ಬಾಂಗ್ಲಾದೇಶದಲ್ಲಿ ಏಪ್ರಿಲ್ 1ರಿಂದ ಏಳು ದಿನಗಳ ಲಾಕ್ಡೌನ್ ಘೋಷಣೆ
ಲಾಕ್ಡೌನ್ ಅವಧಿಯಲ್ಲಿ ಪ್ರತಿಯೊಂದು ಕಚೇರಿ, ಮತ್ತು ನ್ಯಾಯಾಲಯಗಳೂ ಸ್ಥಗಿತಗೊಳ್ಳಲಿವೆ. ಆದರೆ, ಕಾರ್ಖಾನೆಗಳು ಪಾಳಿ ಪ್ರಕಾರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಬಾಂಗ್ಲಾದೇಶ ಸರ್ಕಾರ ತಿಳಿಸಿದೆ.
ಢಾಕಾ: ಕೊರೊನಾ ಸೋಂಕು ಹೆಚ್ಚಳದಿಂದಾಗಿ ಬಾಂಗ್ಲಾದೇಶದಲ್ಲಿ ಏಪ್ರಿಲ್ 5ರಿಂದ ಒಂದು ವಾರಗಳ ಕಾಲ ಲಾಕ್ಡೌನ್ ಹೇರಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಪ್ರತಿಯೊಂದು ಕಚೇರಿ, ಮತ್ತು ನ್ಯಾಯಾಲಯಗಳೂ ಸ್ಥಗಿತಗೊಳ್ಳಲಿವೆ. ಆದರೆ, ಕಾರ್ಖಾನೆಗಳು ಪಾಳಿ ಪ್ರಕಾರದಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಬಾಂಗ್ಲಾದೇಶ ಸರ್ಕಾರ ತಿಳಿಸಿದೆ. ಬಾಂಗ್ಲಾದೇಶದಲ್ಲಿ ಕೊರೊನಾ ಸೋಂಕಿನ ತೀವ್ರತೆ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಒಟ್ಟು 6,830 ಕೊವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 6,24,594ಕ್ಕೆ ಏರಿಕೆಯಾಗಿದೆ.
ಭಾರತ ಉತ್ಪಾದಿಸುವ ಕೊರೊನಾ ಲಸಿಕೆಯನ್ನು ಬಾಂಗ್ಲಾದೇಶಕ್ಕೂ ಒದಗಿಸುತ್ತೇವೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾರಿಗೆ ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದರು ಎಂದು ಇತ್ತೀಚಿಗೆ ಬಾಂಗ್ಲಾದ ವಿದೇಶಾಂಗ ಸಚಿವ ಎಕೆ ಅಬ್ದುಲ್ ಮೊನೆನ್ ತಿಳಿಸಿದ್ದರು. ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಆಚರಣೆಯ ನಿಮಿತ್ತ ಈಗಾಗಲೇ 2 ಮಿಲಿಯನ್ ಡೋಸ್ ಕೊರೊನಾ ಲಸಿಕೆಯನ್ನು ಉಡುಗೊರೆಯಾಗಿ ಬಾಂಗ್ಲಾದೇಶಕ್ಕೆ ನೀಡಿದ್ದು, ಇನ್ನೂ 1.2 ಮಿಲಿಯನ್ ಡೋಸ್ ಲಸಿಕೆಯನ್ನು ಭಾರತ ಬಾಂಗ್ಲಾದೇಶಕ್ಕೆ ನೀಡಲಿದೆ ಎಂದು ಹೇಳಲಾಗಿತ್ತು. ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಈ ಆಶ್ವಾಸನೆ ನೀಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಕೊವಿಡ್ ಪ್ರಕರಣಗಳು ಉಲ್ಬಣಗೊಂಡಿದ್ದು, ಇದೀಗ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಬಾಂಗ್ಲಾದೇಶದ ಪಕ್ಕದ ಪಶ್ಚಿಮ ಬಂಗಾಳದಲ್ಲಿ ಚುನಾವಣೆ; ಕೊವಿಡ್ ಆತಂಕ
ಬಾಂಗ್ಲಾದೇಶದ ಪಕ್ಕದಲ್ಲೇ ಇರುವ ಪಶ್ಚಿಮ ಬಂಗಾಳ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಈಗಾಗಲೇ ಎಡರು ಹಂತದ ಚುನಾವಣೆಗಳು ನಡೆದಿದ್ದು, ಇನ್ನೂ ಆರು ಹಂತದ ಚುನಾವಣೆಗಳು ನಡೆಯುವುದು ಬಾಕಿಯಿದೆ. ಮುಂದಿನ ಚುನಾವಣೆಗಳು ಕ್ರಮವಾಗಿ ಏಪ್ರಿಲ್ 6, 10, 17, 22, 26, 29ರಂದು ನಡೆಯಲಿವೆ. ಈಗಾಗಲೇ ಎಲ್ಲಾ ರಾಜಕೀಯ ವಪಕ್ಷಗಳೂ ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿವೆ. ಪಕ್ಕದ ಬಾಂಗ್ಲಾದೇಶದಲ್ಲೇ ಕೊವಿಡ್ ಹೆಚ್ಚಳವಾಗಿ ಲಾಕ್ಡೌನ್ ಹೇರಿರುವುದು ಇದೀಗ ಕಳವಳಕ್ಕೆ ಕಾರಣವಾಗಿದೆ.
ಭಾರತದಲ್ಲೂ ಹೆಚ್ಚುತ್ತಿದೆ ಕೊರೊನಾ
ಇನ್ನು ಭಾರತದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 89,129 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಈವರೆಗೆ ಭಾರತದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 1,23,92,260ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 6,58,909 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಯಲ್ಲಿ ಭಾರತದಲ್ಲೊಂದೇ 714 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೆ ದೇಶದಲ್ಲಿ ಕೊರೊನಾಕ್ಕೆ 1,64,110 ಜನರು ಬಲಿಯಾದಂತಾಗಿದೆ. ಕೊರೊನಾ ಚಿಕಿತ್ಸೆ ಪಡೆದು 1,15,69,241 ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಯೂ ತೀವ್ರಗತಿಯಲ್ಲಿ ನಡೆಯುತ್ತಿದ್ದು 7,30,54,295 ಜನರಿಗೆ ಕೊವಿಡ್ ಲಸಿಕೆ ವಿತರಣೆ ಮಾಡಲಾಗಿದೆ.
ಇದನ್ನೂ ಓದಿ: ಕೊರೊನಾ ತಡೆಗೆ ಹೊಸ ಮಾರ್ಗಸೂಚಿ: ಬಾರ್, ರೆಸ್ಟೋರೆಂಟ್, ಜಿಮ್, ಸ್ವಿಮ್ಗೆ ನಿರ್ಬಂಧ
TV9 Digital Live| ಕೊವಿಡ್ ನಿಯಂತ್ರಣ ಮಾಡಲು ಸರ್ಕಾರ ತಂದ ಹೊಸ ಮಾರ್ಗಸೂಚಿ ಸಹಕಾರಿಯಾಗಬಹುದೇ?