Japan Lunar Lander: ಚಂದ್ರನ ಮೇಲ್ಮೈ ಮೇಲೆ ಇಳಿಯುತ್ತಿದ್ದಂತೆ ಸಂಪರ್ಕ ಕಳೆದುಕೊಂಡ ಜಪಾನ್​ನ ಬಾಹ್ಯಾಕಾಶ ನೌಕೆ

ಭಾರತದ ವಿಕ್ರಮ್ ಲ್ಯಾಂಡರ್​ನಂತಹ ಅಪಘಾತವನ್ನು ಜಪಾನ್ ಕೂಡ ಎದುರಿಸಿದೆ. ತನ್ನ ಲ್ಯಾಂಡರ್​ ಅನ್ನು ಚಂದ್ರನ ಮೇಲೆ ಇಳಿಸುವ ಕನಸು ಕನಸಾಗಿಯೇ ಉಳಿದಿದೆ. ವಾಸ್ತವವಾಗಿ, ಜಪಾನ್​ನ ಖಾಸಗಿ ಕಂಪನಿ ISpace Inc.ನ ಲ್ಯಾಂಡರ್​ ಚಂದ್ರನತ್ತ ಹೊರಟಿತ್ತು.

Japan Lunar Lander: ಚಂದ್ರನ ಮೇಲ್ಮೈ ಮೇಲೆ ಇಳಿಯುತ್ತಿದ್ದಂತೆ ಸಂಪರ್ಕ ಕಳೆದುಕೊಂಡ ಜಪಾನ್​ನ ಬಾಹ್ಯಾಕಾಶ ನೌಕೆ
ಜಪಾನ್ ಲ್ಯಾಂಡರ್
Follow us
ನಯನಾ ರಾಜೀವ್
|

Updated on: Apr 26, 2023 | 9:25 AM

ಭಾರತದ ವಿಕ್ರಮ್ ಲ್ಯಾಂಡರ್​ನಂತಹ ಅಪಘಾತವನ್ನು ಜಪಾನ್ ಕೂಡ ಎದುರಿಸಿದೆ. ತನ್ನ ಲ್ಯಾಂಡರ್​ ಅನ್ನು ಚಂದ್ರನ ಮೇಲೆ ಇಳಿಸುವ ಕನಸು ಕನಸಾಗಿಯೇ ಉಳಿದಿದೆ. ವಾಸ್ತವವಾಗಿ, ಜಪಾನ್​ನ ಖಾಸಗಿ ಕಂಪನಿ ISpace Inc.ನ ಲ್ಯಾಂಡರ್​ ಚಂದ್ರನತ್ತ ಹೊರಟಿತ್ತು. ಮೊದಲ ಬಾರಿಗೆ ದೇಶದ ಖಾಸಗಿ ಕಂಪನಿಯ ನೌಕೆಯು ಚಂದ್ರನ ಮೇಲ್ಮೈಗೆ ಇಳಿಯಲಿದೆ ಎಂದು ಹೇಳಲಾಗಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಲ್ಯಾಂಡರ್​ನೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಲ್ಯಾಂಡರ್‌ನ ಹೆಸರು ಹಕುಟೊ-ಆರ್ ಮಿಷನ್ 1 (ಹಕುಟೊ-ಆರ್ ಮಿಷನ್ 1 ಎಂ1).ಜಪಾನ್ ಕಂಪನಿಯ ಈ ಉಪಗ್ರಹವನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಫ್ಲೋರಿಡಾದ ಕೇಪ್ ಕೆನಾವೆರಲ್‌ನಿಂದ ಸ್ಪೇಸ್‌ಎಕ್ಸ್ ರಾಕೆಟ್‌ನೊಂದಿಗೆ ಉಡಾವಣೆ ಮಾಡಲಾಗಿತ್ತು.

ಸಂವಹನ ಸ್ಥಗಿತಗೊಂಡ ನಂತರ, ನಮ್ಮ ಸಂಪರ್ಕ ಕಳೆದುಹೋಗಿದೆ ಎಂದು ಹೇಳಿದರು. ನೌಕರ ಮತ್ತೆ ಸಂಪರ್ಕಕ್ಕೆ ಬರಬಹುದು ಎಂದು ಅಂದಾಜಿಸಲಾಗಿತ್ತು ಆದರೆ ನಾವಂದುಕೊಂಡಂತೆ ಆಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ನಾವು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಸಾಧ್ಯವಾಗಲಿಲ್ಲ ಮತ್ತು ನಮ್ಮ ಕಾರ್ಯಾಚರಣೆಯು ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ.

ಮತ್ತಷ್ಟು ಓದಿ: Chandrayaan-3: 2023ರ ಜೂನ್​ನಲ್ಲಿ ಚಂದ್ರಯಾನ-3 ಉಡಾವಣೆ: ಇಸ್ರೋ

ಈ ವಾಹನವು ಗಂಟೆಗೆ 6000 ಕಿಲೋಮೀಟರ್ ವೇಗದಲ್ಲಿ ಚಂದ್ರನ ಮೇಲ್ಮೈಯಿಂದ 100 ಕಿಲೋಮೀಟರ್ ಎತ್ತರದಲ್ಲಿ ಚಲಿಸುತ್ತಿತ್ತು. ಚಂದ್ರನ ಗುರುತ್ವಾಕರ್ಷಣೆ ಬಲವು ಅದನ್ನು ಎಳೆಯಲು ಪ್ರಾರಂಭಿಸಿದಾಗ ಕ್ರಮೇಣ ಅದರ ವೇಗ ಕಡಿಮೆಯಾಯಿತು. ಹಕುಟೊ-ಆರ್ ಮಿಷನ್ ಚಂದ್ರನ ಉತ್ತರ ಗೋಳಾರ್ಧದಲ್ಲಿ ಮೇರ್ ಫ್ರಿಗೋರಿಸ್ ಬಳಿ ಇಳಿಯಬೇಕಿತ್ತು.

ಸೋವಿಯತ್ ಒಕ್ಕೂಟ ಮತ್ತು ಚೀನಾ ಮಾತ್ರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿವೆ. ಅದೇ ಸಮಯದಲ್ಲಿ, ಭಾರತ ಮತ್ತು ಇಸ್ರೇಲ್‌ನಂತಹ ದೇಶಗಳು ಸಹ ಚಂದ್ರನ ಮೇಲೆ ಇಳಿಯಲು ವಿಫಲವಾಗಿವೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ರೀತಿಯ ಮಾನವ ರಹಿತ ಮಿಷನ್ ಯೋಜನೆಯನ್ನು 2018ರಲ್ಲೇ ಹಾಕಿಕೊಂಡಿತ್ತು, ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯ ಲ್ಯಾಂಡಿಂಗ್ ಆಗುವ ಯೋಜನೆಗೆ ಅಗತ್ಯ ಪ್ರಮಾಣದ ಹಣಕಾಸು ದೊರೆಯದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ರದ್ದುಗೊಳಿಸಲಾಗಿತ್ತು.

ಯೋಜನೆಯ ಹಂತದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯ ಇಳಿಕೆ ಅಸಾಧ್ಯ ಎಂಬಂತಹ ವರದಿಯನ್ನು ತಯಾರಿಸಲಾಗಿತ್ತು.ಚಂದ್ರನ ದಕ್ಷಿಣ ಧ್ರುವದಲ್ಲಿ ವಾತವಾರಣ ಸಂಕೀರ್ಣತೆಯಿಂದ ಕೂಡಿದ್ದು, ಕಣಗಳು ಹಾಗೂ ವಿಕಿರಣತೆಗಳು ಚಂದ್ರನ ಮೇಲಿನ ಧೂಳನ್ನು ಸಂಪರ್ಕಿಸುತ್ತವೆ. ಇದರಿಂದಾಗಿ ಅಪಾಯವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಚಂದ್ರನಲ್ಲಿನ ಧೂಳು ಉಪಕರಣಗಳ ಮೇಲೆ ಅಂಟಿಕೊಂಡು ಯಂತ್ರೋಪಕರಣಗಳಿಗೆ ಹಾನಿಯಾಗಲಿದೆ. ಸೌರ ಫಲಕ ಹಾಗೂ ಇನ್ನಿತರ ಮೇಲ್ಮೈಗಳ ದಕ್ಷತೆ ಕ್ಷೀಣಿಸಲಿದೆ. ಬಾಹ್ಯಾಕಾಶ ನೌಕೆ ಇಳಿಯುವಾಗ ಸೌರ ಶಕ್ತಿ ಉತ್ಪಾದನೆ ಬಂದ್ ಆಗದಂತೆ ಹದ್ದಿನ ಕಣ್ಣಿಡಬೇಕಾಗುತ್ತದೆ ಎಂದು ತಿಳಿಸಲಾಗಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ