AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ, ಶಿಕ್ಷಣ, ಹಕ್ಕುಗಳಿಗಾಗಿ ಹೋರಾಟ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ, 18 ಮಂದಿ ಸಾವು

ಪಾಕ್ ಆಕ್ರಮಿತ ಕಾಶ್ಮೀರದ (PoK) ರಾವಲಕೋಟ್‌ನಲ್ಲಿ ಮೂಲಭೂತ ಹಕ್ಕುಗಳು, ಆಹಾರ ಮತ್ತು ಶಿಕ್ಷಣಕ್ಕಾಗಿ ತಿಂಗಳುಗಳಿಂದ ನಡೆಯುತ್ತಿದ್ದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿವೆ. ಭದ್ರತಾ ಪಡೆಗಳ ಕಾರ್ಯಾಚರಣೆಯಿಂದ ಉಂಟಾದ ಘರ್ಷಣೆಯಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಾಕ್ ಸರ್ಕಾರದ ದಬ್ಬಾಳಿಕೆ, ಇಂಟರ್ನೆಟ್ ಸ್ಥಗಿತದಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅಂತರರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಬೇಡಿಕೆ ಹೆಚ್ಚಾಗಿದೆ.

ಆಹಾರ, ಶಿಕ್ಷಣ, ಹಕ್ಕುಗಳಿಗಾಗಿ ಹೋರಾಟ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ, 18 ಮಂದಿ ಸಾವು
ಪ್ರತಿಭಟನೆ
ನಯನಾ ರಾಜೀವ್
|

Updated on: Nov 06, 2026 | 7:24 AM

Share

ಇಸ್ಲಾಮಾಬಾದ್, ನವೆಂಬರ್ 06: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲ್​ಕೋಟ್​ನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿವೆ. ಮೂಲಭೂತ ಹಕ್ಕುಗಳು, ರಾಜಕೀಯ ಸುಧಾರಣೆ, ಆಹಾರ ಬೆಲೆ ಇಳಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಿಂಗಳುಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ತೆರವುಗೊಳಿಸಲು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಹಲವರು ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂಬ ವರದಿಗಳಿವೆ. ಆದರೆ ಸಾವಿನ ಸಂಖ್ಯೆಯ ಬಗ್ಗೆ ವಿಭಿನ್ನ ಮಾಹಿತಿ ಹೊರಬರುತ್ತಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್‌ನಲ್ಲಿ ಗುರುವಾರ (ನವೆಂಬರ್ 5) ಬೆಳಗ್ಗೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಐದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ಜಂಟಿ ಅವಾಮಿ ಕ್ರಿಯಾ ಸಮಿತಿ (JAAC) ಸದಸ್ಯರ ಪ್ರತಿಭಟನಾ ಸ್ಥಳಗಳನ್ನು ತೆರವುಗೊಳಿಸಲು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಗುಂಡಿನ ದಾಳಿ ನಡೆದಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾವಲಕೋಟ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ ಎಂಬ ವರದಿಗಳು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ ಈ ಸಂಖ್ಯೆಯನ್ನು ಅಧಿಕೃತವಾಗಿ ದೃಢಪಟ್ಟಿಲ್ಲ.

ಬಸ್ ನಿಲ್ದಾಣದ ಬಳಿ ನಡೆದಿದ್ದೇನು?

ರಾವಲ್​​ಕೋಟ್‌ನ ಮುಖ್ಯ ಬಸ್ ನಿಲ್ದಾಣದ ಸಮೀಪ ಹಲವು ತಿಂಗಳಿಂದ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದರು. ಗುರುವಾರ ಮುಂಜಾನೆ ಭದ್ರತಾ ಪಡೆಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ರಸ್ತೆ ತಡೆಗಳನ್ನು ತೆರವುಗೊಳಿಸಲು ಮುಂದಾದವು. ಈ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಉಂಟಾಯಿತು. ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದವು ಎಂದು ಜಂಟಿ ಅವಾಮಿ ಕ್ರಿಯಾ ಸಮಿತಿಯ ನಾಯಕರು ಆರೋಪಿಸಿದ್ದಾರೆ. ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ ಮತ್ತು RPG-7 ರಾಕೆಟ್‌ಗಳನ್ನು ಬಳಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ಇದನ್ನೂ ಓದಿ: ‘ಕಾಶ್ಮೀರಿಗಳಿಗೆ ಪಾಕಿಸ್ತಾನದ ರಕ್ಷಣೆ, ಕೇಂದ್ರ ಸರ್ಕಾರ ಮೌನ’: ತೀವ್ರ ವಿವಾದಕ್ಕೆ ಗುರಿಯಾದ ಫಾರೂಕ್ ಅಬ್ದುಲ್ಲಾ ಹೇಳಿಕೆ

ಪ್ರತಿಭಟನಾಕಾರರ ನಾಯಕ ಉಮರ್ ನಜೀರ್ ಅವರು ರಾಕೆಟ್‌ನ ತುಣುಕನ್ನು ಪ್ರದರ್ಶಿಸಿ, ಭದ್ರತಾ ಪಡೆಗಳು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿವೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಸ್ವತಂತ್ರವಾಗಿ ದೃಢಪಡಿಸುವ ಮಾಹಿತಿ ಲಭ್ಯವಿಲ್ಲ.

ಏನಿದು ಜಂಟಿ ಅವಾಮಿ ಕ್ರಿಯಾ ಸಮಿತಿ?

ಜಂಟಿ ಅವಾಮಿ ಕ್ರಿಯಾ ಸಮಿತಿ (JAAC) ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಸಂಘಟನೆ. ಆಹಾರ ಪದಾರ್ಥಗಳ ಬೆಲೆ ಏರಿಕೆ, ವಿದ್ಯುತ್ ದರ, ರಾಜಕೀಯ ಹಕ್ಕುಗಳು ಮತ್ತು ಆಡಳಿತಾತ್ಮಕ ಸುಧಾರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಮಿತಿ ಪ್ರತಿಭಟನೆಗಳನ್ನು ಸಂಘಟಿಸಿದೆ. ಈ ಹಿಂದೆ ಸ್ಥಳೀಯ ವಿಧಾನಸಭೆಯಲ್ಲಿ ಪಾಕಿಸ್ತಾನದ ಇತರ ಭಾಗಗಳಿಂದ ಬಂದ ನಿರಾಶ್ರಿತರಿಗೆ ಮೀಸಲಿಟ್ಟಿರುವ 12 ಸ್ಥಾನಗಳನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯನ್ನೂ ಸಮಿತಿ ಮುಂದಿಟ್ಟಿತ್ತು. ಈ ಸ್ಥಾನಗಳಿಂದ ಸ್ಥಳೀಯ ಜನರ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸಮಿತಿಯ ವಾದವಾಗಿದೆ.

ಐದು ತಿಂಗಳಿಂದ ನಡೆಯುತ್ತಿದ್ದ ಪ್ರತಿಭಟನೆ

ಈ ವರ್ಷದ ಜೂನ್‌ನಿಂದ ರಾವಲಕೋಟ್ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಮಿತಿಯ ನಾಯಕರ ಬಂಧನ, ಸಂಘಟನೆಯ ಮೇಲಿನ ನಿಷೇಧ ಮತ್ತು ಪ್ರತಿಭಟನಾ ಸ್ಥಳಗಳ ತೆರವು ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ವರದಿಯಾಗಿದೆ. ಇದರಿಂದ ಸ್ಥಳೀಯ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.

ಇಂಟರ್ನೆಟ್ ಮತ್ತು ದೂರವಾಣಿ ಸೇವೆ ಸ್ಥಗಿತ?

ರಾವಲ್ ಕೋಟ್‌ನ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಮತ್ತು ದೂರವಾಣಿ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಇದರಿಂದ ಪ್ರತಿಭಟನೆಯ ಸ್ಥಳದಲ್ಲಿನ ನೈಜ ಪರಿಸ್ಥಿತಿ ಮತ್ತು ಸಾವು-ನೋವಿನ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸುವುದು ಕಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನಾಕಾರರು ಹಂಚಿಕೊಳ್ಳುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳ ಬಗ್ಗೆ ವಿವಿಧ ರೀತಿಯ ಹೇಳಿಕೆಗಳು ಹರಿದಾಡುತ್ತಿವೆ. ಆದರೆ ಅವುಗಳ ನಿಖರತೆ ಮತ್ತು ಹಿನ್ನೆಲೆಯನ್ನು ಪರಿಶೀಲಿಸುವುದು ಅಗತ್ಯ.

ಪಾಕಿಸ್ತಾನ ಸರ್ಕಾರದ ವಿರುದ್ಧ ಅಂತಾರಾಷ್ಟ್ರೀಯ ಕ್ರಮಕ್ಕೆ ಒತ್ತಾಯ

ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡಲಾಗಿದೆ ಎಂದು ಆರೋಪಿಸಿರುವ JAAC ನಾಯಕರು, ವಿಶ್ವಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ನಾಗರಿಕರ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ನಡೆದ ಘಟನೆಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪೊಲೀಸರು ಪ್ರತಿಭಟನಾಕಾರರೇ ಮೊದಲು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಘರ್ಷಣೆಗೆ ಯಾರು ಕಾರಣ ಎಂಬುದರ ಬಗ್ಗೆಯೂ ಎರಡೂ ಕಡೆಯಿಂದ ವಿಭಿನ್ನ ಹೇಳಿಕೆಗಳು ಹೊರಬರುತ್ತಿವೆ.

ರಾವಲಕೋಟ್‌ನಲ್ಲಿನ ಘಟನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಲವು ತಿಂಗಳಿಂದ ಕುದಿಯುತ್ತಿದ್ದ ಅಸಮಾಧಾನ ಮತ್ತಷ್ಟು ತೀವ್ರಗೊಂಡಿರುವುದನ್ನು ತೋರಿಸುತ್ತದೆ. ಜನರ ರಾಜಕೀಯ ಮತ್ತು ಆರ್ಥಿಕ ಬೇಡಿಕೆಗಳು, ಸರ್ಕಾರದ ಕ್ರಮಗಳು ಹಾಗೂ ಭದ್ರತಾ ಪಡೆಗಳೊಂದಿಗಿನ ಘರ್ಷಣೆ ಪರಿಸ್ಥಿತಿಯನ್ನು ಗಂಭೀರಗೊಳಿಸಿವೆ. ಆದರೆ ಸಾವಿನ ಸಂಖ್ಯೆ, ಮಕ್ಕಳ ಸಾವು ಮತ್ತು ಡ್ರೋನ್ ದಾಳಿಯ ಆರೋಪಗಳ ಬಗ್ಗೆ ಇನ್ನೂ ಸ್ವತಂತ್ರ ದೃಢೀಕರಣ ಅಗತ್ಯವಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಸಿಎಂ ಫಡ್ನವೀಸ್ ನೇತೃತ್ವದಲ್ಲಿ ಲೋಕತಂತ್ರ ಬಚಾವೋ, ಅರಾಜಕತಾ ಹಠಾವೋ ರ್‍ಯಾಲಿ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ಬಾಗಲಕೋಟೆಯಲ್ಲಿ ಬಡವರ ಸ್ವಂತ ಮನೆಯ ಕನಸು ಭಗ್ನ
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ತಾಲೂಕು, ಜಿಲ್ಲಾ ಪಂಚಾಯ್ತಿ ಎಲೆಕ್ಷನ್: ಗೊಂದಲಕ್ಕೆ ಸಿಲುಕಿದ ರಾಜ್ಯ ಸರ್ಕಾರ!
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟ ವಾಪಸ್: 3,600 ದರಕ್ಕೆ ತೃಪ್ತಿಪಟ್ಟ ರೈತರು
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಚಿಕ್ಕಮಗಳೂರು: ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ಅಸ್ಸಾಂ ಗ್ಯಾಂಗ್ ಲಾಕ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
ಹುಬ್ಬಳ್ಳಿ-ಧಾರವಾಡ ಪೊಲೀಸರ ಬಿಗ್ ಆಪರೇಷನ್
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್