AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India-US iCET: ಭಾರತ ಅಮೆರಿಕ ಐಸಿಇಟಿ: ಅಧ್ಯಕ್ಷ ಜೋ ಬೈಡನ್ ಭಾರೀ ನಿರೀಕ್ಷೆ

White House Comment on India America iCET: ಐಸಿಇಟಿ ಅಡಿಯಲ್ಲಿ ಭಾರತ ಮತ್ತು ಅಮೆರಿಕ ಮಧ್ಯೆ ಹಲವು ಸ್ತರದಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಯೋಜನೆಗಳು ನಡೆಯುವ ಉದ್ದೇಶ ಇದೆ. ಇದರಲ್ಲಿ ಅಮೆರಿಕದ ಜನರಲ್ ಎಲೆಕ್ಟ್ರಿಕ್​ನ ಜೆಟ್ ಎಂಜಿನ್ ಅನ್ನು ಭಾರತದಲ್ಲೇ ತಯಾರಿಸಲು ತಂತ್ರಜ್ಞಾನ ನೆರವು ಸಮೇತ ಅವಕಾಶ ಕೊಡುವುದೂ ಒಳಗೊಂಡಿದೆ.

India-US iCET: ಭಾರತ ಅಮೆರಿಕ ಐಸಿಇಟಿ: ಅಧ್ಯಕ್ಷ ಜೋ ಬೈಡನ್ ಭಾರೀ ನಿರೀಕ್ಷೆ
ಅಮೆರಿಕ ಅಧ್ಯಕ್ಷರ ಗೃಹಕಚೇರಿ ವೈಟ್ ಹೌಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 02, 2023 | 11:48 AM

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ಮಧ್ಯೆ ಕುಡಿಯೊಡೆದಿರುವ ಗಂಭೀರ ಮತ್ತು ಭವಿಷ್ಯದ ತಂತ್ರಜ್ಞಾನ ಉಪಕ್ರಮ ಯೋಜನೆ (iCET- Intiative on Critical and Emerging Technologies) ಬಹಳ ಮಹತ್ವದ್ದೆಂದು ಅಮೆರಿಕ ಪರಿಗಣಿಸುತ್ತದೆ. ಪ್ರಜಾತಾಂತ್ರಿಕ ತಂತ್ರಜ್ಞಾನ ವ್ಯವಸ್ಥೆಯನ್ನು (Democratic Technological Ecosystem) ಬಲಪಡಿಸಲು ಈ ಎರಡೂ ದೇಶಗಳಿಗೆ ಐಸಿಇಟಿ ನೆರವಾಗಬಲ್ಲುದು. ಎರಡೂ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸಬಲ್ಲುದು ಎಂಬ ವಿಶ್ವಾಸ ಇದೆ ಎಂದು ಅಮೆರಿಕ ಅಧ್ಯಕ್ಷರ ಗೃಹಕಚೇರಿ ವೈಟ್ ಹೌಸ್​ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ಮತ್ತು ಅಮೆರಿಕದ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಮತ್ತು ಜೇಕ್ ಸುಲೈವಾನ್ ಇಬ್ಬರೂ ಮೊನ್ನೆ ಮಂಗಳವಾರ (ಜನವರಿ 31) ಐಸಿಇಟಿಗೆ ಚಾಲನೆ ಕೊಟ್ಟಿದ್ದಾರೆ. ಆದರೆ, ಇದಕ್ಕೆ ಮುನ್ನವೇ ಎರಡೂ ದೇಶಗಳ ಮುಖ್ಯಸ್ಥರಾದ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಈ ಜೊತೆಗಾರಿಕೆ ಯೋಜನೆಗೆ ಅಡಿಗಲ್ಲು ಹಾಕಿದ್ದರು. 2022ರ ಮೇ ತಿಂಗಳಲ್ಲಿ ಟೋಕಿಯೋದಲ್ಲಿ ಇಬ್ಬರೂ ಭೇಟಿಯಾದಾಗ ಈ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು. ಎರಡೂ ದೇಶಗಳ ಸರ್ಕಾರ, ವ್ಯವಹಾರ, ಶಿಕ್ಷಣ ಸಂಸ್ಥೆಗಳ ನಡುವಿನ ತಂತ್ರಜ್ಞಾನ, ಔದ್ಯಮಿಕ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿನ ಸಹಕಾರ ಹೆಚ್ಚಿಸುವ ನಿರ್ಧಾರ ಆ ಭೇಟಿ ವೇಳೆ ಮಾಡಿದ್ದರು. ಇದೀಗ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈ ಮಹತ್ವಾಕಾಂಕ್ಷಿ ಯೋಜನೆ ಕಾರ್ಯರೂಪಕ್ಕೆ ಬರುವ ಕಡೆ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: Ajit Doval: ಭಾರತಕ್ಕೆ ರಷ್ಯಾ, ಚೀನಾ ಸಹವಾಸ ತಪ್ಪಿಸಲು ಅಮೆರಿಕ ಪ್ಲಾನ್; ಅಜಿತ್ ದೋವಲ್ ಅಮೆರಿಕ ಭೇಟಿಗೆ ವಿಶೇಷತೆ ಇದೆ

ಇದೇ ವೇಳೆ, ಚೀನಾ ಮತ್ತು ರಷ್ಯಾದ ಶಕ್ತಿಯನ್ನು ಕುಂದಿಸಲು ಅಮೆರಿಕ ಐಸಿಇಟಿ ಮೂಲಕ ಭಾರತವನ್ನು ಬಳಸಿಕೊಳ್ಳುತ್ತಿದೆ. ರಷ್ಯಾದ ಮೇಲಿನ ಅವಲಂಬನೆಯಿಂದ ಭಾರತವನ್ನು ವಿಮುಕ್ತಿಗಿಳಿಸಿ ಅಮೆರಿಕದತ್ತ ಸಂಪೂರ್ಣ ಎಳೆದುಕೊಳ್ಳುವ ಕಾರ್ಯತಂತ್ರ ಈ ಯೋಜನೆ ಹಿಂದಿದೆ ಎಂಬ ಅನಿಸಿಕೆಗಳು ಕೆಲ ವಲಯಗಳಲ್ಲಿ ಕೇಳಿಬಂದಿದೆ. ಆದರೆ, ವೈಟ್ ಹೌಸ್ ವಕ್ತಾರೆ ಕೆರಿನ್ ಜೀನ್ ಪಿಯೆರೆ ಈ ಅನಿಸಿಕೆಯನ್ನು ಬಲವಾಗಿ ತಳ್ಳಿಹಾಕಿದ್ದು, ಭಾರತ ಮತ್ತು ಅಮೆರಿಕ ನಡುವಿನ ಈ ಹೊಸ ಜೊತೆಗಾರಿಕೆಯು ಯಾವುದೇ ಒಂದು ದೇಶವನ್ನು ಗುರಿಯಾಗಿಸಿ ರೂಪಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಐಸಿಇಟಿ ಅಡಿಯಲ್ಲಿ ಭಾರತ ಮತ್ತು ಅಮೆರಿಕ ಮಧ್ಯೆ ಹಲವು ಸ್ತರದಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಯೋಜನೆಗಳು ನಡೆಯುವ ಉದ್ದೇಶ ಇದೆ. ಇದರಲ್ಲಿ ಅಮೆರಿಕದ ಜನರಲ್ ಎಲೆಕ್ಟ್ರಿಕ್​ನ ಜೆಟ್ ಎಂಜಿನ್ ಅನ್ನು ಭಾರತದಲ್ಲೇ ತಯಾರಿಸಲು ತಂತ್ರಜ್ಞಾನ ನೆರವು ಸಮೇತ ಅವಕಾಶ ಕೊಡುವುದೂ ಒಳಗೊಂಡಿದೆ.

Published On - 11:48 am, Thu, 2 February 23