‘ಹಗಲು ಭದ್ರತೆಯ ಮಾತು, ರಾತ್ರಿ ಭಯೋತ್ಪಾದನೆಗೆ ಕುಮ್ಮಕ್ಕು’; ಪಾಕ್ ಪ್ರಧಾನಿಯ ಬೆವರಿಳಿಸಿದ ಭಾರತದ ಮಹಿಳಾ ಅಧಿಕಾರಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಶುಕ್ರವಾರ ನಡೆಸಿದ ಭಾಷಣಕ್ಕೆ ಇಂದು ಭಾರತವು ‘ರೈಟ್ ಆಫ್ ರಿಪ್ಲೈ’ ಮೂಲಕ ಪ್ರತ್ಯುತ್ತರ ನೀಡಿದೆ. “ಗಡಿಯಾಚೆಗಿನ ಭಯೋತ್ಪಾದನೆ ಮುಂದುವರಿದರೆ ಪಾಕಿಸ್ತಾನ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಭಾರತ ಕಠಿಣ ಎಚ್ಚರಿಕೆ ರವಾನಿಸಿದೆ. ನಿನ್ನೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ತಮ್ಮ ದೇಶವನ್ನು ಸಮರ್ಥಿಸಿಕೊಂಡು, ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು. ಅದಕ್ಕೆ ಭಾರತದ ರಾಜತಾಂತ್ರಿಕ ಅಧಿಕಾರಿ ತಕ್ಕ ತಿರುಗೇಟು ನೀಡಿದ್ದಾರೆ.

ನ್ಯೂಯಾರ್ಕ್, ಸೆಪ್ಟೆಂಬರ್ 26: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಭಾರತದ ವಿರುದ್ಧ ಮಾಡಿದ ಸುಳ್ಳು ಆರೋಪಗಳು ಹಾಗೂ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ನೀಡಿದ ಬೆದರಿಕೆಗೆ ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತಿದೆ ಎಂದು ದೂರಿದ ಭಾರತ, ಗಡಿಯಾಚೆಗಿನ ಭಯೋತ್ಪಾದನೆ ಮುಂದುವರಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಮಿಷನ್‌ನ ಪ್ರಥಮ ಕಾರ್ಯದರ್ಶಿ ಪೆಟಲ್ ಗೆಹ್ಲೋಟ್ ಅವರು ಭಾರತದ ಪರವಾಗಿ ‘ರೈಟ್ ಆಫ್ ರಿಪ್ಲೈ’ ಹಕ್ಕನ್ನು ಚಲಾಯಿಸಿ ಪಾಕಿಸ್ತಾನದ ಮುಖವಾಡವನ್ನು ಜಾಗತಿಕ ವೇದಿಕೆಯಲ್ಲಿ ಬಯಲು ಮಾಡಿದರು.
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾರತದ ರಾಜತಾಂತ್ರಿಕ ಅಧಿಕಾರಿ ಪೆಟಲ್ ಗೆಹ್ಲೋಟ್ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅವರ ಹೇಳಿಕೆಗಳನ್ನು ವಿಚಿತ್ರವಾದ ಹೇಳಿಕೆ ಎಂದು ಟೀಕಿಸಿದ್ದಾರೆ. 9/11ರ ಭೀಕರ ಉಗ್ರರ ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಪ್ರಮುಖ ಮಿಲಿಟರಿ ಅಕಾಡೆಮಿಯ ಅಂಗಳದಲ್ಲೇ ವಾಸಿಸುತ್ತಿದ್ದ ಘಟನೆಯನ್ನು ವಿಶ್ವಸಂಸ್ಥೆಯ ವೇರಿಕೆಯಲ್ಲಿ ಮತ್ತೊಮ್ಮೆ ಪೆಟಲ್ ಗೆಹ್ಲೋಟ್ ನೆನಪಿಸಿದರು.
Watch: First Secretary @petal_gahlot exercises 🇮🇳’s Right of Reply at #UNGA81. @MEAIndia @IndianDiplomacy @UN @PMOIndia @DDNewslive @airnewsalerts pic.twitter.com/MEW1n7WIJW
— India at UN, NY (@IndiaUNNewYork) September 26, 2026
‘ಹಗಲಿನಲ್ಲಿ ಭದ್ರತೆ, ರಾತ್ರಿಯಲ್ಲಿ ಭಯೋತ್ಪಾದನೆ’:
ಪಾಕಿಸ್ತಾನದ ಕುತಂತ್ರ ಬುದ್ಧಿಯನ್ನು ವಿಶ್ವಸಂಸ್ಥೆಯಲ್ಲಿ ಬಯಲು ಮಾಡಿದ ಪೆಟಲ್ ಗೆಹ್ಲೋಟ್, “ಅಮೆರಿಕವು ಇತ್ತೀಚೆಗಷ್ಟೇ 9/11ರ ದಾಳಿಯ ವಾರ್ಷಿಕೋತ್ಸವವನ್ನು ಆಚರಿಸಿದೆ. ಆ ದಾಳಿಯ ರೂವಾರಿ ಪಾಕಿಸ್ತಾನ ಸೇನಾ ಅಕಾಡೆಮಿಯ ಹೊಸ್ತಿಲಲ್ಲೇ ಆಶ್ರಯ ಪಡೆದಿದ್ದನು. ಪಾಕಿಸ್ತಾನವು ಹಗಲಿನಲ್ಲಿ ಭದ್ರತೆಯ ಮಾತಾಡುತ್ತದೆ, ರಾತ್ರಿಯಲ್ಲಿ ಭಯೋತ್ಪಾದನೆಯನ್ನು ಪೋಷಿಸುತ್ತದೆ. ಇದೇ ಕಾರಣಕ್ಕೆ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯೂ ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
#WATCH | Exercising the right of reply of India on #Pakistan PM #ShehbazSharif‘s speech, First Secretary in India’s Permanent Mission to the #UN, Petal Gahlot says, “This afternoon, the General Assembly heard some bizarre remarks from the representative of Pakistan. This happens… pic.twitter.com/TyjbEzCipG
— DD India (@DDIndialive) September 26, 2026
“ಭಯೋತ್ಪಾದಕರಿಗೆ ಎಲ್ಲಿಯೂ ಓಡಿಹೋಗಲು ಅಥವಾ ಅಡಗಿಕೊಳ್ಳಲು ಸ್ಥಳವಿಲ್ಲ ಎಂಬುದನ್ನು ನಾವು ಕಳೆದ ವರ್ಷವೇ ನಿರೂಪಿಸಿದ್ದೇವೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕನ್ನು ನಾವು ಚಲಾಯಿಸುತ್ತೇವೆ. ಪಾಕಿಸ್ತಾನದಿಂದ ಭಯೋತ್ಪಾದನೆ ಮುಂದುವರಿದರೆ ತಕ್ಕ ಪರಿಣಾಮ ಎದುರಾಗಲಿದೆ” ಎಂದು ಭಾರತ ಸ್ಪಷ್ಟಪಡಿಸಿದೆ.
#WATCH | New York | First Secretary in India’s Permanent Mission to the UN, Petal Gahlot says, “We heard some hypocritical homilies about democratic rights and human values from a regime whose capital at this very moment is being fortified against its own people. And that, Mr.… pic.twitter.com/vuGWwjRAdX
— ANI (@ANI) September 26, 2026
ಪಾಕಿಸ್ತಾನದಲ್ಲಿ ಮಿಲಿಟರಿಯೇ ಸರ್ವಾಧಿಕಾರಿ:
ಪಾಕಿಸ್ತಾನದ ಪ್ರಜಾಪ್ರಭುತ್ವದ ಮುಖವಾಡವನ್ನು ಬಯಲುಮಾಡಿದ ಪೆಟಲ್ ಗೆಹ್ಲೋಟ್, “ಪಾಕಿಸ್ತಾನದ ಸರ್ಕಾರ ಸೇನೆಗಾಗಿ, ಸೇನೆಯಿಂದ ಮತ್ತು ಸೇನೆಗೋಸ್ಕರವೇ ನಡೆಯುತ್ತಿದೆ. ಅವರ ಕೈಗೊಂಬೆಯಾದ ಪ್ರಧಾನಿಗಳು ಬದಲಾಗಬಹುದು, ಆದರೆ ಅಂತಿಮ ನಿರ್ಧಾರ ಸೇನೆಯದ್ದೇ ಆಗಿರುತ್ತದೆ. ಧರ್ಮದೂಷಣೆ ಕಾನೂನುಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಆಡಳಿತವು ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಇಡೀ ಜಗತ್ತಿಗೇ ತಿಳಿದಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
#WATCH | New York | Addressing the 81st United Nations General Assembly (UNGA), Pakistan PM Shehbaz Sharif says, “…I assure my Kashmiri brothers and sisters, with the fullest authority at my command, that we shall continue to extend our full diplomatic, political, and moral… pic.twitter.com/zulMLBiWje
— ANI (@ANI) September 26, 2026
ಇದನ್ನೂ ಓದಿ: ‘ಕಾಶ್ಮೀರ ಪಾಕಿಸ್ತಾನದ ಜೀವನಾಡಿ, ಸಿಂಧೂ ನದಿ ನೀರು ತಡೆದರೆ ಯುದ್ಧ ಖಚಿತ’; ಭಾರತಕ್ಕೆ ಶೆಹಬಾಜ್ ಶರೀಫ್ ಬೆದರಿಕೆ
ಜಮ್ಮು ಕಾಶ್ಮೀರ ಭಾರತಕ್ಕೆ ಸೇರಿದ್ದು:
ಜಮ್ಮು ಮತ್ತು ಕಾಶ್ಮೀರ ಭಾರತದ “ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗ” ಎಂದು ಪ್ರತಿಪಾದಿಸಿದ ಪೆಟಲ್ ಗೆಹ್ಲೋಟ್, “ಕಾಶ್ಮೀರದ ಬಗ್ಗೆ ಮಾತನಾಡುವುದಿದ್ದರೆ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಕಡೆಗೆ ಗಮನಹರಿಸೋಣ. ರಾವಲಾಕೋಟ್‌ನಲ್ಲಿ ಪಾಕಿಸ್ತಾನ ಸರ್ಕಾರ ನಡೆಸುತ್ತಿರುವ ಕ್ರೂರ ಹತ್ಯೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಅಲ್ಲಿನ ಜನರನ್ನು ಕೇಳಿ ನೋಡಿ. ಆಗ ಪಾಕಿಸ್ತಾನದ ನಿಜವಾದ ಮುಖ ಬಯಲಾಗುತ್ತದೆ” ಎಂದು ಸವಾಲು ಹಾಕಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




