AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯಂತೆ ಕಾಣಲು 12 ಲಕ್ಷ ರೂ. ಖರ್ಚು ಮಾಡಿದ್ದ ವ್ಯಕ್ತಿಗೆ ಈಗ ಪಾಂಡ ಆಗುವ ಆಸೆಯಂತೆ!

ಜಪಾನ್​ನ ಟೊಕೊ ಎಂಬ ವ್ಯಕ್ತಿ ತಾನು ನಾಯಿಯಂತೆ ಕಾಣಲು ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿ ಕಾಸ್ಟ್ಯೂಮ್ ತಯಾರಿಸಿ ಎಲ್ಲೆಡೆ ಸುದ್ದಿಯಾಗಿದ್ದರು. ಆದರೆ ಇದೀಗ ಅವರಿಗೆ ಪಾಂಡ ಅಥವಾ ಬೆಕ್ಕಾಗುವ ಕನಸಿದೆಯಂತೆ.

ನಾಯಿಯಂತೆ ಕಾಣಲು 12 ಲಕ್ಷ ರೂ. ಖರ್ಚು ಮಾಡಿದ್ದ ವ್ಯಕ್ತಿಗೆ ಈಗ ಪಾಂಡ ಆಗುವ ಆಸೆಯಂತೆ!
ನಯನಾ ರಾಜೀವ್
|

Updated on: May 24, 2024 | 8:57 AM

Share

ನಾಯಿಯಂತೆ ಕಾಣಲು ಬರೋಬ್ಬರಿ 12 ಲಕ್ಷ ರೂ. ಖರ್ಚು ಮಾಡಿದ್ದ ಜಪಾನ್(Japan)​ ವ್ಯಕ್ತಿಗೆ ಈಗ ಪಾಂಡ ಅಥವಾ ಬೆಕ್ಕಾಗುವ ಆಸೆಯಂತೆ. ಸಾಕು ಪ್ರಾಣಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮನುಷ್ಯರಿಗಿಂತಲೂ ಪ್ರಾಣಿಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ, ತಮ್ಮ ಮುದ್ದು ಪ್ರಾಣಿಗಳಿಗಾಗಿ ಜನ ಏನೆಲ್ಲಾ ಮಾಡುತ್ತಾರೆ ಎಂದು ನಾವು ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ. ಅವುಗಳ ಆಹಾರ ನಿರ್ವಹಣೆಗಾಗಿಯೇ ಜನ ಲಕ್ಷಾಂತರ ರೂ ವ್ಯಯಿಸುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.

ಆದರೆ ಈ ವ್ಯಕ್ತಿ ಖುದ್ದಾಗಿ ನಾಯಿಯಂತೆ ಕಾಣಲು 12 ಲಕ್ಷ ರೂ. ವ್ಯಯಿಸಿದ್ದರು. ಟೊಕೊ ಎಂಬಾತನ ಈ ನಾಯಿ ಕಾಸ್ಟ್ಯೂಮ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಟೊಕೊ ಯಾವಾಗಲೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಈ ಬಟ್ಟೆಗಳಲ್ಲಿ ಈ ಮನುಷ್ಯ ಸೇಮ್​ ನಾಯಿಯಂತೆ ಕಾಣುತ್ತಾರೆ. ಇವರನ್ನು ನೋಡಿದರೆ ನಾಯಿಯಲ್ಲ ಮನುಷ್ಯ ಎಂದು ಯಾರೂ ನಂಬಲು ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ನಾಯಿ ಕಾಸ್ಟ್ಯೂಮ್ ನೈಜವಾಗಿದೆ.

ಮತ್ತಷ್ಟು ಓದಿ: ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ

ಟೊಕೊ ಪ್ರಕಾರ, ಅವರು ಬಾಲ್ಯದಿಂದಲೂ ಪ್ರಾಣಿಗಳಂತೆ ಬದುಕಲು ಬಯಸಿದ್ದರು. ಇವರಿಗೆ ನಾಯಿಗಳ ಮೇಲೆ ವಿಶೇಷ ಪ್ರೀತಿ ಇತ್ತು. ಹಾಗಾಗಿ ನಾವು ನಾಯಿಗಳಂತೆ ಬದುಕಬೇಕೆಂದು ಅವರು ಬಯಸಿದ್ದರು.

ಇದೀಗ ಅವರಿಗೆ ಪಾಂಡ ಆಗಬೇಕೆಂದೆನಿಸುತ್ತಿದೆಯಂತೆ, ಹಾಗಾಗಿ ಅವರು ಆದಷ್ಟು ಬೇಗ ಬೆಕ್ಕು ಅಥವಾ ಪಾಂಡಾ ರೀತಿ ಕಾಸ್ಟ್ಯೂಮ್​ ಸಿದ್ಧಪಡಿಸಲಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, ವ್ಯಕ್ತಿ ನಾಯಿಯಂತೆ ನಡೆಯುವ ಹಲವಾರು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾನೆ. ಸಾವಿರಾರು ವೀಕ್ಷಣೆಗಳನ್ನು ಗಳಿಸಿರುವ ಈ ವೀಡಿಯೊಗಳಲ್ಲಿ, ಈ ಟೊಕೋ ನಾಯಿ ಧಿರಿಸು ಧರಿಸಿ ಹುಲ್ಲುಹಾಸಿನ ಮೇಲೆ ಕುಣಿದು ಕುಪ್ಪಳಿಸುವುದು, ನೆಲದ ಮೇಲೆ ಉರುಳಾಡುವುದು ಮತ್ತು ನಾಯಿಯಂತೆ ಆಟವಾಡುವುದನ್ನು ನೋಡಬಹುದಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್