
ಸೋಷಿಯಲ್ ಮೀಡಿಯಾದಲ್ಲಿ ಸುಮ್ಮನೆ ಕಣ್ಣಾಡಿಸಿದರೂ ಸಾಕು ನೂರಾರು ಮನಸಿಗೆ ತಾಕುವ ವಿಡಿಯೋಗಳು ಕಾಣಸಿಗುತ್ತವೆ. 1997ರಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ ಬಾರ್ಡರ್ (Border Movie) ಈಗಲೂ ತನ್ನ ಪ್ರಸಿದ್ಧಿಯನ್ನು ಕಳೆದುಕೊಂಡಿಲ್ಲ. ಈ ಸಿನಿಮಾ ನೋಡಿದರೆ ಈಗಲೂ ಮೈ ನವಿರೇಳುತ್ತದೆ. ಮುಂಬೈನ ಪೊಲೀಸ್ ಕಾನ್ಸ್ಟೆಬಲ್ ಇದೇ ಬಾರ್ಡರ್ ಸಿನಿಮಾದ ‘ಸಂದೇಸೆ ಆತೇ ಹೇ’ ನುಡಿಸುತ್ತಿರುವ ಹೃದಯಸ್ಪರ್ಶಿ ವೀಡಿಯೊ ಆನ್ಲೈನ್ನಲ್ಲಿ ವೈರಲ್ ಆಗಿದೆ.
ರಸ್ತೆಯ ಮಧ್ಯೆ ಚಿತ್ರೀಕರಿಸಲಾದ ವಿಡಿಯೋದಲ್ಲಿ ಪೋಲೀಸ್ ಒಬ್ಬರು ಕೊಳಲಿನ ಮೂಲಕ ಈ ಪ್ರಸಿದ್ಧ ಹಾಡನ್ನು ಸಲೀಸಾಗಿ ನುಡಿಸುತ್ತಿರುವುದನ್ನು ನೋಡಬಹುದು. ಒಬ್ಬ ಟ್ರಾಫಿಕ್ ಪೋಲೀಸ್ ಕೂಡ ಅವರ ಪಕ್ಕದಲ್ಲಿ ನಿಂತಿದ್ದಾರೆ. ಮೂಲ ಹಾಡು ಪ್ಲೇ ಆಗುತ್ತಿರುವ ರಸ್ತೆಯಲ್ಲಿ ಫೋನ್ ಮತ್ತು ಬ್ಲೂಟೂತ್ ಸ್ಪೀಕರ್ ಅನ್ನು ಸಹ ಇರಿಸಲಾಗುತ್ತದೆ.
ಈ ವಿಡಿಯೋವನ್ನು ವಡಾಲಾ ಮಾಟುಂಗಾ ಸಿಯಾನ್ ಫೋರಮ್ ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದೆ. ಈ ಪೋಸ್ಟ್ನ ಶೀರ್ಷಿಕೆಯ ಪ್ರಕಾರ, ಮುಂಬೈನ ವಡಾಲಾದ ರಫಿ ಅಹ್ಮದ್ ಕಿದ್ವಾಯಿ ಮಾರ್ಗದಲ್ಲಿ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ.
ಈ ವಿಡಿಯೋ ವೈರಲ್ ಆಗಿದೆ. ಈ ಮ್ಯೂಸಿಕ್ ಅನ್ನು ಜನರು ಕೂಡ ಬಹಳ ಇಷ್ಟಪಟ್ಟಿದ್ದಾರೆ. ಪೊಲೀಸ್ ಯೂನಿಫಾರಂನಲ್ಲಿರುವವರು ಕೃಷ್ಣನಂತೆ ಕೊಳಲಿನಲ್ಲಿ ಮ್ಯೂಸಿಕ್ ನುಡಿಸುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ