಬಂದ ಪಿಕ್ಅಪ್ ವಾಹನ ಹಿಡಿತ ತಪ್ಪಿ ರಸ್ತೆಯ ಅಂಚಿಗೆ ಹೋಗಿ ಧೂಳೆಬ್ಬಿಸಿ ಪಲ್ಟಿ ಹೊಡೆದಿದೆ. ಇದು ಇನ್ನೊಂದು ವಾಹನದಲ್ಲಿದ್ದ ಚಾಲಕನ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಯ ಕೆಟ್ಟಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಪಿಕಪ್ ಬಸ್ಗೆ ಗುದ್ದದೇ ರಸ್ತೆಯ ಅಂಚಿನಲ್ಲಿ ಪಲ್ಟಿ ಹೊಡೆದು ನಿಂತಿದೆ.
ಈ ಘಟನೆಯನ್ನು ಚಿತ್ರೀಕರಿಸಿದ ವ್ಯಕ್ತಿ ನಾನು ಘಟನೆಯನ್ನು ಕಣ್ಣಾರೆ ನೋಡಿದ್ದು, ಪಿಕ್ಅಪ್ ವಾಹನ ವೇಗವಾಗಿ ಚಲಿಸುತ್ತಿತ್ತು. ಎರಡೂ ಕಡೆಗಳಿಂದ ವಾಹನ ಚಲಿಸುತ್ತಿತ್ತು. ಶಾಲೆಗೆ ಹೋಗುವ ಎರಡು ಬಸ್ಗಳು ಕೂಡಾ ಎದುರುಗಡೆಯಿಂದ ಚಲಿಸುತ್ತಿದ್ದವು. ಆಗ ಘಟನೆ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಚಾಲಕ ಅಜಾಗೂರತೆಯಿಂದ ವಾಹನ ಚಲಾಯಿಸಿದ್ದಕ್ಕಾಗಿ ಟೀಕಿಸಿದ್ದಾರೆ. ಇನ್ನೊಬ್ಬರು, ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Virat Kohli: ಔಟ್ ಆಗಿದ್ದಕ್ಕೆ ಕೊಹ್ಲಿ ರೌದ್ರರೂಪ ; ಪೆವಿಲಿಯನ್ ಚೇರ್ಗಳು ಚೆಲ್ಲಾಪಿಲ್ಲಿ, ವಿಡಿಯೋ ವೈರಲ್