Video Viral: 102 ಅಂತಸ್ತಿನ ಕಟ್ಟಡದ ತುದಿಗೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕ; ವಿಡಿಯೋ ವೈರಲ್​​​​​

|

Updated on: Aug 01, 2024 | 12:32 PM

ಯುವಕನೊಬ್ಬ 102 ಅಂತಸ್ತಿನ ಕಟ್ಟಡದ ತುದಿಗೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ 4 ದಿನಗಳಲ್ಲಿ 4ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ.

Video Viral: 102 ಅಂತಸ್ತಿನ ಕಟ್ಟಡದ ತುದಿಗೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕ; ವಿಡಿಯೋ ವೈರಲ್​​​​​
Follow us on

ಇಂದಿನ ಯುವಪೀಳಿಗೆಯಲ್ಲಿ ಸೆಲ್ಫಿ ಕ್ರೇಜ್ ಎಷ್ಟು ಹೆಚ್ಚಾಗಿದೆ ಎಂದರೆ ಕೆಲವೊಮ್ಮೆ ಈ ಹುಚ್ಚು ಪ್ರಾಣಕ್ಕೆ ಕಂಟಕವಾಗುವುದೂ ಕೂಡ ಉಂಟು. ಇದೀಗ ಅಂತದ್ದೇ ವಿಡಿಯೋ ಒಂದು ವೈರಲ್​ ಆಗಿದ್ದು, ವಿಡಿಯೋದಲ್ಲಿ ಯುವಕನೊಬ್ಬ 102 ಅಂತಸ್ತಿನ ಕಟ್ಟಡದ ತುದಿಗೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಈ ದೃಶ್ಯ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.

@livejn ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ 4 ದಿನಗಳಲ್ಲಿ 49.6 ಮಿಲಿಯನ್​​ ಅಂದರೆ 4ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. 3,235,052 ನೆಟ್ಟಿಗರು ವಿಡಿಯೋಗೆ ಲೈಕ್​​​ ಮಾಡಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೋ ಅಮೆರಿಕದ ನ್ಯೂಯಾರ್ಕ್ ನಗರದ್ದು ಎಂದು ವರದಿಯಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಭಾರತೀಯ ಸಂಸ್ಕ್ರತಿ ಮರೆಯದ ಅಂಬಾನಿ ಸೊಸೆ; ಪ್ಯಾರಿಸ್‌ನಲ್ಲೂ ಕರಿಮಣಿ ತೊಟ್ಟು ಬಂದ ರಾಧಿಕಾ ಮರ್ಚೆಂಟ್

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ” ವಿಡಿಯೋ ನೋಡಿದರೆ ಕೈಕಾಲು ನಡುಗುತ್ತಿದೆ” ಎಂದು ನೆಟ್ಟಿಗರು ಕಾಮೆಂಟ್​​​​ ಮಾಡಿದ್ದಾರೆ. ಇದಲ್ಲದೆ ” ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕದಿರಿ” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ