AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಲಿವಿಯಾದಲ್ಲಿ ಭೀಕರ ದುರಂತ: ಸೇನಾ ನೆಲೆಯಲ್ಲಿ ಸ್ಫೋಟ, 10ಕ್ಕೂ ಅಧಿಕ ಮಂದಿ ಸಾವು, 60 ಜನರಿಗೆ ಗಾಯ

ಬೊಲಿವಿಯಾದ ವಿಯಾಚಾ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 10ಕ್ಕೂ ಹೆಚ್ಚು ಮಂದಿ ಮೃತಪಟ್ಟು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಾ ಪಾಜ್ ಸಮೀಪದ ಶಸ್ತ್ರಾಸ್ತ್ರ ಸಂಗ್ರಹಣಾ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಸುತ್ತಮುತ್ತಲಿನ ಮನೆಗಳಿಗೂ ಹಾನಿಯಾಗಿದೆ. ಮತ್ತೊಂದು ಸ್ಫೋಟದ ಆತಂಕವಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.

ಬೊಲಿವಿಯಾದಲ್ಲಿ ಭೀಕರ ದುರಂತ: ಸೇನಾ ನೆಲೆಯಲ್ಲಿ  ಸ್ಫೋಟ, 10ಕ್ಕೂ ಅಧಿಕ ಮಂದಿ ಸಾವು, 60 ಜನರಿಗೆ ಗಾಯ
ಸ್ಫೋಟImage Credit source: Aljazeera
ನಯನಾ ರಾಜೀವ್
|

Updated on: Sep 05, 2026 | 9:02 AM

Share

ಲಾ ಪಾಜ್, ಸೆಪ್ಟೆಂಬರ್ 05: ದಕ್ಷಿಣ ಅಮೆರಿಕದ ರಾಷ್ಟ್ರ ಬೊಲಿವಿಯಾದ ರಾಜಧಾನಿ ಲಾ ಪಾಜ್ ಸಮೀಪದ ಮಿಲಿಟರಿ ನೆಲೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 10ಜನರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದಲ್ಲಿರುವ ಸೇನಾ ಬ್ಯಾರಕ್‌ನ ಶಸ್ತ್ರಾಸ್ತ್ರ ಸಂಗ್ರಹಣಾ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವು ಮನೆಗಳು ಜಖಂಗೊಂಡಿದ್ದು, ಅವಶೇಷಗಳಡಿ ಸಿಲುಕಿರುವ ಇತರ ಏಳು ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ವಿಯಾಚಾ ನಗರದ ಸೇನಾ ಸಂಕೀರ್ಣದಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ ಸುಮಾರು2.30 ರ ವೇಳೆಗೆ ಪಟಾಕಿ ಮತ್ತು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಈ ಸ್ಫೋಟ ಸಂಭವಿಸಿದೆ. ಕ್ಷಣಾರ್ಧದಲ್ಲಿ ಆಕಾಶದೆತ್ತರಕ್ಕೆ ದಟ್ಟ ಕಪ್ಪು ಹೊಗೆ ವ್ಯಾಪಿಸಿದ್ದು, ಇಡೀ ನಗರವೇ ಕಂಪಿಸಿದೆ.

ಸ್ಥಳೀಯ ಆರೋಗ್ಯ ನಿರ್ದೇಶಕಿ ರೀಟಾ ನೆಬ್ರಸ್ಕಾ ನೀಡಿದ ಮಾಹಿತಿಯ ಪ್ರಕಾರ, ಘಟನೆಯಲ್ಲಿ ಇದುವರೆಗೆ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಗಾಯಗೊಂಡ 62 ಮಂದಿಯಲ್ಲಿ 52 ಮಂದಿ ಸ್ಥಳೀಯ ನಾಗರಿಕರಾಗಿದ್ದು, ಉಳಿದವರು ಕರ್ತವ್ಯದಲ್ಲಿದ್ದ ಯೋಧರಾಗಿದ್ದಾರೆ. ಪುಟ್ಟ ಬಾಲಕಿ ಸೇರಿದಂತೆ ಸ್ಥಿತಿ ಗಂಭೀರವಾಗಿರುವ 14 ಮಂದಿಯನ್ನು ತುರ್ತು ಚಿಕಿತ್ಸೆಗಾಗಿ ಲಾ ಪಾಜ್ ನಗರದ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಮತ್ತಷ್ಟು ಓದಿ: Car Blast Case: ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?

ಮತ್ತೊಂದು ಸ್ಫೋಟದ ಆತಂಕ

150 ಮೀಟರ್ ದೂರವಿರಲು ಎಚ್ಚರಿಕೆ: ಸ್ಫೋಟ ನಡೆದ ಸ್ಥಳದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಶಾಖ ಮತ್ತು ಸುಡದ ಸ್ಫೋಟಕಗಳು ಇರುವುದರಿಂದ, ಮತ್ತೊಮ್ಮೆ ಸ್ಫೋಟ ಸಂಭವಿಸುವ ಸಾಧ್ಯತೆಯಿದೆ ಎಂದು ರಕ್ಷಣಾ ಪಡೆಗಳು ಎಚ್ಚರಿಸಿವೆ. ಸಾರ್ವಜನಿಕರು ಸೇನಾ ನೆಲೆಯಿಂದ ಕನಿಷ್ಠ 150 ಮೀಟರ್ ದೂರವಿರುವಂತೆ ಸೂಚಿಸಲಾಗಿದೆ.

ಮನೆಗಳಿಗೆ ವ್ಯಾಪಕ ಹಾನಿ: ಸೇನಾ ನೆಲೆಯ ಗೋಡೆಗೆ ಹೊಂದಿಕೊಂಡಂತಿದ್ದ ಡಜನ್‌ಗೂ ಹೆಚ್ಚು ವಸತಿ ಕಟ್ಟಡಗಳ ಕಿಟಕಿ ಗಾಜುಗಳು, ಛಾವಣಿಗಳು ಸ್ಫೋಟದ ಒತ್ತಡಕ್ಕೆ ಛಿದ್ರಗೊಂಡಿವೆ.

ತನಿಖೆಗೆ ಸೇನೆ ಆದೇಶ: ಬೊಲಿವಿಯಾದ ರಕ್ಷಣಾ ಸಚಿವ ಅರ್ನೆಸ್ಟೊ ಜಸ್ಟಿನಿಯಾನೋ ಪ್ರತಿಕ್ರಿಯಿಸಿ, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಮಿಲಿಟರಿ ಹಾಗೂ ಸಿವಿಲ್ ಪೊಲೀಸರ ಜಂಟಿ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಯಾಚಾ ನಗರದ ಭೌಗೋಳಿಕತೆ: ಸುಮಾರು 1 ಲಕ್ಷ ಜನಸಂಖ್ಯೆ ಹೊಂದಿರುವ ವಿಯಾಚಾ ಪಟ್ಟಣವು ಬೊಲಿವಿಯಾದ ಆಡಳಿತ ರಾಜಧಾನಿ ಲಾ ಪಾಜ್‌ನಿಂದ ಕೇವಲ 30 ಕಿಲೋಮೀಟರ್ 19 ಮೈಲಿ ದೂರದಲ್ಲಿದೆ. ಗಾಯಾಳುಗಳ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಆಂಬ್ಯುಲೆನ್ಸ್ ಹಾಗೂ ಪರಿಹಾರ ಪಡೆಗಳನ್ನು ಯುದ್ಧೋಪಾದಿಯಲ್ಲಿ ನಿಯೋಜಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್