AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee Tea Price: ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ 5 ರೂಪಾಯಿ ಹೆಚ್ಚಳ

Coffee Tea Price: ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ 5 ರೂಪಾಯಿ ಹೆಚ್ಚಳ

ಶಿವಪ್ರಸಾದ್​ ಬಿ.
| Edited By: |

Updated on:Nov 02, 2026 | 10:29 AM

Share

Nandini Milk Price Hike: ಕರ್ನಾಟಕ ರಾಜ್ಯಾದ್ಯಂತ ಕಾಫಿ ಮತ್ತು ಟೀ ಪ್ರಿಯರಿಗೆ ಶಾಕ್ ಆಗಿದೆ. ಹಾಲು ದರ ಏರಿಕೆಯಾದ ಬೆನ್ನಲ್ಲೇ ಒಂದು ಕಪ್ ಕಾಫಿ ಅಥವಾ ಟೀ ಬೆಲೆ ಏಕಾಏಕಿ 5 ರೂಪಾಯಿ ಹೆಚ್ಚಳವಾಗಿದೆ. 15 ರೂಪಾಯಿ ಇದ್ದ ಮಿನಿ ಕಾಫಿ-ಟೀ ಈಗ 20 ರೂಪಾಯಿ, 20 ರೂಪಾಯಿ ಇದ್ದ ಪೂರ್ಣ ಕಪ್ 25 ರೂಪಾಯಿಗೆ ಏರಿಕೆಯಾಗಿದೆ. ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಬೆಲೆ ಹೆಚ್ಚಿಸಿದ್ದಾರೆ.

ಬೆಂಗಳೂರು, ನವೆಂಬರ್ 2: ಇಂದಿನಿಂದ ಕರ್ನಾಟಕ ರಾಜ್ಯದಾದ್ಯಂತ ಕಾಫಿ ಮತ್ತು ಟೀ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಚಳಿಗೆ ಬಿಸಿ ಬಿಸಿ ಕಾಫಿ-ಟೀ ಕುಡಿಯುವುದಕ್ಕೂ ಜನ ಯೋಚಿಸುವಂತಾಗಿದೆ. ಕೆಎಂಎಫ್ ನಂದಿನಿ ಹಾಲಿನ ದರ ಲೀಟರ್​ಗೆ ರೂ. 8 ರಿಂದ ರೂ. 12 ರಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ, ಒಂದು ಕಪ್ ಕಾಫಿ ಅಥವಾ ಟೀ ಬೆಲೆ ಏಕಾಏಕಿ 5 ರೂಪಾಯಿ ಹೆಚ್ಚಳವಾಗಿದೆ. ಸಾಮಾನ್ಯವಾಗಿ 15 ರೂಪಾಯಿ ಇದ್ದ ಮಿನಿ ಕಾಫಿ ಮತ್ತು ಟೀ ಬೆಲೆ ಈಗ 20 ರೂಪಾಯಿಗೆ ಏರಿಕೆ ಕಂಡಿದೆ. ಇನ್ನು 20 ರೂಪಾಯಿ ಇದ್ದ ಒಂದು ಕಪ್ ಪೂರ್ಣ ಕಾಫಿ ಅಥವಾ ಟೀ ಬೆಲೆ 25 ರೂಪಾಯಿಗೆ ತಲುಪಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಕಾಫಿ ಮತ್ತು ಟೀಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಕರ್ನಾಟಕ ರಾಜ್ಯ ಸರ್ಕಾರ ಹಾಲಿನ ದರ ಲೀಟರ್​ಗೆ ರೂ. 8 ರಿಂದ ರೂ. 12 ರಷ್ಟು ಏರಿಸಿದ್ದೇ ಈ ಪರಿಣಾಮಕ್ಕೆ ಕಾರಣ. ಹೋಟೆಲ್ ಮಾಲೀಕರು ಈಗಾಗಲೇ ಈ ಬಗ್ಗೆ ಮಾತನಾಡುತ್ತಿದ್ದು, ಕಾಫಿ-ಟೀ ಬೆಲೆ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ದರು. ಇದೀಗ ದರ ಹೆಚ್ಚಳ ಅಸ್ತಿತ್ವಕ್ಕೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 02, 2026 08:55 AM

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More