AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಡಿಕೆ ಶಿವಕುಮಾರ್​​ ಜೊತೆ ಸಚಿವರಾಗಿ ಎಷ್ಟು ಮಂದಿ ಪ್ರಮಾಣವಚನ?: ಇಲ್ಲಿದೆ ಮಾಹಿತಿ

ಸಿಎಂ ಡಿಕೆ ಶಿವಕುಮಾರ್​​ ಜೊತೆ ಸಚಿವರಾಗಿ ಎಷ್ಟು ಮಂದಿ ಪ್ರಮಾಣವಚನ?: ಇಲ್ಲಿದೆ ಮಾಹಿತಿ

ಪ್ರಸನ್ನ ಹೆಗಡೆ
| Edited By: |

Updated on:Jun 18, 2026 | 4:13 PM

Share

ಜೂ. 3ರಂದು ಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದು, ಡಿಸಿಎಂ ಹುದ್ದೆಗಳ ಸೃಷ್ಟಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಹೈಕಮಾಂಡ್‌ಗೆ ಸವಾಲಾಗಿದೆ. ಜಾತಿ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ಒತ್ತಡವಿದೆ. ಡಿಕೆ ಜೊತೆ 14 ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಹಿರಿಯ ನಾಯಕರ ಲಾಬಿ ನಿರ್ಧಾರ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಬೆಂಗಳೂರು, ಮೇ 31: ಕರ್ನಾಟಕದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಜೂ. 3ರಂದು ಮಾಣವಚನ ಸ್ವೀಕರಿಸಲಿದ್ದು, ಇದೀಗ ಡಿಸಿಎಂ ಹುದ್ದೆಗಳ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷ ಗಾದಿ ಹಾಗೂ ಸಚಿವ ಸಂಪುಟ ರಚನೆ ಕುರಿತು ಕಸರತ್ತು ಮುಂದುವರೆದಿದೆ. ಜಾತಿ ಲೆಕ್ಕಾಚಾರಗಳು ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿವೆ. ಡಿಕೆಶಿ ಜೊತೆ 14 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಚಿವ ಸಂಪುಟದಲ್ಲಿ ನಾಲ್ಕು ಡಿಸಿಎಂ ಹುದ್ದೆಗಳ ಸೃಷ್ಟಿಯ ಬಗ್ಗೆ ತೆರೆಮರೆಯಲ್ಲಿ ಚರ್ಚೆ ನಡೆದಿದ್ದು, ಜಾತಿವಾರು ಸಮೀಕರಣ ಹಾಗೂ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ. ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವು ನಾಯಕರು ಲಾಬಿ ನಡೆಸುತ್ತಿದ್ದು,  ಯತೀಂದ್ರ, ಎಂ.ಬಿ. ಪಾಟೀಲ್, ಜಮೀರ್, ಖಾದರ್, ಪರಮೇಶ್ವರ ಮತ್ತು ಪ್ರಿಯಾಂಕ್​​ ಸೇರಿದಂತೆ ಹಲವರ ಹೆಸರುಗಳು ಡಿಸಿಎಂ ರೇಸ್‌ನಲ್ಲಿವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಮತ್ತು ಬಿ.ಕೆ. ಹರಿಪ್ರಸಾದ್ ಹೆಸರುಗಳು ಮುಂಚೂಣಿಯಲ್ಲಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: May 31, 2026 11:39 AM

Follow Us