AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಉಗ್ರರಿಗೆ ಶುರುವಾಯ್ತು ನಡುಕ: ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ

ಲಾಹೋರ್​​ನಲ್ಲಿ ಲಷ್ಕರ್ ಎ ತೊಯ್ಬಾದ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಯಾವಾಗಲೂ ಪಾಕಿಸ್ತಾನದ ಭದ್ರತಾ ಸಂಸ್ಥೆಗಳ ಕಣ್ಗಾವಲಿನಲ್ಲಿರುತ್ತಿದ್ದ ಹಮ್ಜಾನನ್ನು ಗುರಿಯಾಗಿಸಿಕೊಂಡು ಬಂದೂಕುಧಾರಿಗಳು ಹೊಂಚು ಹಾಕಿದ್ದರು. ಲಾಹೋರ್‌ನ ರಸ್ತೆಯಲ್ಲಿ ಆತ ಸಾಗುತ್ತಿದ್ದಾಗ ಹಠಾತ್ ದಾಳಿ ನಡೆಸಿದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಹಮ್ಜಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಆತನ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.

ಪಾಕಿಸ್ತಾನದಲ್ಲಿ ಉಗ್ರರಿಗೆ ಶುರುವಾಯ್ತು ನಡುಕ: ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುಂಡಿನ ದಾಳಿ
ಹಂಜಾImage Credit source: India TV
ನಯನಾ ರಾಜೀವ್
|

Updated on: Apr 16, 2026 | 1:46 PM

Share

ಲಾಹೋರ್, ಏಪ್ರಿಲ್ 16: ಲಾಹೋರ್(Lahore)​​ನಲ್ಲಿ ಲಷ್ಕರ್- ಎ- ತೊಯ್ಬಾದ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಯಾವಾಗಲೂ ಪಾಕಿಸ್ತಾನದ ಭದ್ರತಾ ಸಂಸ್ಥೆಗಳ ಕಣ್ಗಾವಲಿನಲ್ಲಿರುತ್ತಿದ್ದ ಹಮ್ಜಾನನ್ನು ಗುರಿಯಾಗಿಸಿಕೊಂಡು ಬಂದೂಕುಧಾರಿಗಳು ಹೊಂಚು ಹಾಕಿದ್ದರು. ಲಾಹೋರ್‌ನ ರಸ್ತೆಯಲ್ಲಿ ಆತ ಸಾಗುತ್ತಿದ್ದಾಗ ಹಠಾತ್ ದಾಳಿ ನಡೆಸಿದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಹಮ್ಜಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಆತನ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.

ಯಾರು ಈ ಅಮೀರ್ ಹಮ್ಜಾ? ಭಯೋತ್ಪಾದಕ ಜಗತ್ತಿನಲ್ಲಿ ಹಮ್ಜಾ ಕೇವಲ ಉಗ್ರನಲ್ಲ, ಬದಲಿಗೆ ಆತ ಲಷ್ಕರ್ ಸಂಘಟನೆಯ ಸೈದ್ಧಾಂತಿಕ ಪ್ರಚಾರಕ. ಹಾಫೀಜ್ ಸಯೀದ್ ನಂತರ ಲಷ್ಕರ್ ಸಂಘಟನೆಯಲ್ಲಿ ಎರಡನೇ ಅತಿದೊಡ್ಡ ನಾಯಕ ಎಂದು ಈತನನ್ನು ಪರಿಗಣಿಸಲಾಗುತ್ತದೆ.

ಈತ ತನ್ನ ಉದ್ರಿಕ್ತ ಭಾಷಣಗಳಿಂದ ಯುವಕರನ್ನು ಉಗ್ರರನ್ನಾಗಿ ಮಾಡುತ್ತಿದ್ದ. ಉಗ್ರಗಾಮಿ ಸಿದ್ಧಾಂತದ ಮೇಲೆ ಹಲವು ಪುಸ್ತಕಗಳನ್ನು ಬರೆದಿದ್ದಾನೆ ಮತ್ತು ಲಷ್ಕರ್‌ನ ಅಧಿಕೃತ ಪತ್ರಿಕೆಯ ಸಂಪಾದಕನೂ ಆಗಿದ್ದಾನೆ. ಲಷ್ಕರ್ ಸಂಘಟನೆಗೆ ಕೋಟ್ಯಂತರ ರೂಪಾಯಿ ನಿಧಿ ಸಂಗ್ರಹಿಸುತ್ತಿದ್ದ ಕಾರಣಕ್ಕೆ ಅಮೆರಿಕ ಈತನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಪಟ್ಟಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸಲು ಈತ ‘ಜೈಶ್-ಎ-ಮನ್‌ಕಾಫಾ’ ಎಂಬ ಹೊಸ ಸಂಘಟನೆಯನ್ನು ಹುಟ್ಟುಹಾಕಿದ್ದ.

ಮತ್ತಷ್ಟು ಓದಿ: ಆಶಾ ಭೋಸ್ಲೆ ಹಾಡು ಪ್ರಸಾರ ಮಾಡಿದ ಪಾಕ್ ಟಿವಿಗೆ ನೊಟೀಸ್, ಆದರೆ…

ದಾಳಿಕೋರರ ಭಯ ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರು ಒಬ್ಬೊಬ್ಬರಾಗಿ ಹತ್ಯೆಯಾಗುತ್ತಿದ್ದಾರೆ ಅಥವಾ ಅವರ ಮೇಲೆ ದಾಳಿ ನಡೆಯುತ್ತಿದೆ. ಈ ಬಾರಿಯೂ ಅಪರಿಚಿತ ವ್ಯಕ್ತಿಗಳು ಅತ್ಯಂತ ಯೋಜಿತವಾಗಿ ಹಮ್ಜಾನನ್ನು ಗುರಿಯಾಗಿಸಿಕೊಂಡಿರುವುದು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ (ISI)ಗೆ ನಡುಕ ಹುಟ್ಟಿಸಿದೆ.

ದಾಳಿಯ ನಂತರ ಲಾಹೋರ್‌ನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದರೂ, ದಾಳಿಕೋರರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹಮ್ಜಾ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದು, ಇದು ಲಷ್ಕರ್ ಸಂಘಟನೆಗೆ ಬಿದ್ದ ದೊಡ್ಡ ಹೊಡೆತವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More