
ದೈತ್ಯ ಹಾವೊಂದು ರಸ್ತೆ ದಾಟಲು ಯತ್ನಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಟ್ರಾಫಿಕ್ ಮಧ್ಯೆ ಏಕಾಏಕಿ ಈ ದೈತ್ಯ ಹಾವು ಕಾಣಿಸಿಕೊಂಡಿದ್ದು, ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ. ಬ್ರೆಜಿಲ್ನ ಪೋರ್ಟೊ ವೆಲ್ಹೋ ನಗರದ ಬಳಿ ಕಂಡು ಬಂದಿರುವ ಈ ಹಾವು ಸರಿ ಸುಮಾರು ನಾಲ್ಕು ಮೀಟರ್ ಉದ್ದ ಮತ್ತು 30 ಕೆಜಿ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.
@Rainmaker1973 ಎಂಬ ಟ್ವಿಟರ್ ಖಾತೆಯಲ್ಲಿ ಈ ಬೃಹತ್ ಗಾತ್ರದ ಹಾವಿನ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಜೂನ್ 2ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಒಂದೇ ದಿನದಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ವರದಕ್ಷಿಣೆ ತಗೊಂಡು ಬಾ, ಇಲ್ಲದಿದ್ದರೆ ತಮ್ಮನ ಜೊತೆ ಮಲಗು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ
ವೈರಲ್ ವಿಡಿಯೋದಲ್ಲಿ ಹಾವು ತೆವಳುತ್ತಾ ರಸ್ತೆ ದಾಟಿ ಕಾಡಿನೊಳಗೆ ಹೋಗಿರುವುದು ಕಾಣಬಹುದು. ಈ ದೈತ್ಯ ಹಾವು ಪ್ರತ್ಯಕ್ಷವಾಗುತ್ತಿದ್ದಂತೆ ಸಾಕಷ್ಟು ಜನರು ಸೇರಿದ್ದು, ತಮ್ಮ ಮೊಬೈಲ್ ಮೂಲಕ ಈ ಹಾವಿನ ವಿಡಿಯೋ ಸೆರೆಹಿಡಿದ್ದಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ