AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್ ಮೇಲೆ ಟ್ರಂಪ್ ಯುದ್ಧ ಘೋಷಿಸಲು ಕಾರಣರಾದ ಪೀಟ್ ಹೆಗ್ಸೆತ್ ಯಾರು?

ಇಸ್ರೇಲ್ ಮತ್ತು ಇರಾನ್ ಇಬ್ಬರೂ ಬದ್ಧವೈರಿಗಳು. ಹೀಗಾಗಿ ನೆರೆಹೊರೆಯ ದೇಶಗಳಾದ ಅವೆರಡರ ನಡುವೆ ಸಂಘರ್ಷವಾಗುವುದು ಅಚ್ಚರಿಯೇನಲ್ಲ. ಆದರೆ, ಅಮೆರಿಕ ಕೂಡ ಈ ಯುದ್ಧಕ್ಕೆ ಎಂಟ್ರಿ ಕೊಟ್ಟು ಇರಾನ್ ವಿರುದ್ಧ ದಾಳಿ ನಡೆಸಿತ್ತು. ಇದು ಟ್ರಂಪ್ ಅವರ ಅತಿರೇಕದ ವರ್ತನೆ ಎಂದು ಅನೇಕ ದೇಶಗಳು ಅಸಮಾಧಾನ ಹೊರಹಾಕಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾದವರು ಪೀಟ್ ಹೆಗ್ಸೆತ್. ಪೀಟ್ ಹೆಗ್ಸೆತ್ ಇರಾನ್ ವಿರುದ್ಧ ಅಮೆರಿಕ ಯುದ್ಧ ನಡೆಸಲು ಟ್ರಂಪ್​ಗೆ ಕುಮ್ಮಕ್ಕು ನೀಡಿದವರು. ಹಾಗಾದರೆ, ಈ ಪೀಟ್ ಹೆಗ್ಸೆತ್ ಯಾರು? ಇಂಟರ್ನೆಟ್​​ನಲ್ಲಿ ಈ ಹೆಸರು ಏಕೆ ಈಗ ಟ್ರೆಂಡಿಂಗ್​​ನಲ್ಲಿದೆ?

ಇರಾನ್ ಮೇಲೆ ಟ್ರಂಪ್ ಯುದ್ಧ ಘೋಷಿಸಲು ಕಾರಣರಾದ ಪೀಟ್ ಹೆಗ್ಸೆತ್ ಯಾರು?
Trump With Pete HegsethImage Credit source: AP
ಸುಷ್ಮಾ ಚಕ್ರೆ
|

Updated on: Mar 24, 2026 | 6:48 PM

Share

ವಾಷಿಂಗ್ಟನ್, ಮಾರ್ಚ್ 24: ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಲ್ಲಿ ಇದೀಗ ಗಮನ ಸೆಳೆಯುತ್ತಿರುವ ವ್ಯಕ್ತಿ ಅಮೆರಿಕದ ಪೀಟ್ ಹೆಗ್ಸೆತ್. ಇವರು ಡೊನಾಲ್ಡ್ ಟ್ರಂಪ್ (Donald Trump) ಅವರ ಕಟ್ಟಾ ಬೆಂಬಲಿಗರಲ್ಲಿ ಒಬ್ಬರು. ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿರುವ ಪೀಟ್ ಹೆಗ್ಸೆತ್ ಅವರೇ ಇರಾನ್ ಮೇಲೆ ದಾಳಿ ನಡೆಸೋಣ ಎಂದು ಟ್ರಂಪ್​ ಕಿವಿಯೂದಿದ್ದಾರೆ ಎಂಬ ವಿಷಯ ಬಯಲಾಗಿದೆ. ಹೀಗಾಗಿ, ಈ ಪೀಟ್ ಹೆಗ್ಸೆತ್ ಬಗ್ಗೆ ಭಾರೀ ಚರ್ಚೆಗಳು ಶುರುವಾಗಿವೆ.

ಇರಾನ್ ಮೇಲೆ ಯುದ್ಧ ಮಾಡೋಣ ಎಂದು ಮೊದಲು ಹೇಳಿದ್ದೇ ಪೀಟ್ ಹೆಗ್ಸೆತ್ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಈ ಯುದ್ಧದ ಹೊಣೆಯನ್ನು ಹೆಗ್ಸೆತ್ ಹೆಗಲಿಗೆ ಹಾಕಿರುವ ಟ್ರಂಪ್ ಅವರ ಹೇಳಿಕೆಯಿಂದ ಪೀಟ್ ಹೆಗ್ಸೆತ್ ಟೀಕೆಗೆ ಗುರಿಯಾಗಿದ್ದಾರೆ. ಇಂದು ಟೆನ್ನೆಸ್ಸೀಯ ಮೆಂಫಿಸ್‌ನಲ್ಲಿ ರಾಷ್ಟ್ರೀಯ ಮಿಲಿಟರಿ ಮತ್ತು ಕಾನೂನು ಜಾರಿ ನಾಯಕರಿಗಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯುಎಸ್ ಅಧ್ಯಕ್ಷ ಟ್ರಂಪ್, ಫೆಬ್ರವರಿ 28ರಂದು ಆಪರೇಷನ್ ಎಪಿಕ್ ಫ್ಯೂರಿಯನ್ನು ಪ್ರಾರಂಭಿಸಲು ಕಾರಣವಾದ ಸಂದರ್ಭಗಳ ಬಗ್ಗೆ ಹೀಗೆ ಹೇಳಿದ್ದಾರೆ. “ಆ ದಿನ ನಾನು ಪೀಟ್‌ಗೆ ಕರೆ ಮಾಡಿದೆ. ನಾನು ಜನರಲ್ ಕೇನ್‌ಗೆ ಕರೆ ಮಾಡಿದೆ. ಈ ಬಗ್ಗೆ ಮಾತಾಡೋಣ ಎಂದು ಅವರನ್ನು ಕರೆದೆ. ಮಧ್ಯಪ್ರಾಚ್ಯದಲ್ಲಿ ನಮಗೆ ಒಂದು ಸಮಸ್ಯೆ ಇದೆ. ಇರಾನ್ 47 ವರ್ಷಗಳಿಂದ ಭಯೋತ್ಪಾದನೆಯ ಪೂರೈಕೆದಾರ ದೇಶವಾಗಿದೆ. ಆ ದೇಶ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿದೆ. ಯಾವ ರೀತಿ ಈ ಸಮಸ್ಯೆಯನ್ನು ನಿವಾರಿಸಬಹುದು? ಎಂದು ಚರ್ಚಿಸಿದೆವು” ಎಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಮೆರಿಕ-ಇರಾನ್ ಮಾತುಕತೆ? ಟ್ರಂಪ್ ಹೇಳಿದ್ದೇನು?

“ಆಗ ಪೀಟ್ ಹೆಗ್ಸೆತ್ ಅವರೇ ಮೊದಲು ಮಾತನಾಡಿದವರು. ಆಗ ಅವರು ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಬಾರದು. ನಾವು ಅವರ ಮೇಲೆ ಯುದ್ಧ ಮಾಡೋಣ ಎಂದು ಹೇಳಿದರು ಎಂದು ನನಗೆ ನೆನಪು. ಅದಾದ ನಂತರ ನಾವು ಈ ಬಗ್ಗೆ ರಾತ್ರಿಯಿಡೀ ಚರ್ಚಿಸಿ ನಿರ್ಧಾರ ತೆಗೆದುಕೊಂಡೆವು” ಎಂದು ಟ್ರಂಪ್ ಹೇಳಿದ್ದಾರೆ.

ಈ ಮೂಲಕ ಟೆಹ್ರಾನ್ ವಿರುದ್ಧದ ಮಿಲಿಟರಿ ದಾಳಿಗೆ ಬೆಂಬಲ ನೀಡಿದವರಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮೊದಲಿನವರು ಎಂದು ಟ್ರಂಪ್ ಸುಳಿವು ನೀಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ